For the best experience, open
https://m.suddione.com
on your mobile browser.
Advertisement

ಬೆಂಗಳೂರಿನಲ್ಲಿ ಜುಲೈ 18ಕ್ಕೆ ಭೋವಿ ಜನೋತ್ಸವ | ಅದ್ದೂರಿಯಾಗಿ ನಡೆಸಲು ತೀರ್ಮಾನ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

07:55 PM Jun 20, 2024 IST | suddionenews
ಬೆಂಗಳೂರಿನಲ್ಲಿ ಜುಲೈ 18ಕ್ಕೆ ಭೋವಿ ಜನೋತ್ಸವ   ಅದ್ದೂರಿಯಾಗಿ ನಡೆಸಲು ತೀರ್ಮಾನ   ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Advertisement

ಬೆಂಗಳೂರು : ಜುಲೈ 18 ರಂದು ಚಿತ್ರದುರ್ಗದ ಭೋವಿ ಗುರುಪೀಠ ವು ಪ್ರತಿ ವರ್ಷದಂತೆ ನಡೆಸುವ ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಗುರುಗಳ ಹುಟ್ಟು ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದ  ಕುರಿತು  ಜೂ. 20 ರಂದು ಗುರುವಾರ ಬೆಂಗಳೂರಿನ‌ ಜಸ್ಮಾ ಭವನದಲ್ಲಿ‌  ಪೂರ್ವ ಭಾವಿ ಸಭೆ ನಡೆಯಿತು.

Advertisement

ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಈ ಸಭೆಯಲ್ಲಿ‌ ಸಮಾಜದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು. ಜುಲೈ 18 ರಂದು ನಡೆಯು  ಭೋವಿ ಜನೋತ್ಸವ  ಕಾರ್ಯಕ್ರಮ‌ ನಡೆಯುವ ಕುರಿತು ಸಲಹೆ ನೀಡಿದರು.‌

Advertisement

ಸಮಾಜದ ಸಂಘಟನೆಯ ದೃಷ್ಟಿಯಿಂದ ಭೋವಿ ಜನೋತ್ಸವವನ್ನು ಅದ್ದೂರಿಯಾಗಿ ನಡೆಸಬೇಕು, ನೂತನವಾಗಿ ಆಯ್ಕೆಗೊಂಡ ಸಂಸದರ, ನಿಗಮ ಮಂಡಳಿ ಅಧ್ಯಕ್ಷರ ಗೌರವ ಸಮರ್ಪಣೆ  ಮತ್ತು ನೂತನವಾಗಿ ಯು ಪಿ ಎಸ್ ಸಿ  ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭದ ನಿಮಿತ್ಯ ಭೋವಿ ಜನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಅದಕ್ಕೆ ಸಮಾಜದ ಜನರನ್ನು ಸಮಗ್ರವಾಗಿ ತೊಡಗಿಸಿಕೊಳ್ಳಬೇಕೆಂದು ಸಭೆಯು ಸಲಹೆ‌ ನೀಡಿತು.

Advertisement

ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಣರೂ ಹಾಗೂ ಶಿವಮೊಗ್ಗ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷರೂ ಆದ ಎಸ್. ರವಿಕುಮಾರ್ ಮಾತನಾಡಿ, ಇವತ್ತು ಇಲ್ಲಿ ಸಭೆ ಕರೆದಿರುವುದರ ಉದ್ದೇಶ ಇಷ್ಟೆ. ಸಮಾಜದ ಎಳಿಗೆಗೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ.‌ ಸಮಾಜದ ಸಂಘಟನೆ ಇಂದು ತುರ್ತಾಗಿದೆ. ಕಾರಣ ಇತ್ತೀಚೆಗಷ್ಟೇ ನಡೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಎಲ್ಲಾ ಪಕ್ಷಗಳು‌ ಸಮಾಜವನ್ನು ತುಂಬಾ ಕಡೆಗಣಿಸಿವೆ. ಹಾಗಾಗಿ ಸಮಾಜದ ಸಂಘಟನೆ ತುಂಬಾ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಭೋವಿ ಜನೋತ್ಸವ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ , ಸಾಧ್ಯವಾದರೆ ಮುಂದೆ ಬೆಂಗಳೂರು ಅರಮನೆ ಅವರಣದಲ್ಲಿ ಕಾರ್ಯಕ್ರಮ‌ನಡೆಸಲು ಚಿಂತನೆ ನಡೆಯಬೇಕಿದೆ ಎಂದರು.

