Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

'ಭಾಗ್ಯಲಕ್ಷ್ಮೀ' ಕುಸುಮಾಗೆ 3 ತಿಂಗಳು ಜೈಲು.. 40 ಲಕ್ಷ ದಂಡ..!

01:19 PM Aug 27, 2024 IST | suddionenews
Advertisement

ಕನ್ನಡ ಕಿರುತೆರೆಯಾಗಲಿ.. ಹಿರಿತೆರೆಯಾಗಲಿ ಅಮ್ಮನ ಪಾತ್ರಕ್ಕೆ ಜೀವ ತುಂಬುವಲ್ಲಿ ಮನೆ ಮಾತಾಗಿರುವುದು ಪದ್ಮಜಾ ರಾವ್. ಬಹುಬೇಡಿಕೆಯ ನಟಿ. ಆದರೆ ಇದೀಗ ಚೆಕ್ ಬೌನ್ಸ್ ಕೇಸಲ್ಲಿ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆಯಾಗಿದೆ. ಜೊತೆಗೆ 40 ಲಕ್ಷ ದಂಡವನ್ನು ವಿಧಿಸಲಾಗಿದೆ.

Advertisement

ಅಷ್ಟಕ್ಕೂ ಯಾವುದಿದು ಚೆಕ್ ಬೌನ್ಸ್ ಕೇಸ್ ಅಂದರೆ ಕೊಂಚ 2020ರ ಆಸುಪಾಸಿಗೆ ಮರಳಬೇಕಾಗುತ್ತದೆ. ಪದ್ಮಜಾ ರಾವ್ ಆ ಸಮಯದಲ್ಲಿ 40 ಲಕ್ಷ ಕೈ ಸಾಲ ಪಡೆದುಕೊಂಡಿದ್ದರು. ಅದಕ್ಕೆ ಭದ್ರತೆಯಾಗಿ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ಅನ್ನು ನೀಡಿದ್ದರು. ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ವಿರೇಂದ್ರ ಶೆಟ್ಟಿಗೆ ಈ ಚೆಕ್ ನೀಡಿದ್ದರು. ಚೆಕ್ ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿತ್ತು. ಪ್ರಕರಣದ ವಿರುದ್ಧ ವೀರೇಂದ್ರ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಮಂಗಳೂರು ಐದನೇ ಜೆಎಂಎಫ್ ನ್ಯಾಯಾಲಯ ಪದ್ಮಜಾ ರಾವ್ ಅವರಿಗೆ ನೋಟೀಸ್ ನೀಡಿತ್ತು. ಮೂರು ಬಾರಿ ನೋಟೀಸ್ ನೀಡಿದರು ಪದ್ಮಜಾ ರಾವ್ ಅವರು ನೋಟೀಸ್ ಗೆ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲ. 2021ರಲ್ಲಿಯೇ ನ್ಯಾಯಾಲಯ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿತ್ತು. ಬಳಿಕ ಕೋರ್ಟ್ ಗೆ ಹಾಜರಾಗಿ ಜಾಮೀನನ್ನು ಪಡೆದಿದ್ದರು. ಅದೇ ಸಮಯದಲ್ಲಿ ಪದ್ಮಜಾ ರಾವ್ ಅವರ ಪರ ವಕೀಲರು, ಈ ಚೆಕ್ ಕಳವು ಮಾಡಿ, ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂದಿದ್ದರು. ಆದರೆ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಲು ವಿಫಲರಾದರು.

ಈ ಸಂಬಂಧ ಇದೀಗ ಪದ್ಮಜಾ ರಾವ್ ಅವರಿಗೆ 40 ಲಕ್ಷದ 20 ಸಾವಿರ ದಂಡ ವಿಧಿಸಿರುವ ಕೋರ್ಟ್ 40 ಲಕ್ಷದ 17 ಸಾವಿರ ದೂರುದಾರರಿಗೆ ಇನ್ನುಳಿದ 3 ಸಾವಿರ ಸರ್ಕಾರಕ್ಕೆ ಪಾವತಿಸಬೇಕೆಂದು ತಿಳಿಸಿದೆ. ಜೊತೆಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Advertisement

Advertisement
Tags :
3 months in jail3 ತಿಂಗಳು ಜೈಲು40 lakh fine40 ಲಕ್ಷ ದಂಡbengaluruBhagyalakshmichitradurgaKusumasuddionesuddione newsಕುಸುಮಾಚಿತ್ರದುರ್ಗಬೆಂಗಳೂರುಭಾಗ್ಯಲಕ್ಷ್ಮೀಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article