Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ..!

05:30 PM May 29, 2024 IST | suddionenews
Advertisement

ಬೆಂಗಳೂರು: ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಕೇಸ್ ಗೆ ಸಂಬಂಧಿಸಿದಂತೆ ರೇವಣ್ಣ ಅವರ ಪತ್ನಿ ಭವಾನಿ ಅವರಿಗೂ ಬಂಧನದ ಭೀತಿ ಎದುರಾಗಿದೆ. ಪ್ರಜ್ವಲ್ ರೇವಣ್ಣ ವುಚಾರಣೆಗೆ ಹಾಜರಾಗುತ್ತೀನಿ ಎಂದು ವಿಡಿಯೋ ಮೂಲಕ ಹೇಳಿದ ಬಳಿಕ ಭವಾನಿ ರೇವಣ್ಣನಿಗೂ ಭಯವಾಗಿದೆ. ಹೀಗಾಗಿ ಅಂದೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ನಿನ್ನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಂದಿಗೆ ವಿಚಾರಣೆ ಮುಂದೂಡಿಕೆ‌ಮಾಡಿದ್ದರು. ಆದರೆ ಮತ್ತೆ ಜಾಮೀನು ಅರ್ಜಿ ಮೇ 31ಕ್ಕೆ ಮುಂದೂಡಲಾಗಿದೆ.

Advertisement

ಇಂದು ವಾದ-ಪ್ರತಿವಾದವನ್ನು ಆಲಿಸಿರುವ ನ್ಯಾಯಾಧೀಶರು ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಸಂಬಂಧ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ನಿನ್ನೆ ಭವಾನಿ ರೇವಣ್ಣ ಅವರ ಪರವಾದ ವಕೀಲರು ಬಂಧನದಿಂದ ರಕ್ಷಣೆ ಕೋರಿದ್ದರು. ಈಗ ಜಾಮೀನು ಅರ್ಜಿ ಮುಂದೂಡಿಕೆ ಮಾಡಿದ್ದು, ಅರೆಸ್ಟ್ ಆಗ್ತಾರಾ ಇಲ್ವಾ ಎಂಬ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ.

ಮಹಿಳೆಯ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ, ಅವರ ಮೊಬೈಲ್ ವಶಕ್ಕೆ ಪಡೆದು ಕಾಲ್ ಡೀಟೆಲ್ಸ್ ಸಹ ಪರಿಶೀಲನೆ ಮಾಡಿತ್ತು. ಈ ವೇಳೆ ಭವಾನಿ ರೇವಣ್ಣ ಮತ್ತು ಸತೀಶ್ ಬಾಬು ಕರೆ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ಆಧಾರದ ಮೇಲೆ ಭವಾನಿ ಅವರನ್ನು ವಿಚಾರಣೆಗೆ ಕರೆದಿತ್ತು. ಆದರಡ ಯಾವ ನಿಯಮದಡಿ ನೋಟೀಸ್ ನೀಡಿದ್ದಾರೆಂಬುದು ಎಸ್ಐಟಿ ಮಾಹಿತಿ ನೀಡಿಲ್ಲ.

Advertisement

Advertisement
Tags :
adjourned againbail application hearingbengaluruBhavani Revannachitradurgasuddionesuddione newsಚಿತ್ರದುರ್ಗಜಾಮೀನು ಅರ್ಜಿ ವಿಚಾರಣೆಬೆಂಗಳೂರುಭವಾನಿ ರೇವಣ್ಣಮುಂದೂಡಿಕೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article