ಬಾಲರಾಮನ ಕೆತ್ತಿದ ಅರುಣ್ ಯೋಗಿರಾಜ್ ಗೆ 'ಅಭಿನವ ಅಮರಶಿಲ್ಪಿ' ಬಿರುದು
ಕಾರಾವಾರ: ಅರುಣ್ ಯೋಗಿರಾಜ್ ಎಂದರೆ ಈಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭವ್ಯ ರಾಮಮಂದಿರಲ್ಲಿ ಮುಗುಳ್ನಗು ಸೂಸುತ್ತ, ಭಕ್ತರನ್ನು ಕೈ ಬೀಸಿ ಕರೆಯುತ್ತಿರುವ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಅರುಣ್ ಯೋಗಿರಾಜ್ ಹೆಸರು ಈಗ ದೇಶಾದ್ಯಂತ ಅಜರಾಮರವಾಗಿದೆ. ಪ್ರತಿಯೊಬ್ಬರು ಅರುಣ್ ಯೋಗಿರಾಜ್ ಅವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ. ಅವರ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿವೆ. ಇದಿಒಗ ಮಹತ್ವದ ಪ್ರಶಸ್ತಿ ಒಂದು ಸಂದಿದೆ.
ಡಾ.ಹಿರೇಮಠ ಫೌಂಡೇಷನ್ ವತಿಯಿಂದ ಅರುಣ್ ಯೋಗಿರಾಜ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಅಭಿನವ ಅಮರಶಿಲ್ಪಿ ಎಂಬ ಬಿರುದನ್ನು ನೀಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕನ್ವೇಷನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಬಿರುದು ನೀಡಿ, ಗೌರವಿಸಲಾಗಿದೆ. ಅರುಣ್ ಯೋಗಿರಾಜ್ ಅವರು ಕೆತ್ತಿರುವ ಬಾಲರಾಮನನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಬಾಲರಾಮನನ್ನು ಕಣ್ತುಂಬಿಕೊಂಡು, ಧನ್ಯರಾಗುತ್ತಿದ್ದಾರೆ.
ಬೇಲೂರು ಮತ್ತು ಹಳೆಬೀಡಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿರುವ ಶಿಲ್ಪಿ ಜಕಣಾಚಾರಿಗೆ ಅಮರಶಿಲ್ಪಿ ಎಂಬ ಬಿರುದು ಹೊಂದಿದ್ದಾರೆ. ಅದಕ್ಕೆ ಸಮಾನಾರ್ಥವಾಗಿ ಅಯೋಧ್ಯೆಯ ರಾಮಮಂದಿರದ ಬಾಲಕ ರಾಮನ ಸುಂದರ ಮೂರ್ತಿಯನ್ನು ಕೆತ್ತಿರುವ ಮೈಸೂರು ಮೂಲದ ಅರುಣ್ ಯೋಗಿರಾಜ್ ಡಾ. ಹಿರೇಮಠ ಫೌಂಡೇಷನ್ 'ಅಭಿನವ ಅಮರಶಿಲ್ಪಿ' ಬಿರುದು ನೀಡಿ ಗೌರವಿಸಿತು. ಮೈಸೂರು ಜಿಲ್ಲೆಯ ಒಂದು ಹಳಿಯ ದಲಿತರ ಜಮೀನಿನಿಂದ ತೆಗೆದುಕೊಂಡು ಹೋಗಲಾಗಿದ್ದು, ಕೃಷ್ಣ ಶಿಲೆಯಲ್ಲಿ 51 ಇಂಚಿನ ರಾಮಲಲ್ಲಾನ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಿದ್ದರು. ಈ ವಿಗ್ರವನ್ನು ಕಳೆದ ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.