Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ತಡೆ : ಫೋನ್ ಪೇ ಆ್ಯಪ್ ಡಿಲೀಟ್ ಮಾಡುತ್ತಿರುವ ಕನ್ನಡಿಗರು

10:35 PM Jul 19, 2024 IST | suddionenews
Advertisement

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಬಗ್ಗೆ ಅಭಿಯಾನ ಶುರುವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಅಸ್ತು ಎಂದಿತ್ತು. ಆದರೆ ಕೆಲವೊಂದು ಕಂಪನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಅಂದೇ ಆದೇಶವನ್ನು ತಡೆಹಿಡಿದಿತ್ತು. ಈ ವಿಚಾರಕ್ಕೆ ಫೋನ್ ಪೇ ಮಾಲೀಕ ಸಮೀರ್ ಕೂಡ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

Advertisement

'ನನಗೆ 46 ವರ್ಷ. 15ಕ್ಕಿಂತ ಹೆಚ್ಚು ವರ್ಷಗಳ ಕಾಲ ರಾಜ್ಯದಲ್ಲಿ ಎಂದಿಗೂ ವಾಸಿಸಲಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಿದವರು. ಅವರಿಗೆ ದೇಶದಾದ್ಯಂತ ಕೆಲಸ ಮಾಡಿದ್ದಾರೆ. ಅವರ ಮಕ್ಕಳು ಕರ್ನಾಟಕದಲ್ಲಿ ಕೆಲಸಕ್ಕೆ ಅರ್ಹರಲ್ಲವೆ..? ಎಂದು ಫೋನ್ ಪೇ ಸಿಇಒ ಸಮೀರ್ ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು. ಇದೀಗ ಫೋನ್ ಪೇ ಡಿಲೀಟ್ ಮಾಡಲು ಕನ್ನಡಿಗರು ನಿರ್ಧಾರ ಮಾಡಿದ್ದಾರೆ.

ಬೆಳಗ್ಗೆಯಿಂದಾನೂ ಟ್ವಿಟ್ಟರ್ ನಲ್ಲಿ ಬಾಯ್ಕಾಟ್ ಫೋನ್ ಪೇ ಟ್ರೆಂಡಿಂಗ್ ನಲ್ಲಿದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ವಿರೋಧಿಸಿದ ಫೋನ್ ಪೇ ಡಿಲೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನ ಫೋನ್ ಪೇ ಅಪ್ಲಿಕೇಷನ್ ಅನ್ನು ಡಿಲೀಟ್ ಮಾಡುತ್ತಿದ್ದಾರೆ. ಇಲ್ಲಿನ ನೆಲ, ಜಲ ಉಪಯೋಗಿಸಿಕೊಂಡು 15 ವರ್ಷದಿಂದ ರಾಜ್ಯದಲ್ಲಿ ಕನ್ನಡವನ್ನು ಕಲಿಯಲು ಪ್ರಯತ್ನ ಮಾಡದೆ, ಈಗ ಕನ್ನಡಿಗರನ್ನು ಅವಮಾನಿಸಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋನ್ ಪೇ ಅಪ್ಲಿಕೇಷನ್ ಅನ್ನು ಡಿಲೀಟ್ ಮಾಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಬಾಯ್ಕಾಟ್ ಫೋನ್ ಪೇ ಟ್ರೆಂಡಿಂಗ್ ಮಾಡುತ್ತಿದ್ದಾರೆ.

Advertisement

Advertisement
Tags :
banbengaluruchitradurgaKannadigasphone pay appprivate sectorreservation for Kannadigassuddionesuddione newsಆ್ಯಪ್ ಡಿಲೀಟ್ಕನ್ನಡಿಗರಿಗೆ ಮೀಸಲಾತಿಗೆ ತಡೆಖಾಸಗಿ ವಲಯಚಿತ್ರದುರ್ಗಫೋನ್ ಪೇಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article