Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೂ.1ರಿಂದ 6ರವರೆಗೆ ಬಾರ್ ಬಂದ್, ಎಣ್ಣೆ ಸಿಗಲ್ಲ..!

05:58 PM May 24, 2024 IST | suddionenews
Advertisement

ಬೆಂಗಳೂರು: ಮದ್ಯಪಾನ ಪ್ರಿಯರು ದಿನದಿಂದ ದಿಕ್ಕೆ ಹೆಚ್ಚಾಗುತ್ತಲೆ ಇದ್ದಾರೆ. ಇತ್ತಿಚೆಗೆ ಮದ್ಯಪಾನ ಸೇವನೆ ಅನ್ನೋದು ಕ್ರೇಜ್ ಆಗಿ ಬಿಟ್ಟಿದೆ. ಕೊರೊನಾ ಸಮಯದಲ್ಲಿ ಮದ್ಯಪಾನ ಸಿಗಲ್ಲ ಎಂದಾಗಲೇ ಮಾರುದ್ದ ಕ್ಯೂ ನಿಂತು ತೆಗೆದುಕೊಂಡು ಹೋಗಿದ್ದರು. ಇದೀಗ ಜೂನ್ 1ರಿಂದ ಮದ್ಯಪಾನ ಸಿಗಲ್ಲ ಎಂದು ಹೇಳಲಾಗುತ್ತಿದೆ. ಅದು ಆರು ದಿನಗಳ ಕಾಲ ಮದ್ಯಪಾನ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಎಲ್ಲಾ ಬಾರ್ ಗಳು ಬಂದ್ ಆಗಲಿವೆ.

Advertisement

ಎಂಎಲ್ಸಿ ಚುನಾವಣೆ ಇರುವ ಕಾರಣ ಹಾಗೇ ಜೂನ್ 4ರಂದು ಬಹಳ ಮುಖ್ಯವಾಗಿ ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವ ಕಾರಣ ಎಣ್ಣೆ ಮಾರಾಟ ಇರುವುದಿಲ್ಲ. ಜೂನ್ 3ರಂದು ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಜೂನ್ 4ರಂದು ಲೋಕಸಭೆ ಚುನಾಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಜೂನ್ 6ರಂದು ಎಂಎಲ್ಸಿ ಮತ ಎಣಿಕೆ ನಡೆಯಲಿದೆ. ಹೀಗಾಗಿ ಈ ಎಲ್ಲಾ ದಿನಗಳಲ್ಲೂ ಮದ್ಯದಂಗಡಿಯ ಬಾಗಿಲು ಮುಚ್ಚಿರುತ್ತದೆ. ಮದ್ಯಪ್ರಿಯರು ಜೂನ್ 1ರ ಒಳಗೆ ಎಷ್ಟು ಆಗುತ್ತೋ ಅಷ್ಟು ಎಣ್ಣೆ ಶೇಖರಿಸಿಟ್ಟುಕೊಳ್ಳಬಹುದು.

ಈ ಬಾರಿಯ ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರಧಾನಿ ಮೋದಿ ಅವರು ಹ್ಯಾಟ್ರಿಕ್ ಬಾರಿಸುವ ಮೂಲಕ ಮತ್ತೆ ಪ್ರಧಾನಿ ಪಟ್ಟ ಅಲಂಕರಿಸುತ್ತಾರಾ..? ಬಿಜೆಪಿಯನ್ನು ಸೋಲಿಸಲೆ ಎಂದೆ ಇಂಡಿಯಾ ಕೂಟ ಒಂದಾಗಿದೆ. ಆ ಪಕ್ಷವೇನಾದರೂ ಗೆಲ್ಲಲಿದೆಯಾ ಎಂಬೆಲ್ಲಾ ಪ್ರಶ್ನೆಗಳು ಜನರನ್ನು ಕಾಡುತ್ತಿದೆ. ಈ ಬಾರಿ ಮತದಾರ ಯಾರ ಕೈಹಿಡಿದಿದ್ದಾನೆ ಎಂಬುದು ಜೂನ್ 4ರಂದು ಬಹಿರಂಗವಾಗಲಿದೆ. ಆ ದಿನ ಕೂಡ ಸಮೀಪಿಸುತ್ತಿದೆ. ದೇಶದ ಕೆಲವೆಡೆ ಇನ್ನು ಮತದಾನ ನಡೆಯುತ್ತದೆ ಇದೆ. ಜೂನ್ 4ಕ್ಕೆ ಫಲಿತಾಂಶ ಹೊರ ಬರಲಿದೆ.

Advertisement

Advertisement
Tags :
bengaluruchitradurgasuddionesuddione newsಎಣ್ಣೆ ಸಿಗಲ್ಲಚಿತ್ರದುರ್ಗಬಾರ್ ಬಂದ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article