ಪ್ರಜ್ವಲ್ ಕೇಸಲ್ಲಿ ಸದ್ದು ಮಾಡಿದ್ದ ವಕೀಲ ದೇವರಾಜೇಗೌಡಗೆ ಜಾಮೀನು..!
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ಫೋಟೋ, ವಿಡಿಯೋಗಳು ಲೀಕ್ ವಿಷಯದಲ್ಲಿ ಸುದ್ದಿಯಲ್ಲಿದ್ದ ದೇವರಾಜೇಗೌಡ ಅವರಿಗೆ ಇದೀಗ ರಿಲೀಫ್ ಸಿಕ್ಕಿದೆ. ಕೋರ್ಟ್ ನಿಂದ ಜಾಮೀನು ಮಂಜೂರು ಆಗಿದೆ. ವಕೀಲ ದೇವರಾಜೇಗೌಡ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠದಿಂದ ಜಾಮೀನು ಮಂಜೂರಾಗಿದೆ. ನ್ಯಾ.ಎಂ.ಜಿ ಉಮಾ ಅವರಿದ್ದ ಪೀಠದಿಂದ ಜಾಮೀನು ಸಿಕ್ಕಿದೆ.
ಹಳೆಯ ಕೇಸುಗಳೇ ದೇವರಾಜೇಗೌಡ ಅವರಿಗೆ ಮುಳುವಾಗಿತ್ತು. ಒಂದೊಂದೇ ಕೇಸುಗಳು ದಾಖಲಾಗಿದ್ದವು. ಅತ್ಯಾಚಾರ, ಜಾತಿನಿಂದನೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದಲ್ಲಿಯೂ ದೂರು ದಾಖಲಾಗಿತ್ತು. ಮಾರ್ಚ್ 14 ರಂದು ಡಿಸಿ ದೂರು ನಿಡೀದ್ದರು. ದೂರಿನ ಆಧಾರದ ಮೇಲೆ ಹಾಸನದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂತ್ರಸ್ತೆ ದೂರಿನ ಮೇಲೆ ಅತ್ಯಾಚಾರ ಕೇಸಿನ ಮೇಲೆ ವಕೀಲ ದೇವರಾಜೇಗೌಡ ಪೊಲೀಸರ ಅತಿಥಿಯಾಗಿದ್ದರು. ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ದೇವರಾಜೇಗೌಡ ಅವರು ಇಷ್ಟು ದಿನ ಹಾಸನ ಜಿಲ್ಲಾ ಕಾರಾಗೃಹದಲ್ಲಿಯೇ ಇದ್ದರು. ಇನ್ನು ಎಂಟು ದಿನದಲ್ಲಿ ಜೈಲಿನಿಂದ ಹೊರಗೆ ಬರ್ತಿನಿ ಎಂದೇ ದೇವರಾಜೇಗೌಡ ಹೇಳಿದ್ದರು. ಅದರಂತೆ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸಿನಲ್ಲಿ ದೇವರಾಜೇಗೌಡರ ಹೆಸರು ಜೋರು ಸದ್ದು ಮಾಡಿತ್ತು. ಡ್ರೈವರ್ ಕಾರ್ತಿಕ್ ಮೇಲೆ ದೇವರಾಜೇಗೌಡ ಆರೋಪ ಮಾಡಿದ್ದರೆ, ಡ್ರೈವರ್ ಕಾರ್ತಿಕ್, ಪುನಃ ದೇವರಾಜೇಗೌಡರ ಮೇಲೆ ಆರೋಪಿಸಿದ್ದರು. ಫೋಟೋ, ವಿಡಿಯೋಗಳನ್ನು ಅವರಿಗೆ ಬಿಟ್ಟರೆ ಇನ್ಯಾರಿಗೂ ನಾನು ಕೊಟ್ಟಿಲ್ಲ ಎಂದಿದ್ದರು. ವಕೀಲ ದೇವರಾಜೇಗೌಡ ಈ ಪ್ರಕತಣದಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದರು.