Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಾವೇರಿಗಾಗಿ ಮತ್ತೆ ಮತ್ತೆ ಬಂದ್ : ಈ ಬಾರಿ ಕರ್ನಾಟಕವಲ್ಲ ತಮಿಳುನಾಡಿನಿಂದ ಬಂದ್..!

03:02 PM Oct 09, 2023 IST | suddionenews
Advertisement

ಬೆಂಗಳೂರು : ಕಾವೇರಿ ಹೋರಾಟ ಮುಗಿಯುವಂತೆ ಕಾಣುತ್ತಿಲ್ಲ. ಇತ್ತ ರಾಜ್ಯದಲ್ಲಿ ಮಳೆಯಿಲ್ಲ. ಸಮಯಕ್ಕೆ ಸರಿಯಾಗ ರಾಜ್ಯದಲ್ಲಿ ಮಳೆಯಾಗಿದ್ದರೆ ಕಾವೇರಿ ನೀರು ತಮಿಳುನಾಡಿಗೆ ಸಲೀಸಾಗಿ ಹರಿಯುತ್ತಿತ್ತು. ಆದರೆ ಮಳೆ ಇಲ್ಲದೆ ರೈತರು ಮೊದಲೇ ಕಂಗಲಾಗಿದ್ದಾರೆ. ಇದರ ನಡುವೆ ತಮಿಳುನಾಡು ರೈತರು ನೀರು ಬಿಡಲೇಬೇಕೆಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

Advertisement

ಕಾವೇರಿ ಕೊಳ್ಳದಲ್ಲಿ ನೀರು ಖಾಲಿಯಾಗುತ್ತಿದೆ. ರಾಜ್ಯದಲ್ಲಿ ಬರದ ಸ್ಥಿತಿ ಎಂಬುದನ್ನು ಕರ್ನಾಟಕ ಸರ್ಕಾರ ತಿಳಿಸುವ ಪ್ರಯತ್ನ ಮಾಡಿದರು, ಕಾವೇರಿ ಪ್ರಾಧಿಕಾರ ಅದನ್ನು ಅರ್ಥ ಮಾಡಿಕೊಳ್ಳದೆ, ತಮಿಳುನಾಡಿನ ಪರವೇ ತೀರ್ಪು ನೀಡುತ್ತಿದೆ. ಇದಕ್ಕೆ ರೊಚ್ಚುಗೆದ್ದ ಕರ್ನಾಟಕ ರೈತರು ಎರಡು ಬಾರಿ ಬಂದ್ ಮಾಡಿದ್ದಾರೆ. ಒಮ್ಮೆ ಬೆಂಗಳೂರು ಬಂದ್ ಇನ್ನೊಮ್ಮೆ ಕರ್ನಾಟಕ ಬಂದ್. ಆದ್ರೆ ಕಾವೇರಿಗಾಗಿ ಇನ್ನೊಮ್ಮೆ ಬಂದ್ ನಡೆಯಲಿದೆ. ಅದು ತಮಿಳುನಾಡು ರೈತರಿಂದ.

ಹೌದು ಅಕ್ಟೋಬರ್ 11 ರಂದು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ರೈತರು ಪ್ರತಿಭಟನೆ ಮಾಡುವುದಕ್ಕೆ ಸಿದ್ಧವಾಗಿದ್ದಾರೆ. ಕಾವೇರಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಆದೇಶವಿದ್ದರು ಕರ್ನಾಟಕ ನೀರು ಬಿಡುತ್ತಿಲ್ಲ ಎಂದೇ ತಮಿಳುನಾಡು ಆಕ್ರೋಶ ವ್ಯಕ್ತಪಡಿಸಿದೆ. ಕಾವೇರಿ ನೀರನ್ನು ಆದೇಶದಂತೆ ಬಿಡಿಸಬೇಕು ಎಂದು ಬಂದ್ ಗೆ ಕರೆ ನೀಡಿವೆ. ಬಂದ್ ನ ದಿನದಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಲಿವೆ.

Advertisement

Advertisement
Tags :
bandhbengalurufeaturedKarnatakakaverisuddionetamilnaduಕರ್ನಾಟಕಕಾವೇರಿತಮಿಳುನಾಡುಬಂದ್ಬೆಂಗಳೂರುಸುದ್ದಿಒನ್
Advertisement
Next Article