ಬೆಳಗಾವಿ ಮೊದಲ ದಿನದ ಅಧಿವೇಶನ : ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಕೋಲಾಹಲ..!
ಬೆಳಗಾವಿ: ಇಂದಿನಿಂದ ಚಳಿಗಾಲದ ಅಧಿವೇಶನ ಶುರುವಾಗಿದ್ದು, ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷಗಳು ಸವಾರಿ ಮಾಡಲು ಸಿದ್ಧತೆ ನಡೆಸಿವೆ. ಅದರ ಭಾಗವಾಗಿಯೇ ಇಂದು ಬಿಪಿಎಲ್ ಕಾರ್ಡ್ ಗಳು ರದ್ದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೋರು ಚರ್ಚೆ ನಡೆಸಲಾಗಿದೆ.
'ನೀವೂ ಜಗ್ಗಲ್ಲ ಬಗ್ಗಲ್ಲ ಎಂದವರು ಯಾರಿಗೆ ಹೆದರುತ್ತಾ ಇದ್ದೀರಿ. ಯಾಕೆ ಹೆದರಬೇಕು. ನಿರ್ದಾಕ್ಷಿಣ್ಯವಾಗಿ ಅನರ್ಹರನ್ನ ರದ್ದು ಪಡಿಸಿ. ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಅನಗತ್ಯವಾಗಿ ಬಿಪಿಎಲ್ ಕಾರ್ಡುಗಳನ್ನ ನೀವೂ ರದ್ದು ಮಾಡ್ತಾ ಇದ್ದೀರ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾ ಇದ್ದೀರಿ. ಇದು ತಪ್ಪು' ಎಂದು ಸಿಟಿ ರವಿ ಸದನದಲ್ಲಿ ಜೋರು ಮಾಡಿದ್ದಾರೆ. ಬಾಂಗ್ಲಾದೇಶದವರಿಗೆಲ್ಲಾ ಬಿಪಿಎಲ್ ಕಾರ್ಡ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಅವರು ಉತ್ತರ ಕೊಡಿವುದಕ್ಕೆ ಪ್ರಯತ್ನ ಪಟ್ಟರು ವಿರೋಧ ಪಕ್ಷಗಳು ಕೇಳಿಸಿಕೊಳ್ಳುವುದಕ್ಕೆ ರೆಡಿ ಇಲ್ಲ. ಮುಂದುವರೆದು ಮಾತನಾಡಿದ ಕೆ.ಹೆಚ್ ಮುನಿಯಪ್ಪನವರು, ನಾನು ಒಂದು ಪಕ್ಷಕ್ಕೆ ಹೇಳಿಲ್ಲ. ಬಿಜೆಪಿ, ಕಾಂಗ್ರೆಸ್ ಅಂತ ಹೇಳಿಲ್ಲ. ಪಕ್ಷಗಳು ಎಲ್ಲವೂ ಸೇರಿ ಪಕ್ಷಾತೀತವಾಗಿ ಸಹಕಾರ ಕೊಟ್ಟರೆ ಆಗುತ್ತೆ. ಎಪಿಎಲ್ ಕಾರ್ಡ್ ಜಾಸ್ತಿ ಇದೆ. ಅದನ್ನ ರದ್ದು ಮಾಡುವುದಕ್ಕೆ ನಿಮ್ಮ ಸಹಕಾರ ಬೇಕು ಎಂದೇ ಸಚಿವ ಮುನಿಯಪ್ಪ ಅವರು ಕೇಳಿದರು. ಕಲಾಪದಲ್ಲಿ ಬಿಪಿಎಲ್ ಕಾರ್ಡ್ ರದ್ದು ವಿಚಾರ ಎರಡು ಪಕ್ಷಗಳ ನಾಯಕರ ನಡುವೆ ಸದ್ದು ಗದ್ದಲ ಶುರು ಮಾಡಿತು. ವಿರೋಧ ಪಕ್ಷದ ನಾಯಕರು ಕೇಳಿದ ಪ್ರಶ್ನೆಗೆ ಆಹಾರ ಸಚಿವರು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.