For the best experience, open
https://m.suddione.com
on your mobile browser.
Advertisement

ಭೀಮಾ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ : ಹಾದಿ-ಬೀದಿಯಲ್ಲಿ ಸುತ್ತಿ, ಚಿತ್ರೀಕರಿಸಿದ ಸಂಕಷ್ಟ ಸಾರುತ್ತಿದೆ..!

09:10 PM Feb 22, 2024 IST | suddionenews
ಭೀಮಾ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್   ಹಾದಿ ಬೀದಿಯಲ್ಲಿ ಸುತ್ತಿ  ಚಿತ್ರೀಕರಿಸಿದ ಸಂಕಷ್ಟ ಸಾರುತ್ತಿದೆ
Advertisement

Advertisement
Advertisement

ಸ್ಯಾಂಡಲ್ ವುಡ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಭೀಮಾ. ಸಲಗದಂತ ರಾ ಸಿನಿಮಾ ಕೊಟ್ಟು, ಮಾಸ್ ಪ್ರೇಕ್ಷಕರನ್ನು ಸೆಳೆದಿದ್ದಂತ ದುನಿಯಾ ವಿಜಯ್ ಮತ್ತೆ ಕೈಗೆತ್ತಿಕೊಂಡಿದ್ದು ಭೀಮಾ ಸಿನಿಮಾ. ಭೀಮಾ ಸಿನಿಮಾ ಅನೌನ್ಸ್ ಆದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದೆ. ಈ ಸಿನಿಮಾಗಾಗಿ‌ ದುನಿಯಾ ವಿಜಯ್ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಕೂಡ ಆಗಾಗ ರಿವಿಲ್ ಆಗಿದೆ.

Advertisement

ರಸ್ತೆಯ ಬೀದಿ ಬೀದಿಗಳಲ್ಲಿ ಅಲೆದು, ಇಕ್ಕೆಲಗಳಲ್ಲಿ ಸುತ್ತಾಡಿ ಸಿನಿಮಾ ಶೂಟಿಂಗ್ ಮಾಡಿದ್ದಾರೆ ದುನಿಯಾ ವಿಜಯ್‌ ಇತ್ತಿಚೆಗೆ ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ರಿಲೀಸ್ ಆಗಿತ್ತು. ರಿಯಲ್ ಪೊಲೀಸರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧ್ಯವಾದಷ್ಟು ರಿಯಲಿಸ್ಟಿಕ್ ಆಗಿ ಶೂಟ್ ಮಾಡಿದ್ದಾರೆ. ಆದರೆ ಇದೀಗ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಸಿನಿಮಾದ ಹಿಂದಿನ ಕಷ್ಟ-ಸುಖ ಅನಾವರಣವಾಗಿದೆ.

Advertisement

ಭೀಮಾ ಸಿನಿಮಾವನ್ನು ಬೆಂಗಳೂರಿನ ಇಕ್ಕೆಲಗಳಲ್ಲಿ ಶೂಟ್ ಮಾಡಲಾಗಿದೆ. ಅದರ ಜೊತೆಗೆ ದೊಡ್ಡ ದೊಡ್ಡ ಸೆಟ್ ಗಳನ್ನು ಹಾಕಿ ಶೂಟ್ ಮಾಡಲಾಗಿದೆ. ಭೀಮನ ಈ ಅಂಗಳದಲ್ಲಿ ನಿಮಗೆ ನೂರಾರು ಮುಖಗಳೂ ಕಾಣುತ್ತವೆ. ತಮ್ಮ ಪ್ರಾಣಕ್ಕಷ್ಟೇ ಅಲ್ಲ ಸಾರ್ವಜನಿಕರ ಜೀವಕ್ಕೂ ವೀಲಿಂಗ್ ಮಾಡುವ ಮೂಲಕ ಕುತ್ತು ತರುವ ಪುಂಡರ ಹಾವಳಿ ಜೊತೆ ಜೈಲಿನ ಸೆರೆವಾಸ ಹಾಗೂ ವನವಾಸದ ಸ್ಯಾಂಪಲ್ಲುಗಳನ್ನೂ ಈ ವಿಡಿಯೋದಲ್ಲಿ ನೀವು ನೋಡಬಹುದು.

Tags :
Advertisement