For the best experience, open
https://m.suddione.com
on your mobile browser.
Advertisement

ಸಿನಿಮಾದಲ್ಲಿ ಕೊರಿಯೋಗ್ರಾಫರ್ ಆಗಿದ್ದ ಭದ್ರಾವತಿಯ ಯುವತಿಯ ಬರ್ಬರ ಕೊಲೆ ಮಾಡಿದ ಗಂಡ..!

09:38 PM Aug 28, 2024 IST | suddionenews
ಸಿನಿಮಾದಲ್ಲಿ ಕೊರಿಯೋಗ್ರಾಫರ್ ಆಗಿದ್ದ ಭದ್ರಾವತಿಯ ಯುವತಿಯ ಬರ್ಬರ ಕೊಲೆ ಮಾಡಿದ ಗಂಡ
Advertisement

Advertisement
Advertisement

ಬೆಂಗಳೂರು: ಪ್ರೀತಿಸಿ ಮದುವೆಯಾದವನೇ ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಬಳಿ ನಡೆದಿದೆ. ಭದ್ರಾವತಿ ಮೂಲದ ನವ್ಯಾ ಕೊಲೆಯಾದ ಮಹಿಳೆ. ಸಿನಿಮಾ ಇಂಡಸ್ಟ್ರಿಯಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಪತಿಯಿಂದಾನೇ ಬರ್ಬರ ಹತ್ಯೆಯಾಗಿದ್ದಾರೆ.‌ ಕೆಂಗೇರಿಯಾ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಘಟನೆ ನಡೆದಿದೆ.

Advertisement
Advertisement

ನವ್ಯಾ ಮೂಲತಃ ಭದ್ರಾವತಿಯವರು. ಆದರೆ ಕಳೆದ ಮೂರು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಕಿರಣ್ ಎಂಬುವವರನ್ನು ಮದುವೆಯಾಗಿದ್ದರು. ಕಿರಣ್ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಬ್ಬರು ಪ್ರೀತಿಸಿ, ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಆರಂಭದಲ್ಲಿ ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ ಇತ್ತಿಚೆಗೆ ಇಬ್ಬರ ನಡುವೆ ಸಣ್ಣ ಪುಟ್ಟದ್ದಕ್ಕೂ ಜಗಳಗಳಾಗುತ್ತಿತ್ತು. ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ವಾಸವಿದ್ದರು. ನವ್ಯಾಗೆ ಈಗಿನ್ನು 25 ವರ್ಷ.

ಈ ಜಗಳವೇ ಅತಿರೇಕಕ್ಕೆ ತಲುಪಿ ಇಂದು ಮಧ್ಯಾಹ್ನ 3 ಗಂಟೆಗೆ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಖುರ್ಚಿಗೆ ಕಟ್ಟಿ ಹಾಕಿ, ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾನೆ. ನವ್ಯಾ ಮೇಲೆ ಪತಿ ಕಿರಣ್ ಯಾವಾಗಲೂ ಅನುಮಾನಗೊಳ್ಳುತ್ತಿದ್ದ. ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಆದರೆ ಆ ಗಲಾಟೆಯೇ ಕೊಲೆಗೆ ಕಾರಣವಾಗಿದೆ. ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಕನಿಕರವಿಲ್ಲದಂತೆ ಕೊಂದಿದ್ದಾನೆ. ಖುರ್ಚಿಗೆ ಕಟ್ಟಿ, ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿದ್ದಾನೆ. ಕೊಲೆ ಮಾಡಿದ ಬಳಿಕ, ಅವಳ ಪರಿಸ್ಥಿತಿ ಏನು ಅಂತಾನು ನೋಡದೆ ಅಲ್ಲಿಂದ ಓಡಿ ಹೋಗಿದ್ದರು. ವಿಷಯ ತಿಳಿದ ಕೆಂಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ‌ನಡೆಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Tags :
Advertisement