For the best experience, open
https://m.suddione.com
on your mobile browser.
Advertisement

ಅತ್ತಿಬೆಲೆ ಪಟಾಕಿ ದುರಂತ : ಕಾಲೇಜು ಫೀಸ್ ಗಾಗಿ ಕೆಲಸಕ್ಕೆ ಬಂದಿದ್ದ 8 ಯುವಕರು..!

04:48 PM Oct 08, 2023 IST | suddionenews
ಅತ್ತಿಬೆಲೆ ಪಟಾಕಿ ದುರಂತ   ಕಾಲೇಜು ಫೀಸ್ ಗಾಗಿ ಕೆಲಸಕ್ಕೆ ಬಂದಿದ್ದ 8 ಯುವಕರು
Advertisement

Advertisement

ಬೆಂಗಳೂರು: ದೀಪಾವಳಿ ಹಬ್ಬಕ್ಕೆಂದು ಪಟಾಕಿ ಸಂಗ್ರಹಿಸುವ ತಯಾರಿ ನಡೆಯುತ್ತಿತ್ತು. ಆದರೆ ದುರಂತ ಅಂದ್ರೆ ಪಟಾಕಿ ತಂದಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. ಇದು ಅತ್ತಿಬೆಲೆ ಬಳಿ ನಡೆದಿದೆ. ದುರ್ಘಟನೆಯಲ್ಲಿ ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. ಅದರ ಎಂಟು ಜನ ಯುವಕರೆ ಇದ್ದು, ಕಾಲೇಜು ಶುಲ್ಕಕ್ಕಾಗಿ ಕೆಲಸಕ್ಕೆ ಬಂದಿದ್ದರು.

ಮೃತಪಟ್ಟ ಆದಿಕೇಶವ್, ಗಿರಿ, ಆಕಾಶ್, ವಿಜಯ್ ರಾಘವನ್, ವೆಳಂಬರದಿ, ವಿನೋದ್, ಮುನಿವೆಲ್ ದುರಂತದಲ್ಲಿ ಮೃತ ಪಟ್ಟಿದ್ದಾರೆ. ಈ ಎಂಟು ಜನ ಒಂದೇ ಊರಿನವರು ಎನ್ನಲಾಗಿದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ, ಓದುವುದಕ್ಕಾಗಿ ಕೆಲಸಕ್ಕೆ ಬಂದಿದ್ದರು ಎನ್ನಲಾಗಿದೆ.

Advertisement

ಕಾಲೇಜು ಶುಲ್ಕ ಕಟ್ಟುವುದಕ್ಕೋಸ್ಕರ ತಮಿಳುನಾಡಿನಿಂದ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದರಂತೆ. ತಮ್ಮ ಓದಿನ ದುಡಿಮೆಯನ್ನು ತಾವೇ ಮಾಡಬೇಕು ಎಂಬ ಉದ್ದೇಶದಿಂದ. ಆದರೆ ವಿಧಿ ಅವರ ಬದುಕಲ್ಲಿ ಕೆಟ್ಟದಾಗಿನೇ ಆಟವಾಡಿದೆ. ಎಂಟು ಜನರು ಪಟಾಕಿ ಬ್ಲಾಸ್ಟ್ ನಿಂದಾಗಿ ಮೃತಪಟ್ಟಿದ್ದಾರೆ. ಅತ್ತ ಟಿ ಅಮ್ಮಪೇಟೈನಲ್ಲಿ ಪೋಷಕರು ನೋವು ಮುಗಿಲು ಮುಟ್ಟಿದೆ. ಮಕ್ಕಳನ್ನು ಯಾಕಾದರು ಕೆಲಸಕ್ಕೆ ಕಳುಹಿಸಿದ್ದೆವೋ ಎಂಬ ನೋವಲ್ಲಿದ್ದಾರೆ.

Tags :
Advertisement