For the best experience, open
https://m.suddione.com
on your mobile browser.
Advertisement

ಗಂಭೀರ್ ಡಿಮ್ಯಾಂಡ್ ಪೂರೈಸಿದ ಬಿಸಿಸಿಐ

08:13 PM Aug 18, 2024 IST | suddionenews
ಗಂಭೀರ್ ಡಿಮ್ಯಾಂಡ್ ಪೂರೈಸಿದ ಬಿಸಿಸಿಐ
Advertisement

ಸುಮಾರು 17 ವರ್ಷಗಳ ಬಳಿಕ ಟೀಂ ಇಂಡಿಯಾ 2024ರ ವಿಶ್ವಕಪ್ ಚಾಂಪಿಯನ್ ಪಟ್ಟಗಿಟ್ಟಿಸಿಕೊಂಡಿದೆ. ಹೊಸ ಟಿಂ ಇಂಡಿಯಾ ಕೋಚ್ ಆಗಿ ಗೌತಮ್‌ ಗಂಭೀರ್ ಇತ್ತೀಚೆಗಷ್ಟೇ ನೇಮಕಗೊಂಡಿದ್ದರು. ಜೊತೆಗೆ ಬಿಸಿಸಿಐ ಮುಂದೆ ಹಲವು ಬೇಡಿಕೆಗಳನ್ನು ಇಡಲಾಗಿತ್ತು. ಅದರಲ್ಲಿ ಟೀಂ ಇಂಡಿಯಾಗೆ ಕೋಚಿಂಗ್ ಸ್ಟ್ಯಾಫ್ ನಲ್ಲಿ ಮೊರ್ನೆ ಮೊರ್ಕೆಲೋ ಅವರನ್ನು ಸೇರಿಸಲು ಡಿಮ್ಯಾಂಡ್ ಇಟ್ಟಿದ್ದರು. ಇದೀಗ ಬಿಸಿಸಿಐ ಮೊರ್ನೆ ಅವರನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ.

Advertisement

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸೌತ್ ಆಫ್ರಿಕಾ ದಿಗ್ಗಜ ಬೌಲರ್ ಮೊರ್ನೆ ಮಾರ್ಕೆಲೋ ಅವರನ್ನು ಭಾರತದ ಹೊಸ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ಮೊರ್ನೆ ಮಾರ್ಕೆಲೋ ಸೆಪ್ಟೆಂಬರ್ 1ರಿಂದ ಟೀಂ ಇಂಡಿಯಾದ ಮುಖ್ಯ ಬೌಲರ್ ಕೋಚ್ ಆಗಿ ಕೆಲಸ ಶುರು ಮಾಡಲಿದ್ದಾರೆ.

ಈ ಹಿಂದೆ ಮಾರ್ಕೆಲೋ ಪಾಕ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟ್ರೈನಿಂಗ್ ನೀಡಿರುವ ಅನುಭವ ಇವರದ್ದಾಗಿದೆ. ಮೊರ್ನೆ ಮೊರ್ಕೆಲ್ ಸೌತ್​ ಆಫ್ರಿಕಾದ ಸ್ಟಾರ್ ಬೌಲರ್​ ಆಗಿದ್ದರು. ತಾನು ಆಡಿರೋ 86 ಟೆಸ್ಟ್ ಪಂದ್ಯಗಳಲ್ಲಿ ಮೊರ್ಕೆಲ್​ 309 ವಿಕೆಟ್‌ ಕಬಳಿಸಿದ್ದಾರೆ. ಇನ್ನು 117 ಏಕದಿನ ಪಂದ್ಯಗಳನ್ನು ಆಡಿದ್ದು, 188 ವಿಕೆಟ್‌ ಪಡೆದಿದ್ದಾರೆ. ಸದ್ಯ ಟೀಂ ಇಂಡಿಯಾದ ಬೋಲಿಂಗ್ ಕೋಚ್ ಆಗಿ ಬರ್ತಿದ್ದಾರೆ. ಗೌತಮ್ ಗಂಭೀರ್ ಅವರೇ ಡಿಮ್ಯಾಂಡ್ ಇಟ್ಟು ತಮ್ಮ ಸ್ಟಾಫ್ ಆಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ.

Advertisement

Advertisement
Advertisement
Tags :
Advertisement