Advertisement
Advertisement

ಸಮಾಜದ ಮುಖಂಡರು ಹಾಗೂ ನಾಡಿನ ಹೆಸರಾಂತ ವಕೀಲರಾದ ಶಂಕರಪ್ಪ ಮಾತನಾಡಿ, ಭೋವಿ ಸಮಾಜಕ್ಕೆ ಮೀಸಲಾತಿ ತಪ್ಪಿಸಲು ನಡೆದ ಕಾನೂನು ಹೋರಾಟ ಮತ್ತು ಭೋವಿ ಅವರಿಗೆ ಮೀಸಲು ನೀಡಬರದೆಂದು‌ನಡೆದ ಪಿತೂರಿಯನ್ನು ಸಭೆಯಲ್ಲಿ ವಿವರಿಸಿದರಲ್ಲದೆ, ಇಂತಹ ಪಿತೂರಿಗಳಿಗೆ ಈಗ ಕಾನೂನಿ‌ನಲ್ಲಿಯೇ ಹಿನ್ನಡೆಯಾಗಿದೆ. ಅದೃಷ್ಟಾವಶಾತ್ ನಾವೀಗ ನೆಮ್ಮದಿಯಿಂದ ಇರಬೇಕಿದೆಯಾದರೂ‌ ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದರು.

ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಸೀತರಾಮ್ ಮಾತನಾಡಿ, ನಮ್ಮ ಸಮಾಜದ‌ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳು ಅಷ್ಟೇಲು ಬದಲಾಗಿಲ್ಲ. ಶೇ.80 ರಷ್ಟು ಜನರು ಪಟ್ಟಣ ನೋಡಿಲ್ಲ. ಅವರನ್ನು ಸಕಲ ರೀತಿಯಲ್ಲೂ ಮುಖ್ಯವಾಹಿನಿಗೆ ತರವುದಕ್ಕಾಗಿ ನಾವು ಸಂಘಟಿತರಾಗಬೇಕಿದೆ . ಶಿಕ್ಣಣ ಇಲ್ಲದಿರವುದು ಕೂಡ ನಮ್ಮ ಸಮಾಜದ ಇನ್ನು ಹಿಂದುಳಿದಿರುವುದಕ್ಕೆ ಕಾರಣವಾಗಿದೆ. ಅದೆಲ್ಲ ಸರಿಯಾಗಬೇಕಾದರೆ ನಮ್ಮ‌ಕುಲಕಸುಬಿಗೆ ಆರ್ಥಿಕ ನೆರವು ಸಿಗಬೇಕಿದೆ.‌ಈ‌ನಿಟ್ಟಿನಲ್ಲಿ ನಾವು ಕೆಲಸ‌ಮಾಡಬೇಕಿದೆ ಎಂದರಲ್ಲದೆ, ಭೋವಿ ಜನೋತ್ಸವವನ್ನು ಎಲ್ಲಿ ನಡೆಸಬೇಕು ಎನ್ನುವುದನ್ನ ಸ್ವಾಮೀಜಿ‌ ನಿರ್ಧಾರ ಮಾಡಿದರೆ ಅದನ್ನು‌ಅದ್ದೂರಿಯಾಗಿ ನಡೆಸಲು‌ ನಾವು ಸಿದ್ದರಿದ್ದೇವೆ. ಉಳ್ಳವರು, ಇಲ್ಲದಿರುವವರನ್ನು ಕರೆತರೋಣ ಎಂದರು.

