Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಾರಿ ತಪ್ಪಿಸುವ ಜಾಹೀರಾತು ನೀಡಿದ ಬಾಬಾ ರಾಮ್ ದೇವ್ : ಕೋಟಿ ದಂಡದ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

10:44 AM Nov 22, 2023 IST | suddionenews
Advertisement

ಪತಂಜಲಿ ಜಾಹೀರಾತುಗಳ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಆ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಬಾಬಾ ರಾಮ್ ದೇವ್ ಗೆ ಎಚ್ಚರಿಕೆಯನ್ನು ನೀಡಿದೆ. ಒಂದು ಕೋಟಿ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ.

Advertisement

ಆಲೋಪತಿ ಔಷಧಿಗಳನ್ನು ಗುರಿಯಾಗಿಸಿಕೊಂಡು ಜನರ ದಾರಿ ತಪ್ಪಿಸುತ್ತಿರುವ ಜಾಹೀರಾತುಗಳನ್ನು ನೀಡಿದ್ದಕ್ಕೆ ಪತಂಜಲಿ ಆಯುರ್ವೇದಿಕ್ ಕಂಪನಿಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಜನರ ದಾರಿ ತಪ್ಪಿಸುವ ನಿಮ್ಮ ಎಲ್ಲಾ ಜಾಹೀರಾತುಗಳನ್ನು ಈ ಕೂಡಲೇ ನಿಲ್ಲಿಸಬೇಕು. ಇದನ್ನು ಕೋರ್ಟ್ ತುಂಬಾ ಗಂಭೀರವಾಗಿ ಪರಿಗಣಿಸಲಿದೆ. ನಿಮ್ಮ ಪ್ರಾಡಕ್ಟ್ ಗಳು ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಸುಳ್ಳು ಹೇಳಿದರೆ ಬರೋಬ್ಬರಿ ಒಂದು ಕೋಟಿ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಇದರ ಜೊತೆಗೆ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಪಂತಂಜಲಿ ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳನ್ನು ಎಲ್ಲಿಯೂ ಪರಿಶೀಲನೆ ಮಾಡಿಲ್ಲ. ಡ್ರಗ್ಸ್​ ಅಂಡ್ ಅದರ್ ಮ್ಯಾಜಿಕ್ ರೆಮೆಡಿಸ್ ಆ್ಯಕ್ಟ್-1954 ಮತ್ತು ಕನ್ಸುಮರ್ ಪ್ರೊಟೆಕ್ಷನ್ ಆ್ಯಕ್ಟ್-2019ರ ಪ್ರಕಾರ ಇದು ಅಪರಾಧ ಎಂದು ಐಎಂಎ ವಾದಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಎಚ್ಚರಿಕೆಯನ್ನು ನೀಡಿದೆ. ಜಾಹೀರಾತುಗಳ ಮೇಲೆ ನಿಗಾ ವಹಿಸದೆ ಇದ್ದಲ್ಲಿ ಒಂದು ಕೋಟಿ ದಂಡ ಬೀಳುವ ಸಾಧ್ಯತೆ ಇದೆ.

Advertisement

Advertisement
Tags :
Baba RamdevSupreme Courtಎಚ್ಚರಿಕೆ ನೀಡಿದಕೋಟಿ ದಂಡದಾರಿ ತಪ್ಪಿಸುವ ಜಾಹೀರಾತುಬಾಬಾ ರಾಮ್ ದೇವ್ಸುಪ್ರೀಂ ಕೋರ್ಟ್
Advertisement
Next Article