For the best experience, open
https://m.suddione.com
on your mobile browser.
Advertisement

ಮತ್ತೆ ಮುನ್ನೆಲೆಗೆ ಬಂತು ಬೆಳಗಾವಿ - ಧಾರವಾಡ ನೇರ ರೈಲು : ಬಿಜೆಪಿಯ ಇಬ್ಬರು ಸಂಸದರು ಯಶಸ್ಸು ಮಾಡ್ತಾರಾ..?

09:11 PM Jun 24, 2024 IST | suddionenews
ಮತ್ತೆ ಮುನ್ನೆಲೆಗೆ ಬಂತು ಬೆಳಗಾವಿ   ಧಾರವಾಡ ನೇರ ರೈಲು   ಬಿಜೆಪಿಯ ಇಬ್ಬರು ಸಂಸದರು ಯಶಸ್ಸು ಮಾಡ್ತಾರಾ
Advertisement

ಧಾರವಾಡ: ಕೆಲವೊಂದು ಯೋಜನೆಗಳೇ ಹಾಗೆ. ಘೋಷಣೆಯಾದ ಮೇಲೆ ಜಾರಿಯಾಗೋದೆ ಕಷ್ಟ. ನಾಮಕಾವಸ್ಥೆಗೆ ಘೋಷಣೆಯಾಗಿ ಹಾಗೇ ಉಳಿದು ಬಿಡುತ್ತವೆ. ಅದೇ ಹಾದಿಯಲ್ಲಿರುವುದು ಧಾರವಾಡ-ಬೆಳಗಾವಿ ನೇರ ರೈ ಯೋಜನೆ. ಇದೀಗ ಮತ್ತೆ ಅಸ ಯೋಜನೆ ಮುನ್ನೆಲೆಗೆ ಬಂದಿದೆ. ಅದಕ್ಕೆ‌ ಕಾರಣ ಲೋಕಸಭಾ ಚುನಾವಣೆಯಲ್ಲಿ ಎರಡು ಕಡೆ ಬಿಜೆಪಿ ಬಂದಿರುವುದು.

Advertisement

ಧಾರವಾಡದಲ್ಲಿ ಈ ಬಾರಿಯೂ ಪ್ರಹ್ಲಾದ್ ಜೋಶಿಯೇ ಗೆಲುವು ಕಂಡಿದ್ದಾರೆ. ಸಂಸತ್ ಗೆ ಆಯ್ಕೆಯಾಗಿದ್ದಾರೆ. ಇನ್ನು ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆದ್ದಿದ್ದಾರೆ. ಇಬ್ಬರು ಸಂಸದರಾಗಿರುವ ಕಾರಣ ಈ ಯೋಜನೆಗೆ ಇನ್ನಾದರೂ ಚಾಲನೆ ಸಿಗುತ್ತಾ ಎಂಬುದನ್ನು ಜನ ಎದುರು ನೋಡುತ್ತಿದ್ದಾರೆ.

Advertisement

ಧಾರವಾಡ ಬೆಳಗಾವಿ ರೈಲು ಯೋಜನೆಯ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕಾಗಿ ಈಗಾಗಲೇ ಯೋಜನೆ ರೂಪಿಸಿ, ಅದು ಜಾರಿಯಾಗುವ ಹಂತಕ್ಕೂ ಬಂದಿತ್ತು. ಆದರೆ ಅನೇಕ ಕಾರಣಗಳಿಂದ ಅದು ಮುಂದುವರೆಯುತ್ತಲೇ ಇಲ್ಲ. ಧಾರವಾಡದಿಂದ ಬೆಳಗಾವಿಗೆ ಈಗಿರುವ ರೈಲಿನ ಮೂಲಕ ಹೋದರೆ ಬರೋಬ್ಬರಿ ಮೂರು ಗಂಟೆ ಬೇಕು. ಏಕೆಂದರೆ ಧಾರವಾಡದಿಂದ ಹೊರಡೋ ರೈಲು ಅಳ್ನಾವರ್, ಲೋಂಡಾ, ಖಾನಾಪುರ ಮೂಲಕ ಬೆಳಗಾವಿ ಮುಟ್ಟಬೇಕಿದೆ. ಆದರೆ ಈ ಮಾರ್ಗದ ಬದಲಿಗೆ ನೇರವಾಗಿ ಧಾರವಾಡ-ಬೆಳಗಾವಿಗೆ ರೈಲು ಮಾರ್ಗ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಬಳಿಕ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ, ಧಾರವಾಡದಿಂದ ಬೆಳಗಾವಿಗೆ ಅರ್ಧ ಗಂಟೆಯಲ್ಲಿಯೇ ತಲುಪಬಹುದಾಗಿದೆ.

Advertisement

Advertisement
Advertisement
Advertisement
Tags :
Advertisement