Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅದ್ದೂರಿ ನಿಶ್ಚಿತಾರ್ಥ..!

09:21 PM Dec 14, 2024 IST | suddionenews
Advertisement

ಪಿವಿ ಸಿಂಧು ಇಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉದ್ಯಮಿಯಾಗಿರುವ ವೆಂಕಟ ದತ್ತ ಸಾಯಿ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇಂದು ಅಧಿಕೃತವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

Advertisement

ಪಿವಿ ಸಿಂಧು ಮದುವೆಯಾಗುತ್ತಿರುವ ವೆಂಕಟ ದತ್ತ ಸಾಯಿ ಅವರು ಸಕ್ಸಸ್ ಫುಲ್ ಉದ್ಯಮಿ. ಮೂಲತಃ ಹೈದ್ರಾಬಾದ್ ನವರು. ಲಿಬರಲ್ ಸ್ಟಡೀಸ್ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಿಬಿಎ ಕೂಡ ಮುಗಿಸಿದ್ದಾರೆ. ಸದ್ಯ ಪೊಸಿಡೆಕ್ಸ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನೊಲಜಿ ಸಂಸ್ಥೆಯಲ್ಲಿ ಸೈನ್ಸ್ ಅಂಡ್ ಮಷಿನ್ ಲರ್ನಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಅನುಭವಿ ಉದ್ಯಮಿ ಆಗಿರುವ ಇವರು ಹಣಕಾಸು, ಡೇಟಾ ವಿಜ್ಞಾನ ಮತ್ತು ಆಸ್ತಿ ನಿರ್ವಹಣೆ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ.

 

Advertisement

ಪಿ.ವಿ.ಸಿಂಧು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ. ಭಾರತ ಪ್ರತಿನಿಧಿಸುವ ಪಿ.ವಿ.ಸಿಂಧು ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ದೇಶದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ. ಇದೇ ವರ್ಷದಲ್ಲಿ ನಡೆದ ಏಷ್ಯಾ ಟೀಂ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಬ್ಯಾಡ್ಯವಿಶ್ವ ಚಾಂಪಿಯನ್ ಶಿಪ್ ನಲ್ಲಿ ಒಂದು ಬಾರಿ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಒಲಂಪಿಕ್ಸ್, ಏಷ್ಯನ್, ಕಾಮನ್ ವೆಲ್ತ್ ಗೇಮ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಎರಡು ಕುಟುಂಬಸ್ಥರು ನೋಡಿ ಮಾಡುತ್ತಿರುವ ಜೋಡಿಯಿದು. ಡಿಸೆಂಬರ್ 20 ರಿಂದ ಮದುವೆ ಕಾರ್ಯಗಳು ಶುರುವಾಗಲಿವೆ. ಡಿಸೆಂಬರ್ 24ಕ್ಕೆ ಮದುವೆಯಾಗಲಿದ್ದಾರೆ. ಹತ್ತು ದಿನ ಮೊದಲು ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisement
Tags :
Badminton starbengaluruchitradurgalavish engagementPV Sindhusuddionesuddione newsಅದ್ದೂರಿ ನಿಶ್ಚಿತಾರ್ಥಚಿತ್ರದುರ್ಗಪಿ.ವಿ.ಸಿಂಧುಬೆಂಗಳೂರುಬ್ಯಾಡ್ಮಿಂಟನ್ ತಾರೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article