ಗುಲ್ವರ್ಗಾದ ಸಮಾಜದ ಮುಖಂಡರಾದ ತಿಪ್ಪಣ್ಣ, ಹಿಂದೆಲ್ಲ‌ ಭೋವಿ ಸಮಾಜದ ಮುಖಂಡರು ಸಮಾಜದ ಸಂಘಟಿಸುತ್ತಾ ಬಂದ ಕಾರಣಕ್ಕೆ ಒಂದಷ್ಟು‌ಮಂದಿಗೆ ರಾಜಕೀಯ ಪ್ರಾತ್ಯನಿಧ್ಯ ಸಿಕ್ಕಿವೆ. ಇವತ್ತು‌ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ, ನಾವು ಸಂಘಟಿತ ಶಕ್ತಿಯನ್ನು ಅವಕಾಶ ಕಳೆದುಕೊಂಡಿದ್ದೇವೆ. ಎಂಎಲ್ ಸಿ, ಮಾಡ್ತೀವಿ ಎನ್ನುವ ಭರವಸೆಗಳನ್ನು, ಎಂಪಿ ಮಾಡ್ತೀವಿ ಎನ್ನುವ ಭರವಸೆಗಳನ್ನು ನಾವು ಆಲಿಸುತ್ತಲೇ ಬಂದಿದ್ದೆವೆ. ಆದರೆ ಅವಕಾಶ ಸಿಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿನ ಭಾಗದಲ್ಲಿ ಹೆಚ್ವು ಸಂಖ್ಯೆಯ ಜನರಿದ್ದಾರೆ.ನಿಮ್ಮ‌ಅವಶ್ಯಕತೆ ಇದೆ ಎನ್ನುವ ಭಾವನೆ ಇರಬೇಕಾದರೆ ಸಂಘಟನೆಯ ಶಕ್ತಿ‌ ಹೆಚ್ವಾಗಬೇಕಿದೆ.

ಯಾವುದೇ ಭಾಗದಲ್ಲಾದರೂ ಗುಂಪುಗಾರಿಕೆ ಬಿಟ್ಟು, ಸಂಘಟಿತವಾಗಬೇಕಿದೆ.ಬೇರೆ ಬೇರೆ ಸಣ್ಣ ಪುಟ್ಟ ಸಮಾಜದ ನಾಯಕರಿಗೆ ರಾಜಕೀಯ ಅವಕಾಶಗಳು ಸಿಗುತ್ತಿವೆ. ಆದರೆ ದೊಡ್ಡ ಸಂಖ್ಯೆಯಲ್ಲಿರುವ ಭೋವಿ ಸಮಾಜಕ್ಕೆ ಸಿಗುತ್ತಿಲ್ಲ ಎಂದರಲ್ಲದೆ, ಜನೋತ್ಸವಕ್ಕೆ ಗುಲ್ಬರ್ಗಾ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಬರುತ್ತೇವೆ ಎಂದರು.

ಹಾವೇರಿ ಜಿಲ್ಲಾಧ್ಯಕರಾದ ರವಿ‌ಪೂಜಾರ್ ಮಾತನಾಡಿ,  ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ‌ನಡೆಯಲಿ.  ಒಂದು ಕಾರ್ಯಕ್ರಮ ಮಾಡೋದು ಮುಖ್ಯವಲ್ಲ, ಈ ಕಾರ್ಯಕ್ರಮವು ನಮ್ಮ‌ಸಮಾಜದ ಬೇಡಿಕೆಗಳ ಮೇಲೆ‌ಬೆಳಕು ಚೆಲ್ಲುವಂತಾಗಲಿ.ಹಾಗಾದಾಗ ಮಾತ್ರ ನಮ್ಮ ಕಾರ್ಯ ಕ್ರಮಗಳು‌ಶಕ್ತಿಯುತವಾಗುತ್ತವೆ. ಕಾರ್ಯಕ್ರಮ ‌ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಸಾರ್ಥಕ ಬಾಗುತ್ತದೆ ಎಂದರು.

ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಮಾಜ ಸಂಘಟನೆಯಲ್ಲಿ ಬಲಿತ ಹಾಗೂ ದಲಿತ ಎರಡು ವರ್ಗಗಳಿಗೂ ಶಕ್ತಿ ತುಂಬುವ ಚೇತನವಿದೆ. ಸಂಘಟನೆಗೊಂಡ ಸಮಾಜ ಮಾತ್ರ ಎಲ್ಲಾ ರಂಗಗಳಲ್ಲಿಯೂ ಮುಖ್ಯವಾಹಿನಿಗೆ ಬಂದಿದೆ. ಇದನ್ನರಿತು ಬಾಬಾ ಸಾಹೇಬರ ನುಡಿಯಂತೆ ಶಿಕ್ಷಣ ಸಂಘಟನೆ ಹೋರಾಟಕ್ಕೆ ಆದ್ಯತೆ ನೀಡಬೇಕು. ಎಲ್ಲಾ ರಂಗಗಳ ಸಾಧಕರನ್ನು ಗುರುತಿಸುವ ಹಾಗೂ ಪ್ರೋತ್ಸಹಿಸುವ ಕ್ಷೇತ್ರವಾಗಿ ಭೋವಿ ಗುರುಪೀಠ ಕಾರ್ಯನಿರ್ವಹಿಸುತ್ತಿದೆ. ಭೋವಿ ಸಮಾಜದ ಭೂತ, ವರ್ತಮಾನ, ಭವಿಷ್ಯ ದಿಕ್ಸೂಚಿ ಮಹಾಸಂಗಮವೇ ಭೋವಿ ಜನೋತ್ಸವ ಸಮಾರಂಭ ಎಂದರು.

