Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆರ್. ಅಶೋಕ್ ನಾಮಫಲಕ ತೆಗೆದರೆ ಆ ಕೊಠಡಿಗೆ ಕಾಲಿಡುತ್ತೇನೆ : ಬಿಜೆಪಿ ಶಾಸಕ ವಿಶ್ವನಾಥ್

05:41 PM Dec 12, 2023 IST | suddionenews
Advertisement

 

Advertisement

 

ಬೆಳಗಾವಿ: ಆರ್ ಅಶೋಕ್ ಅವರ ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿಯಲ್ಲಿಯೇ ವಿರೋಧವಿತ್ತು. ಆದರೆ ಮುಂದಿನ ಲೋಕಸಭಾ ಚುನಾವಣೆಯ ಸ್ಟಾಟರ್ಜಿ ಬಿಜೆಪಿಯಲ್ಲಿ ಬೇರೆಯದ್ದೇ ಆಗಿತ್ತು. ಹೀಗಾಗಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆಗೆ ಸಮಯ ತೆಗೆದುಕೊಂಡೇ ಆಯ್ಕೆ ಮಾಡಲಾಗಿತ್ತು. ಈ ನಡುವೆ ವಿಪಕ್ಷ ನಾಯಕ ಆರ್ ಅಶೋಕ್ ಇದ್ದರೆ ನಾನು ಆ ಕೊಠಡಿಗೆ ಹೆಜ್ಜೆ ಇಡುವುದಿಲ್ಲ ಎಂದು ಬಿಜೆಪಿ ಶಾಸಕ ವಿಶ್ವನಾಥ್ ಹೇಳಿದ್ದಾರೆ. ಈ ಮೂಲಕ ಮನಸ್ತಾಪಗಳು ಇನ್ನು ಮುಂದುವರೆದಂತೆ ಕಾಣುತ್ತಿದೆ.

Advertisement

ಸದನದಲ್ಲಿ ಚರ್ಚೆ ಮಾಡಬೇಕಾದ ವಿಚಾರಗಳ ಕುರಿತು ಬಿಜೆಪಿ ನಾಯಕರು ಕ್ಲೋಸ್ಡ್ ಡೋರ್ ಮೀಟಿಂಗ್ ಅನ್ನು ಅರೆಂಜ್ ಮಾಡಿದ್ದರು. ಅದು ಪ್ರತಿಪಕ್ಷ ನಾಯಕನ ಕೊಠಡಿಯಲ್ಲಿಯೇ ಆಗಿತ್ತು‌. ಈ ವೇಳೆ ಶಾಸಕ ಮುನಿರತ್ನ ಅವರು, ಯಲಹಂಕ ಶಾಸಕ ವಿಶ್ವನಾಥ್ ಅವರ ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದರು. ಆರ್. ಅಶೋಕ್ ಅವರ ಕೊಠಡಿ ಬರುತ್ತಿದ್ದಂತೆ ಒಳಗೆ ಬರಲು ನಿರಾಕರಣೆ ಮಾಡಿದರು.

'ಅಶೋಕ್ ಹೆಸರಿನ ನಾಮಫಲಕ ಇರುವ ತನಕ ಆ ಕೊಠಡಿಗೆ ನಾನು ಕಾಲು ಇಡುವುದಿಲ್ಲ. ಬೇಕಾದರೆ ಆ ಬೋರ್ಡ್ ತೆಗೆಯಲಿ, ನಂತರದಲ್ಲಿ ನಾನು ಹೋಗುತ್ತೇನೆ' ಎಂದು ಕಡ್ಡಿ ತುಂಡಾಗುವಂತೆ ಹೇಳಿದರು. ಇದೇ ವೇಳೆ ಬಿವೈ ವಿಜಯೇಂದ್ರ ಅವರ ಬಳಿಯೂ ಚರ್ಚೆ ನಡೆಸಿದ್ದಾರೆ. ಇಬ್ಬರು ಕುಳಿತು ಮಾತುಕತೆ ನಡೆಸಿದ್ದಾರೆ.

Advertisement
Tags :
belagaviBjpfeaturedMLA Vishwanathr ashoksuddioneಆರ್ ಅಶೋಕ್ನಾಮಫಲಕಬಿಜೆಪಿಬೆಳಗಾವಿಶಾಸಕ ವಿಶ್ವನಾಥ್ಸುದ್ದಿಒನ್
Advertisement
Next Article