For the best experience, open
https://m.suddione.com
on your mobile browser.
Advertisement

ಪ್ರೀತಿಸಿ ಮದುವೆಯಾದ ಗಂಡನ ಮೇಲೆ ಆಥಿಯಾಗೆ ದ್ವೇಷ : ಕೆ.ಎಲ್ ರಾಹುಲ್ ಅಂಥದ್ದೇನು ಮಾಡಿದ್ರು..?

12:40 PM Sep 13, 2024 IST | suddionenews
ಪ್ರೀತಿಸಿ ಮದುವೆಯಾದ ಗಂಡನ ಮೇಲೆ ಆಥಿಯಾಗೆ ದ್ವೇಷ   ಕೆ ಎಲ್ ರಾಹುಲ್ ಅಂಥದ್ದೇನು ಮಾಡಿದ್ರು
Advertisement

ಕ್ರಿಕೆಟ್ ಆಟಗರಾರು ಬಾಲಿವುಡ್ ನಟಿಯರ ಪ್ರೀತಿಯಲ್ಲಿ ಬೀಳುವುದು ಸರ್ವೇ ಸಾಮಾನ್ಯ. ಕ್ರಿಕೆಟರ್ ಹಾಗೂ ಬಾಲಿವುಡ್ ನಟಿಯರು ಮದುವೆಯಾಗಿರುವ ಸಾಕಷ್ಟು ಉದಾಹರಣೆಗಳು ಇದಾವೆ. ಹಾಗೇ ಹಲವು ವರ್ಷಗಳಿಂದ ಪ್ರೀತಿಸಿದ್ದ ಆಥಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಕಳೆದ ವರ್ಷವಷ್ಟೇ ಮದಯವೆಯಾಗಿದ್ದಾರೆ. ಆದರೆ ಆಥಿಯಾಗೆ ರಾಹುಲ್ ಮೇಲೆ ಸಿಕ್ಕಾಪಟ್ಟೆ ದ್ವೇಷ ಉಂಟಾಗಿದೆ. ಅದರ ಬಗ್ಗೆ ಸ್ವತಃ ಆಥಿಯಾ ಅವರೇ ಹೇಳಿಕೊಂಡಿದ್ದಾರೆ.

Advertisement

ಆಥೀಯಾ ಹಾಗೂ ರಾಹುಲ್ ಯಾವುದೋ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಆ ಭೇಟಿ ಆಗಾಗ ಮಾತುಕತೆಯೊಂದಿಗೆ ಮುಂದುವರೆಯಿತು. ಮುಂದಿನ ದಿನಗಳಲ್ಲಿ ಅದು ಗೆಳೆತನ, ಪ್ರೀತಿ ಆಗಿ ಬದಲಾಯಿತು. ಹಲವು ವರ್ಷಗಳ ಕಾಲ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿದರು. ಅರ್ಥ ಮಾಡಿಕೊಂಡರು. ಬಳಿಕ ಮನೆಯವರಿಗೆಲ್ಲಾ ತಿಳಿಸಿ ಮದುವೆ ಕೂಡ ಆದರೂ. ಈಗ ಗಂಡನ ಮೇಲ್ಯಾಕೆ ಆಥಿಯಾಗೆ ಕೋಪ ಎಂಬುದೇ ಎಲ್ಲರ ಪ್ರಶ್ನೆ.

ಕ್ರಿಕೆಟರ್ಸ್ ಗೆ ಟ್ಯಾಟೂ ಮೇಲೆ ಅದೇನೋ ವಿಶೇಷ ಕ್ರೇಜ್. ಆಲ್ಮೋಸ್ಟ್ ಕ್ರಿಕೆಟರ್ಸ್ ದೇಹದ ಮೇಲೆ ಚಿತ್ತ ಚಿತ್ತಾರದ ರೀತಿಯಲ್ಲಿ ಟ್ಯಾಟೂಗಳು ಇರುತ್ತವೆ. ಕೆ ಎಲ್ ರಾಹುಲ್ ದೇಹದ ಮೇಲೂ ಆ ಟ್ಯಾಟೂಗಳನ್ನು ನೋಡಬಹುದು. ಒಂದೊಂದು ಟ್ಯಾಟೂ ಕೂಡ ವಿಭಿನ್ನವಾಗಿವೆ. ಹಾಗೇ ಮೈತುಂಬಾ ಟ್ಯಾಟುಗಳೇ ಕಾಣಿಸುತ್ತವೆ. ಈ ಬಗ್ಗೆಯೇ ಮಾತನಾಡಿರುವ ಆಥಿಯಾ, ರಾಹುಲ್ ದೇಹದ ತುಂಬೆಲ್ಲಾ ಟ್ಯಾಟೂಗಳಿವೆ. ಆದರೆ ನನಗೆ ವೈಯಕ್ತಿಕವಾಗಿ ಆ ಯಾವ ಟ್ಯಾಟೂಗಳು ಇಷ್ಟವಿಲ್ಲ. ಈ ಒಂದು ವಿಚಾರದಲ್ಲಿ ನಾನು ಅವರನ್ನು ದ್ವೇಷಿಸುತ್ತೇನೆ ಎಂದಿದ್ದಾರೆ. ಆದರೆ ರಾಹುಲ್ ಅವರು ಟ್ಯಾಟೂ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿದ್ದಾರೆ.

Advertisement

Advertisement
Advertisement
Tags :
Advertisement