ಭೋವಿ ಜನೋತ್ಸವ ಎನ್ನುವುದು ಹಿಂದೆ ಸಣ್ಣದಾಗಿ ಶುರುವಾದ ಕಾರ್ಯಕ್ರಮ ಅವತ್ತು ಇಷ್ಟೇಲ್ಲ ಆಗುತ್ತಾ ಎನ್ನುವ ಬಗ್ಗೆ ಯೋಚನೆಯೇ ಇರಲಿಲ್ಲ. ಆದರೆ ಈಗ ದೊಡ್ಡ ಮಟ್ಟದಲ್ಲಿ‌ ನಡೆಯತ್ತಿದೆ.
ಕಳೆದ ವರ್ಷ ಬಹಳ ಸಣ್ಣದಾಗಿ ನಡೆದಿತ್ತು. ಈ ಬಾರಿ ಅದನ್ನು ಅರ್ಥಪೂರ್ಣವಾಗಿ ಮಾಡಬೇಕು,‌ಸಮಾಜದ ಬೇಡಿಕೆಗಳು ಸರ್ಕಾರದ ಮಟ್ಟಕ್ಕೆ ತಲುಪಲಿ ಎನ್ನುವ ಮಟ್ಟಿಗೆ ನಡೆಯಬೇಕಿದೆ. ಈ‌ನಿಟ್ಟಿನಲ್ಲಿ‌‌ ಸಮಾಜದ‌ ಮುಖಂಡರು ಚಿಂತನೆ ಮಾಡಬೇಕಿದೆ ಎಂದರು.

ಸಚಿವರಾ ಶಿವರಾಜ್ ತಂಗಡಗಿ ಅವರ‌ ಸಮಾಜಪರ ಕಾಳಜಿಯನ್ನು ಮುಕ್ತ ಕಂಠದಿಂದ ಬಣ್ಷಿಸಿದ ಶ್ರೀಗಳು, ಸಮಾಜದ ಒಬ್ಬರು ಸಚಿವರಾಗಿದ್ದಕ್ಕೆ ಸಾಕಷ್ಟು ಅವಕಾಶಗಳು ಸಮಾಜಕ್ಕೆ ಸಿಕ್ಕಿವೆ. ಎಲ್ಲದಕ್ಕೂ ಸ್ಪಂದನೆ ಮಾಡುವ ಸಕರಾತ್ಮಕ ಮನೋಭಾವ  ತಂಗಡಗಿ ಅವರದ್ದು.  ಅದರಿಂದಲೇ ಸಾಕಷ್ಟು ಕೆಲಸಗಳಾಗಿವೆ. ಅವರು ನಿಷ್ಟುರವಾಗಿ, ಗಟ್ಟಿಯಾಗಿ ನಿಲ್ಲುವ ಸ್ವಭಾವ. ಸರ್ಕಾರದಿಂದ ಎಲ್ಲವನ್ನು ಕೊಡಿಸುವ ಗುಣ ಅವರದು. ಸರ್ಕಾರದ ಮಟ್ಟದಲ್ಲಿ ಏನಾದರೂ ತೆಗೆದುಕೊಂಡರೆ ಅದನ್ನು ಅವರು ಈಡೇರಿಸುವದೇ ಬಿಡುವುದಿಲ್ಲ. ಇನ್ಮೊಂದಿಷ್ಟು ಬೇಡಿಕೆಗಳಿವೆ ಅವುಗಳನ್ನಿ ಅವರು ಮಾಡುತ್ತಾರೆ. ಹಾಗಂತ ಎಲ್ಲರ ಸಮಸ್ಯೆಗೆ ಸ್ಪಂದಿಸಲು ಆಗೋದಿಲ್ಲ.‌ಆದರೂ ಸಾಧ್ಯವಾದಷ್ಟು ಮಾಡ್ತಾರೆಂದು‌ ಹೇಳಿದರು.

