Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಸ

06:37 PM Jan 19, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.19 :  ಸಿದ್ದರಾಮಯ್ಯ ನೇತೃತ್ವದ ಬಸವ ತತ್ವದಡಿಯ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಕರ್ನಾಟಕದ ಘನತೆಯನ್ನು ಹೆಚ್ಚಿಸಿದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.

ಶತಮಾನಗಳು ಉರುಳಿದರೂ ಈ ಸಮಾಜ ಅಸಮಾನತೆ, ಜಾತಿ ತಾರತಮ್ಯ, ಮೇಲು ಕೀಳು, ಶ್ರೇಷ್ಠ ಕನಿಷ್ಠ ಈ ಬಗೆಯ ನಾನಾ ರೋಗಗಳನ್ನು ತನ್ನ ಬೆನ್ನಿಗೆ ಅಂಟಿಸಿಕೊಂಡೇ ಬರುತ್ತಿದೆ. ಹಿಡಿಯಷ್ಟು ಜನ ಫಲಾನುಭವಿಗಳಾಗಳು ಬಹುಪಾಲು ಜನ ತೊಂದರೆ ಅನುಭವಿಸಬೇಕಾದ ಪರಿಪಾಠ ಇಂದಿಗೂ ನಿಂತಿಲ್ಲ, ಇರಲಿಕ್ಕೊಂದು ಸಾರು, ತೊಡಲಿಕ್ಕೊಂದು ಬಟ್ಟೆ, ದುಡಿಯಲಿಕ್ಕೊಂದು ಕಾಯಕ ಒದಗಿಸಲಾರದ ಈ ಸಮಾಜ ದ್ವೇಷಾಸೂಯೆಗಳನ್ನು ಮಾತ್ರ ಮುಂದಿನ ಶತಮಾನಗಳಿಗೂ ಹೆಚ್ಚಾಗುವಷ್ಟು ಬಿತ್ತುತ್ತಿದೆ. ಇದು ಬಹಳ ಆತಂಕದ ವಿಚಾರ. ಬಸವಣ್ಣನಂತಹ ಶ್ರೇಷ್ಠ ಚಿಂತಕ ಹನ್ನೆರಡನೇ ಶತಮಾನದಲ್ಲಿ ನಮ್ಮ ನಾಡಿಗೆ ಕೊಟ್ಟ ಅರಿವು ಜಾಗತಿಕ ಮಟ್ಟದಲ್ಲಿ ಯಾವ ಭೂಭಾಗದಲ್ಲಿ ಕೂಟ್ಟಿರಲಾರರು. ಶತಮಾನಗಳ ಹಿಂದಿನ ಅವರು ನೀಡಿದ ಅರಿವಿನ ವಚನಗಳ ಸಾರ ಇಂದಿಗೂ ಪ್ರಸ್ತುತವಾಗಿದೆ. ಅವರು ನಿಜವಾದ ಅರ್ಥದಲ್ಲಿ ಸಮಾಜೋ-ಧಾರ್ಮಿಕ ಸುಧಾರಕರು. ಅವರ ವಚನಗಳು ಉದಾತ್ತ ಚಿಂತನೆಗಳಿಂದ ಕೂಡಿವೆ. ನಮ್ಮ ಬುದ್ಧಿ ಮನಸ್ಸುಗಳನ್ನು ಕ್ರಿಯಾಶೀಲವಾಗಿಸುವ, ಚೈತನ್ಯ ತುಂಬುವ ಒಂದು ಅದ್ಭುತ ಶಕ್ತಿ. ಅವರ ಚಿಂತನೆ ನಮಗೆ ಆದರ್ಶಗಳು, ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.

Advertisement

ಜನಭಾಷೆಯನ್ನು ದೇವ ಭಾಷೆಯನ್ನಾಗಿಸಿದ ಶಿಷ್ಟದಿಂದ ಪರಿಶಿಷ್ಟದ ಕಡೆಗೆ, ಕೇಂದ್ರದಿಂದ ಅಂಚಿನ ಕಡೆಗೆ, ಪುರುಷ ಶಾಹಿಯಿಂದ ಲಿಂಗ ಸಂಬಂಧಿ ಸಮಾನತೆ ಕಡೆಗೆ, ಏಕರೂಪಿ ಸಮಾನತೆಯಿಂದ ಬಹುರೂಪಿ ಸಮಾನತೆಗೆ ಕಡೆಗೆ, ಆಲಯದಿಂದ ಬಯಲ ಕಡೆಗೆ ಹರಿಯುವಂತೆ-ಸರಿಯುವಂತೆ  ಮಾಡುವಲ್ಲಿ ಬಸವ ಸಂಸ್ಕೃತಿಯ ಕಾಣಿಕೆ ಅಪಾರವಾಗಿದೆ.

ಬಹುಸಂಖ್ಯೆಯ ಶಿವಶರಣರು-ಶರಣೆಯರು ವಿವಿಧ ಕಾಯಕ ಜಾತಿಯ ಸಂಸ್ಕೃತಿಯ ರಾಯಬಾರಿಗಳು. ಬಹುಜಾತಿಯ ಸಂಸ್ಕೃತಿಯ ರಾಯಭಾರಿಗಳ ನಾಯಕ ಬಸವಣ್ಣ. ಶಿವಶರಣರೇ ಒಪ್ಪುವಂತೆ ಅವರೆಲ್ಲರ ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬುದು ಸಮರ್ಥನೀಯ.

ಈ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ, ತಾರತಮ್ಯಗಳನ್ನು ಮೀರಬೇಕೆಂದು ಹೇಳಿದ, ಬದುಕನ್ನು ಕಾಯಕ ಪ್ರಧಾನವಾಗಿ ರೂಪಿಸಿಕೊಳ್ಳಬೇಕೆಂದು ನೀವೇದಿಸಿಕೊಂಡ ವಿಶ್ವ ಮಾನವತಾವಾದಿ, ಎಲ್ಲ ನೊಂದ ಜನರಿಗೆ ಆತ್ಮವಿಶ್ವಾಸ ನೀಡುವ ಮನ್ವಂತರ ಪ್ರವರ್ತಕ ಬಸವಣ್ಣ, ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಅಂತ ಘನತೆಯಿಂದ ಗೌರವದಿಂದ ಗರ್ವದಿಂದ ಹೇಳೋಣ ಎಂದು
ಜಗದ್ಗುರ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Advertisement
Tags :
BasavannachitradurgaCultural leaderKarnatakaProudSri Immadi Siddharameshwar Swamijisuddioneಕರ್ನಾಟಕಚಿತ್ರದುರ್ಗಬಸವಣ್ಣಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಸಂತಸಸಾಂಸ್ಕೃತಿಕ ನಾಯಕಸುದ್ದಿಒನ್
Advertisement
Next Article