Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭೀಮಾ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ : ಹಾದಿ-ಬೀದಿಯಲ್ಲಿ ಸುತ್ತಿ, ಚಿತ್ರೀಕರಿಸಿದ ಸಂಕಷ್ಟ ಸಾರುತ್ತಿದೆ..!

09:10 PM Feb 22, 2024 IST | suddionenews
Advertisement

 

Advertisement

ಸ್ಯಾಂಡಲ್ ವುಡ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಭೀಮಾ. ಸಲಗದಂತ ರಾ ಸಿನಿಮಾ ಕೊಟ್ಟು, ಮಾಸ್ ಪ್ರೇಕ್ಷಕರನ್ನು ಸೆಳೆದಿದ್ದಂತ ದುನಿಯಾ ವಿಜಯ್ ಮತ್ತೆ ಕೈಗೆತ್ತಿಕೊಂಡಿದ್ದು ಭೀಮಾ ಸಿನಿಮಾ. ಭೀಮಾ ಸಿನಿಮಾ ಅನೌನ್ಸ್ ಆದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದೆ. ಈ ಸಿನಿಮಾಗಾಗಿ‌ ದುನಿಯಾ ವಿಜಯ್ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಕೂಡ ಆಗಾಗ ರಿವಿಲ್ ಆಗಿದೆ.

 

Advertisement

ರಸ್ತೆಯ ಬೀದಿ ಬೀದಿಗಳಲ್ಲಿ ಅಲೆದು, ಇಕ್ಕೆಲಗಳಲ್ಲಿ ಸುತ್ತಾಡಿ ಸಿನಿಮಾ ಶೂಟಿಂಗ್ ಮಾಡಿದ್ದಾರೆ ದುನಿಯಾ ವಿಜಯ್‌ ಇತ್ತಿಚೆಗೆ ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ರಿಲೀಸ್ ಆಗಿತ್ತು. ರಿಯಲ್ ಪೊಲೀಸರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧ್ಯವಾದಷ್ಟು ರಿಯಲಿಸ್ಟಿಕ್ ಆಗಿ ಶೂಟ್ ಮಾಡಿದ್ದಾರೆ. ಆದರೆ ಇದೀಗ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಸಿನಿಮಾದ ಹಿಂದಿನ ಕಷ್ಟ-ಸುಖ ಅನಾವರಣವಾಗಿದೆ.

 

ಭೀಮಾ ಸಿನಿಮಾವನ್ನು ಬೆಂಗಳೂರಿನ ಇಕ್ಕೆಲಗಳಲ್ಲಿ ಶೂಟ್ ಮಾಡಲಾಗಿದೆ. ಅದರ ಜೊತೆಗೆ ದೊಡ್ಡ ದೊಡ್ಡ ಸೆಟ್ ಗಳನ್ನು ಹಾಕಿ ಶೂಟ್ ಮಾಡಲಾಗಿದೆ. ಭೀಮನ ಈ ಅಂಗಳದಲ್ಲಿ ನಿಮಗೆ ನೂರಾರು ಮುಖಗಳೂ ಕಾಣುತ್ತವೆ. ತಮ್ಮ ಪ್ರಾಣಕ್ಕಷ್ಟೇ ಅಲ್ಲ ಸಾರ್ವಜನಿಕರ ಜೀವಕ್ಕೂ ವೀಲಿಂಗ್ ಮಾಡುವ ಮೂಲಕ ಕುತ್ತು ತರುವ ಪುಂಡರ ಹಾವಳಿ ಜೊತೆ ಜೈಲಿನ ಸೆರೆವಾಸ ಹಾಗೂ ವನವಾಸದ ಸ್ಯಾಂಪಲ್ಲುಗಳನ್ನೂ ಈ ವಿಡಿಯೋದಲ್ಲಿ ನೀವು ನೋಡಬಹುದು.

Advertisement
Tags :
bengaluruBheemachitradurgaMakingmoviesuddionesuddione newsVideo releaseಚಿತ್ರದುರ್ಗಬೆಂಗಳೂರುಭೀಮಾಮೇಕಿಂಗ್ರಿಲೀಸ್ವಿಡಿಯೋಸಿನಿಮಾಸುದ್ದಿಒನ್ಸುದ್ದಿಒನ್ ನ್ಯೂಸ್ಹಾದಿ-ಬೀದಿ
Advertisement
Next Article