For the best experience, open
https://m.suddione.com
on your mobile browser.
Advertisement

ಬೆಂಗಳೂರಿಗೂ ಆಸ್ನಾ ಎಫೆಕ್ಟ್ : ಎಲ್ಲೆಲ್ಲಿ ಮಳೆಯಾಗಲಿದೆ..?

02:23 PM Aug 30, 2024 IST | suddionenews
ಬೆಂಗಳೂರಿಗೂ ಆಸ್ನಾ ಎಫೆಕ್ಟ್   ಎಲ್ಲೆಲ್ಲಿ ಮಳೆಯಾಗಲಿದೆ
Advertisement

ಬೆಂಗಳೂರಿಗೂ ಆಸ್ನಾ ಎಫೆಕ್ಟ್ : ಎಲ್ಲೆಲ್ಲಿ ಮಳೆಯಾಗಲಿದೆ..?

Advertisement
Advertisement

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಮಳೆ ಜೋರಾಗಿದೆ. ವಾಯುಭಾರ ಕುಸಿತ ಸೈಕ್ಲೋನ್ ಆಗಿದೆ. ಈ ಸೈಕ್ಲೋನ್ ಸದ್ಯ ಆಸ್ನಾ ಸೈಕ್ಲೋನ್ ಆಗಿ ಪರಿವರ್ತನೆಯಾಗಿದೆ. ಈ ಆಸ್ನಾ ಸೈಕ್ಲೋನ್ ಎಫೆಕ್ಟ್ ಕರ್ನಾಟಕದಲ್ಲೂ ಎಫೆಕ್ಟ್ ಆಗಿದೆ‌. ಸದ್ಯ ಇದರ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಜೋರು ಮಳೆಯಾಗಿತ್ತು. ಹಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಪರದಾಟ‌ ಶುರುವಾಗಿತ್ತು. ವಾಹನ ಸವಾರರಿಗೂ ಹಿಂಸೆಯಾಗಿತ್ತು. ಅಲ್ಲಲ್ಲಿ ನೀರು ನಿಂತು ಪಜೀತಿ ಕ್ರಿಯೇಟ್ ಮಾಡಿತ್ತು. ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಗ್ಗೆಯಿಂದಾನೂ ಮೋಡ ಕವಿದ ವಾತಾವರಣವಿದೆ. ಹೀಗಾಗಿ ಇಂದು ಸಂಜೆ ವೇಳೆಗೆ ರಾಜ್ಯದಲ್ಲಿ ಜೋರು ಮಳೆಯಾಗಲಿದೆ‌. ಹಾಗೇ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

Advertisement
Advertisement

ಆಗಸ್ಟ್ ತಿಂಗಳಲ್ಲಿ ಸೈಕ್ಲೋನ್ ಕಾಣಿಸಿಕೊಳ್ಳುವುದೇ ಅಪರೂಪ. 1976ರಲ್ಲಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಆಗಸ್ಟ್ ತಿಂಗಳಲ್ಲಿ ಸೈಕ್ಲೋನ್ ಕಾಣಿಸಿಕೊಂಡ ದಾಖಲೆಗಳು ಇಲ್ಲ. ಇದೀಗ ಈ ವರ್ಷ ಆಗಸ್ಟ್ ತಿಂಗಳಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಆಸ್ನಾ ಎಂದು ಹೆಸರಿಡಲಾಗಿದೆ. ಈಗಾಗಲೇ ಈ ಆಸ್ನಾ ಸೈಕ್ಲೋನ್ ನಿಂದ ಗುಜರಾತ್ ರಾಜ್ಯ ತತ್ತರಿಸಿ ಹೋಗಿದೆ. ಸಾವು ನೋವುಗಳು ಹೆಚ್ಚಾಗಿವೆ. ಕಳೆದ 4 ದಿನದಲ್ಲೊ ಆಸ್ನಾ ಸೈಕ್ಲೋನ್ ನಿಂದಾಗಿ 32 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿದ 1,200 ಮಂದಿಯನ್ನು ವಿವಿಧ ರಕ್ಷಣಾ‌ ತಂಡಗಳು ರಕ್ಷಣೆ ಮಾಡಿವೆ. ಆದರೆ ಆಸ್ನಾ ಸೈಕ್ಲೋನ್ ಕರ್ನಾಟಕದ ಮೇಲೆ ಅಷ್ಟೊಂದು ಪರಿಣಾಮ ಬೀರದೆ ಹೋದರೂ ಮಳೆ ಹೆಚ್ಚಾಗಲು ಬಹುದು.

Advertisement
Tags :
Advertisement