Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಂದೋಬಸ್ತ್ ಮಾಡಬೇಕು.. ಇಲ್ಲಂದ್ರೆ ಮತ್ತೊಂದು ಗೋದ್ರಾ ನಡೆಯುತ್ತೆ : ಬಿಕೆ ಹರಿಪ್ರಸಾದ್

03:32 PM Jan 03, 2024 IST | suddionenews
Advertisement

ಬೆಂಗಳೂರು: ರಾಮ ಮಂದಿರ.. ಅಯೋಧ್ಯ.. ಇತಿಹಾಸಕ್ಕೂ ಪುರಾಣಕ್ಕೂ ಬಹಳ ವ್ಯತ್ಯಾಸವಿದೆ. ರಾಮಮಂದಿರ ಕಟ್ಟಿರುವುದು, ನಾನು ಒಬ್ಬ ಹಿಂದೂವಾಗಿ ಹೇಳುವುದು, ಯಾವುದೋ ಧಾರ್ಮಿಕ ಗುರುಗಳು ಬಂದು ರಾಮಮಂದಿರವನ್ನು ಉದ್ಘಾಟನೆ ಮಾಡುತ್ತಿದ್ದಾರೆ ಎಂದರೆ ನಾವ್ಯಾರು ಕೂಡ ನಿಯಂತ್ರ, ಆಮಂತ್ರಣವನ್ನು ಕಾಯುತ್ತಾ ಕುಳಿತಿರುತ್ತಿರಲಿಲ್ಲ. ನಾವೆಲ್ಲಾ ಹೋಗುತ್ತಾ ಇದ್ದೆವುಮ ಆದರೆ ಇದನ್ನು ಮಾಡುತ್ತಾ ಇರುವುದು ವಿಶ್ವ ಗುರು. ವಿಶ್ವಗುರು ಯಾವ ಧರ್ಮಕ್ಕೆ ಸೇರಿದ್ದಾರೆ ಎಂಬುದು ಇನ್ನು ಗೊತ್ತಿಲ್ಲ. ಅಮಿತ್ ಶಾ ಯಾವ ಧರ್ಮಕ್ಕೆ ಸೇರಿದ್ದಾರೆ ಎಂಬುದು ಗೊತ್ತಿಲ್ಲ. ಇದೇನು ರಾಜಕೀಯ ಕಾರ್ಯಕ್ರಮವಾ..? ಎಂದು ಪ್ರಶ್ನಿಸಿದ್ದಾರೆ.

Advertisement

 

ಇದು ನನ್ನ ವೈಯಕ್ತಿಕವಾದ ಅಭಿಪ್ರಾಯ. ಪಕ್ಷಕ್ಕೂ ಈ ಹೇಳಿಕೆಗೂ ಸಂಬಂಧವಿಲ್ಲ. ಆದರೆ ಇದು ಧಾರ್ಮಿಕ ಕಾರ್ಯಕ್ರಮ ಅಲ್ಲ, ರಾಜಕೀಯ ಕಾರ್ಯಕ್ರಮ. ಇದನ್ನು ರಾಜಕೀಯವಾಗಿಯೇ ನೋಡಬೇಕಾಗುತ್ತದೆ. ನನಗೆ ತಿಳಿದಿರುವ ಪ್ರಕಾರ ಹಿಂದೂ ಧರ್ಮದ ಮುಖ್ಯಸ್ಥರು ಎಂದು ಹೇಳಿದರೆ ಅದು ಶಂಕರಾಚಾರ್ಯರು. ನಮ್ಮ ಹಿಂದೂ ಧರ್ಮದ ಯಾವುದೇ ಗುರುಗಳು ಹೋಗಿ ಉದ್ಘಾಟನೆಯನ್ನು ಮಾಡಿದರು ಸಹ ಹೋಗುತ್ತೇವೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯಾವುದೇ ಗುರುಗಳಲ್ಲ ಹೀಗಾಗಿ ಆ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

Advertisement

 

ಪೂಜಾ ಸ್ಥಳವನ್ನು ಧ್ವಂಸ ಮಾಡಿ, ಇನ್ನೊಂದನ್ನು ಕಟ್ಟುವಂತದ್ದು ಯಾವುದೇ ಇತಿಹಾಸದಲ್ಲೂ ಇಲ್ಲ. ಬಹಳ ಸ್ಪಷ್ಟವಾಗಿ ಹೇಳುತ್ತೀ‌ನಿ ಇದು ಧಾರ್ಮಿಕ ಕಾರ್ಯಕ್ರಮ ಅಲ್ಲ. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರೀತಿಯ ಕಟ್ಟೆಚ್ಚರವನ್ನು ವಹಿಸಿಕೊಳ್ಳಬೇಕಾಗುತ್ತದೆ‌. ಗುಜರಾತ್ ನಲ್ಲಿ ಇದೇ ಸಮಯದಲ್ಲಿ ಕರಸೇವಕರ ಹತ್ಯೆ ನಡೆದಿತ್ತು. ಅದೇ ರೀತಿ ಒಂದು ಸೃಷ್ಟಿ ಮಾಡುವುದಕ್ಕೆ ಪದರಯತ್ನ ಮಾಡುತ್ತಾರೆ. ಕರ್ನಾಟಕದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯುವುದಕ್ಕೆ ಅವಕಾಶ ಕೊಡಬಾರದು. ಯಾರ್ಯಾರು ಅಯೋಧ್ಯೆಗೆ ಹೋಗುತ್ತಾರೆ ಅವರೆಲ್ಲರಿಗೂ ಹೋಗುವುದಕ್ಕೆ ಬಂದೋ ಬಸ್ತ್ ಮಾಡಿಕೊಡಬೇಕಾಗುತ್ತದೆ. ಇಲ್ಲ ಅಂದರೆ ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ನೋಡಲಿಕ್ಕೆ ಆಗಲ್ಲ ಎಂದಿದ್ದಾರೆ.

Advertisement
Tags :
bangaloreBK Hariprasadಬಂದೋಬಸ್ತ್ಬಿಕೆ ಹರಿಪ್ರಸಾದ್ಬೆಂಗಳೂರು
Advertisement
Next Article