Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೇಲೆಕೇರಿ ಅದಿರು ಹಗರಣ: ಕಾಂಗ್ರೆಸ್ ಶಾಸಕನಿಗೆ 7 ವರ್ಷ ಜೈಲು ಶಿಕ್ಷೆ : ಚಿತ್ರದುರ್ಗ ಅರಣ್ಯದಲ್ಲೂ ನಡೆದಿತ್ತು ಅಕ್ರಮ..!

05:09 PM Oct 26, 2024 IST | suddionenews
Advertisement

ಬೆಂಗಳೂರು: ಬೇಲೆಕೇರಿ ಅದಿರು ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಲಯದಿಂದ ಮಹತ್ವದ ಆದೇಶ ಹೊರಬಿದ್ದಿದೆ. ಕಾರಾವಾರದ ಶಾಸಕ ಸತೀಶ್ ಸೈಲ್ ಗೆ ಈ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಯಾಗಿದೆ. ಪ್ರಕರಣದ ವಾದ ಪ್ರತಿವಾದ ಆಲಿಸಿದ್ದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿತ್ತು. ಇಂದು ಶಿಕ್ಷೆ ಪ್ರಕಟಿಸಿದೆ.

Advertisement

ಸತೀಶ್ ಸೈಲ್ ಜೊತೆಗೆ ಮಹೇಶ್ ಬಿಳಿಯೇ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್ ಗೂ ಶಿಕ್ಷೆ ವಿಧಿಸಿದೆ. ಇದರಲ್ಲಿ ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷದಂತೆ ಜೈಲು ಶಿಕ್ಷೆ ಪ್ರಕಟಿಸಿದೆ. ಒಟ್ಟು ಆರು ಪ್ರಕರಣದಲ್ಲಿ ಇಲ್ಲಿಯವರೆಗೂ ವಿಧಿಸಿದ ಮೊತ್ತ 44 ಕೋಟಿ ರೂಪಾಯಿ ಆಗಿದೆ‌. ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದ ಕಾರಣ ಸತೀಶ್ ಸೈಲ್ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ. ಇಂದು ವೇಳೆ ಹೈಕೋರ್ಟ್ ನಲ್ಲಿ, ಶಿಕ್ಷೆಗೆ ತಡೆ ಸಿಕ್ಕರೆ ಅನರ್ಗತೆಯಿಂದ ಬಚಾವಾಗಬಹುದು.

ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಭಾರಿ ಪ್ರಮಾಣದ ಜಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2010ರಲ್ಲಿ ಅರಣ್ಯ ಇಲಾಖೆ 350 ಕೋಟಿ ರೂಪಾಯಿ ಮೌಲ್ಯದ ಬರೋಭರಿ 8.5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಅದಿರನ್ನು ಕಾಯ್ದುಕೊಳ್ಳುವಂತೆ ಬೇಲೇಕೇರು ಬಂದರು ನಿರ್ವಹಿಸುತ್ತಿದ್ದ ಬಂದರಿಗೆ ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಆದರೆ ಕೆಲವು ತಿಂಗಳ ಬಳಿಕ ಅರಣ್ಯ ಇಲಾಖೆ ಪರಿಶೀಲಿಸಿದಾಗ ಅಲ್ಲಿ ಕೇವಲ ಎರಡು ಲಕ್ಷ ಮೆಟ್ರಿಕ್ ಅದಿರು ಮಾತ್ರ ಇತ್ತು. 250 ಕೋಟಿ ರೂಪಾಯಿ ಅದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಅದಿರು ಸಾಗಾಣೆ ಕಂಪನಿಗಳ ವಿರುದ್ಧ ದೂರು ನೀಡಿತ್ತು.

Advertisement

Advertisement
Tags :
7 years in jail7 ವರ್ಷ ಜೈಲು ಶಿಕ್ಷೆBelekeri ore scambengaluruchitradurgaChitradurga forestcongress mlasuddionesuddione newsಅಕ್ರಮಕಾಂಗ್ರೆಸ್ ಶಾಸಕಚಿತ್ರದುರ್ಗಚಿತ್ರದುರ್ಗ ಅರಣ್ಯಬೆಂಗಳೂರುಬೇಲೆಕೇರಿ ಅದಿರು ಹಗರಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article