ತಂಗಡಗಿ ಅವರು ತುಂಬಾ ಪ್ರಬುದ್ದ ರಾಜಕಾರಣಿ. ವೈಯಕ್ತಿಕ ವಾಗಿ ಗೆದ್ದ‌ಬಂದು ಸಚಿವರಾದವರು ಅವರು‌ .‌ಅವರು‌ ಸಚಿವರಾಗಿದ್ದು ಭೋವಿ ಸಮಾಜದಿಂದಲಲ್ಲ, ತಮ್ಮ‌ವೈಯಕ್ತಿಕ ಶಕ್ತಿಯಿಂದ. ಆದರೆ ನಮಗೆ ನಮ್ಮವರೊಬ್ಬರು ಸಚಿವರಾಗಿದ್ದಾರೆನ್ನುವುದು ನಮ್ಮ ಹೆಮ್ಮೆ. ಜಗತ್ತಿಗೆ ಸೂರ್ಯ ಬೆಳಕು‌ನೀಡುವ ಹಾಗೆ ತಂಗಡಗಿ ಅವರು ಸಮಾಜಕ್ಕೆ ಬೆಳಕು.‌ಅವರು ಒಬ್ನ ಪ್ರಬುದ್ದ ರಾಜಕಾರಣಿ‌ ಎಂದು ಬಣ್ಷಿಸಿದರು.

ಸಚಿವ ಶಿವರಾಜ್ ತಂಗಡಗಿ ನುಡಿಗಳು

ಭೋವಿ ಸಮಾಜವನ್ನು ಕಟ್ಟುವ ಕೆಲಸ ಬಹು ಕ್ಲಿಷ್ಟಕರವಾಗಿರುವಂತಹದು. ಕಳೆದ ಮೂರು ದಶಮಾನಗಳನ್ನು ಗಮನಿಸಿ, ಅನುಭವವನ್ನು ಹಂಚಿಕೊಳ್ಳುತ್ತಿರುವೆ. ಕಳೆದ ಎರಡು ದಶಮಾನಗಳನ್ನು ಅತ್ಯಂತ ಸೂಕ್ಷಮವಾಗಿ ಗಮನಿಸಿದ್ದಾಗ ಭೋವಿ ಗುರುಪೀಠದ ಜಗದ್ಗುರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಜವನ್ನು ಸಂಘಟಿಸಿದ ಪರಿಣಾಮ ನಾನಿಂದು ಮಂತ್ರಿಯಾಗಿರುವೆ. ಭೋವಿ ನಿಗಮ ಸ್ಥಾವನೆಯಾಗಿದೆ. ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ಆಯಾಕಟ್ಟಿನ ಜಾಗದಲ್ಲಿ ಅಧ್ಯಕ್ಷರು ನಿರ್ದೇಶಕರು ನೇಮಕಗೊಳ್ಳುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಆಪ್ತವಲಯದ ಶ್ರೀಗಳಾಗಿ ಗುರುತಿಸಿಕೊಂಡಿದ್ದಾರೆ. ಪರಿಣಾಮ ಕೆಪಿಎಸ್ಸಿ ಸದಸ್ಯರ ನೇಮಕವಾಗುತ್ತಿದೆ. ಇಮ್ನಡಿ ಶ್ರೀಗಳ ಸಮಾಜ ಬದ್ಧತೆಯಿಂದಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ.

ಅಪರೂಪದ ಮಾಣಿಕ್ಯದಂತಹ ಇಮ್ಮಡಿ ಶ್ರೀಗಳ ದೀಕ್ಷಾ ರಜತ ಮಹೋತ್ಸವವನ್ನು ಯುಪಿಎಸ್ಸಿಯಲ್ಲಿ ಆಯ್ಕೆಗೊಂಡ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಷಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಧುವರರ ಸಮಾವೇಶ, ನೂತನ ನಿಗಮ ಮಂಡಳಿಗಳ ಅಧ್ಯಕ್ಷರ ಹಾಗೂ ನಿರ್ದೇಶಕರ ಅಭಿನಂದನ ಸಮಾರಂಭವನ್ನು ಅರ್ಥಪೂರ್ವಾಗಿ ಅದ್ದೂರಿಯಾಗಿ ಆಚರಿಸೋಣ ಎಂದು ಕರೆ ನೀಡಿದರು.

Advertisement
Tags :
Advertisement