For the best experience, open
https://m.suddione.com
on your mobile browser.
Advertisement

ಕಿರಿಕ್ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ ಕಿರಿಕ್ : ರಕ್ಷಿತ್ ಶೆಟ್ಟಿ ಮೇಲೆ ದೂರು ದಾಖಲಾಗಿದ್ದೇಕೆ..?

06:10 PM Jul 15, 2024 IST | suddionenews
ಕಿರಿಕ್ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ ಕಿರಿಕ್   ರಕ್ಷಿತ್ ಶೆಟ್ಟಿ ಮೇಲೆ ದೂರು ದಾಖಲಾಗಿದ್ದೇಕೆ
Advertisement

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯಾಚುಲರ್ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ನವೀನ್ ಕುಮಾರ್ ಎಂಬುವವರು ನಟ ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವರ ನಿರ್ಮಾಣದ ಸಿನಿಮಾದಲ್ಲಿ ಕಾಪಿರೈಟ್ಸ್ ಉಲ್ಲಂಘಟನೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ.

Advertisement
Advertisement

ಕಳೆದ ಮಾರ್ಚ್ ನಲ್ಲಿ ರಕ್ಷಿತ್ ಶೆಟ್ಟಿ‌ ನಿರ್ಮಾಣದ ಲೂಸ್ ಮಾದ ಯೋಗಿ, ದಿಗಂತ್, ಅಚ್ಯುತ್ ಕುಮಾರ್ ನಟನೆಯ, ಸಖತ್ ಕಾಮಿಡಿ ಇರುವ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ಎರಡು ಹಾಡುಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಬಳಕೆಯಾಗಿರುವ ಎರಡು ಹಾಡನ್ನು ಅನುಮತಿ ಇಲ್ಲದೆ ಬಳಕೆ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ.

ಎಂಆರ್ಟಿ ಮ್ಯೂಸಿಕ್ ಪಾಲುದಾರ ನವೀನ್ ಈ ದೂರು ನೀಡಿದ್ದಾರೆ. ಈ ಮೊದಲೇ ಬ್ಯಾಚುಲರ್ ಪಾರ್ಟಿ ಟೀಂ ನವೀನ್ ಜೊತೆಗೆ ಈ ಹಾಡುಗಳ ಕುರಿತು ಚರ್ಚೆ ನಡೆಸಿತ್ತಂತೆ. ಆದರೆ ಮಾತುಕತೆ ವಿಫಲವಾಗುತ್ತಂತೆ. ಆದರೂ ರಕ್ಷಿತ್ ಶೆಟ್ಟಿಯವರು ಸಿನಿಮಾದಲ್ಲಿ ತಮ್ಮ ಹಾಡುಗಳನ್ನು ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಬಳಕೆಯಾದ ಎರಡು ಹಾಡುಗಳೆಂದರೆ ನ್ಯಾಯ ಎಲ್ಲಿದೆ ಸಿನಿಮಾದ ನ್ಯಾಯ ಎಲ್ಲಿದೆ ಎಂಬ ಹಾಡು ಹಾಗೂ ಗಾಳಿಮಾತು ಸಿನಿಮಾದ ಒಮ್ಮೆ ನಿನ್ನನ್ನು ಎಂಬ ಎರಡು ಹಾಡನ್ನು ಬಳಕೆ ಮಾಡಿಕೊಳ್ಳಲಾಗಿದೆ.

Advertisement
Advertisement

ಹೀಗೆ ಅನುಮತಿಯೇ ಇಲ್ಲದೆ ಬಳಕೆ ಮಾಡಿಕೊಂಡ ಹಾಡಿನಿಂದಾಗಿ ಎಂಆರ್ಟಿ ಮ್ಯೂಸಿಕ್ ಪಾಲುದಾರ ನವೀನ್ ಅವರು ಕೋಪಗೊಂಡು ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲೂ ಶಾಂತಿಕ್ರಾಂತಿ ಹಾಡನ್ನು ಬಳಕೆ ಮಾಡಿದ್ದರು ಎಂದು ಲಹರಿ ಮ್ಯೂಸಿಕ್ ಸಂಸ್ಥೆ ದೂರು ನೀಡಿತ್ತು.

Advertisement
Tags :
Advertisement