ಬೆಂಗಳೂರು - ಮೈಸೂರು ಟೋಲ್ ಮತ್ತೆ ಹೆಚ್ಚಳ...!
ಮೈಸೂರು: ಬೆಂಗಳೂರು - ಮೈಸೂರು ದಶಪಥ ರಸ್ತೆ ಉದ್ಘಾಟನೆಯಾದಾಗಿನಿಂದ ಹಲವು ರೀತಿಯ ಚರ್ಚೆಗಳು ನಡೆಯುತ್ತಿದೆಮ ಅದರಲ್ಲೂ ಟೋಲ್ ದರದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಮೊದಲೇ ಇದ್ದ ಟೋಲ್ ಹಣ ಕಟ್ಟಲಾಗದೆ ಜನ ಒದ್ದಾಡುತ್ತಿದ್ದರೆ, ಈಗ ಮತ್ತೆ ಟೋಲ್ ದರ ಹೆಚ್ಚಳವಾಗಿದೆ.
ಶೇ.22ರಷ್ಟು ಟೋಲ್ ದರ ಹೆಚ್ಚಳವಾಗಿದೆ. ಸದ್ಯ ಕಾರು/ಜೀಪಿನ ಟೋಲ್ ದರ 165 ರೂಪಾಯಿ ಇದೆ. ಈಗ ಮತ್ತೆ 30 ರೂಪಾಯಿ ಹೆಚ್ಚಳವಾಗಿದೆ. ಎರಡು ಕಡೆಗೆ 45 ರೂಪಾಯಿ ಹೆಚ್ಚಳವಾಗಿದೆ. ಟ್ರಕ್/ಬಸ್/ದ್ವಿಚಕ್ರ ವಾಹನದ ದರ 565 ರೂಪಾಯಿ ಇದ. ಈಗ 165 ರೂಪಾಯಿ ಹೆಚ್ಚಳವಾಗಿದೆ. ಲಘು ವಾಹನ/ ಮಿನಿ ಬಸ್ 270 ರೂಪಾಯಿ ಇದೆ. ಈಗ 50 ರೂಪಾಯಿ ಹೆಚ್ಚಳವಾಗಿದೆ. ದ್ವಿಮುಖ ಸಂಚಾರ 75 ರೂಪಾಯಿ ಹೆಚ್ಚಳವಾಗಿದೆ.
ರಸ್ತೆ ಆರಂಭವಾಗಿ ಕಡಿಮೆ ದಿನಗಳು ಕಳೆದಿದ್ದು, ಆಗಲೇ ಟೋಲ್ ದರ ಹೆಚ್ಚಳವಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ವರ್ಷ ಹೈವೇ ಅಥಾರಿಟಿ ಟೋಲ್ ದರ ಹೆಚ್ಚಳ ಮಾಡುತ್ತೆ. ಆದರೆ ಬೆಂಗಳೂರು - ಮೈಸೂರು ಟೋಲ್ ಆರಂಭವಾಗಿದೆ. ಹೀಗಾಗಿ ನಾನು ಹೈವೇ ಅಥಾರಿಟಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.