Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗಕ್ಕೆ ಡಿಸೆಂಬರ್ 17 ರಂದು ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ ಆಗಮನ

04:01 PM Dec 15, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ. ಡಿ.15 :  ನಗರಕ್ಕೆ ಡಿ. 17 ರಂದು ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆ ಆಗಮಿಸಲಿದೆ ಎಂದು ಶ್ರೀ ಭಗೀರಥ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷರಾದ ಎಸ್.ನಾಗರಾಜ್ ತಿಳಿಸಿದ್ದಾರೆ.

Advertisement

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಹರೀಶ್ ಮೆಹತೊ ಚೌಹಾಣ್ ಮತ್ತು ತಂಡದ ನೇತೃತ್ವದಲ್ಲಿ ಯಾತ್ರೆ ಪ್ರಾರಂಭವಾಗಿದ್ದು, ಈಗಾಗಲೇ ನೆರೆ ರಾಜ್ಯಗಳಾದ ಆಂಧ್ರಪ್ರದೇಶ್, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಚಾರ ಮಾಡಿ ಡಿ.9 ರಂದು ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಿದೆ ಅಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚಾರ ಮಾಡಿ ಡಿ. 17 ರಂದು ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶ ಮಾಡಲಿದ್ದು, 2024ರ ಫೆಬ್ರವರಿ ವೇಳೆಗೆ ನವದೆಹಲಿಯ ರಾಮಲೀಲಾ ಮೈದಾನವನ್ನು ತಲುಪಲಿದೆ ಎಂದರು.

ಉಪ್ಪಾರ ಸಮಾಜವನ್ನು ಸಂಘಟಿಸುವುದು ಮತ್ತು ಒಗ್ಗೂಡಿಸುವುದು, ಸಮುದಾಯದ ಜನರಿಗೆ ಜಾಗೃತಿಯನ್ನು ಮೂಡಿಸುವುದು, ಶ್ರೀ ಭಗಿರಥ ಜಯಂತಿಯನ್ನು ಕರ್ನಾಟಕದ ಜೊತೆಗೆ ದೇಶದ್ಯಾಂತ ಆಚರಿಸಲು ಆದೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸುವುದು, ಉಪ್ಪಾರ ಸಮಾಜವನ್ನು ಎಸ್.ಸಿ. ಅಥವಾ ಎಸ್.ಟಿ.ಗೆ ಸೇರ್ಪಡೆಗೆ ಶೀಪಾರಸ್ಸು ಮಾಡಲು ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡವನ್ನು ಹಾಕುವುದು ವಿವಿಧ ಹೆಸರಿನಲ್ಲಿ ಕರೆಯಲ್ಪಡುವ ಉಪ್ಪಾರ ಸಮಾಜವನ್ನು ಭಗೀರಥ ಅಥವಾ ಉಪ್ಪಾರ್ ಎಂಬ ಒಮದೇ ಹೆಸರಿನ ಸೂರಿನ ಅಡಿಯಲ್ಲಿ ತಂದು ಸಂಘಟಿಸುವುದು ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಇದ್ದಲ್ಲದೆ ಶ್ರೀ ಭಗೀರಥ ಸಮಾಜ ಅಭೀವೃದ್ದಿ ನಿಗಮ ಸ್ಥಾಪಸಿ ವಾರ್ಷಿಕ ಅನುದಾನ ನೀಡುವಂತೆ ಒತ್ತಾಯಿಸ ಲಾಗುವುದೆಂದು ಎಂದು ನಾಗರಾಜ್ ತಿಳಿಸಿದರು.

ಡಿ.17 ರ ಮದ್ಯಾಹ್ನ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪಕ್ಕದ ಯೂನಿಯನ್ ಪಾರ್ಕನಿಂದ ರಥ ಯಾತ್ರೆ ಪ್ರಾರಂಭವಾಗಲಿದ್ದು, ಸಂತೇಪೇಟೆ, ಬಿ.ಡಿ.ರಸ್ತೆ, ಕಿತ್ತೂರುರಾಣಿ ಚನ್ನಮ್ಮ ವೃತ್ತ, ಮಹಾವೀರ ವೃತ್ತ, ವಾಸವಿ ವೃತ್ತ, ಗಾಯತ್ರಿ ವೃತ್ತದ ಮೂಲಕ ಉಮಾಪತಿ ಕಲ್ಯಾಣ ಮಂಟಪ ತಲುಪಲಿದೆ, ಈ ಸಮಯದಲ್ಲಿ ವಿವಿಧ ಜಾನಪದ ಕಲಾಮೇಳಗಳು, ಪೂರ್ಣ ಕುಂಭದೊಂದಿಗೆ ರಥಯಾತ್ರೆಯನ್ನು ಸ್ವಾಗತಿಸಲಾಗುವುದು.

ಈ ರಥಯಾತ್ರೆಯ ಮೆರವಣಿಗೆಯ ನೇತೃತ್ವವನ್ನು ಹೊಸದುರ್ಗ ತಾಲ್ಲೂಕಿನ ಬಿ.ವಿ.ನಗರದ ಭಗೀರಥ ಪೀಠದ ಶ್ರೀ ಡಾ.ಪುರೋಷತ್ತಮಾನಂದ ಶ್ರೀಗಳು ವಹಿಸಲಿದ್ದಾರೆ. ಅಂದಿನ ಮೆರವಣಿಗೆಯ ನಂತರ ಉಮಾಪತಿ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಮಾಜ ಭಾಂದವರು ಆಗಮಿಸುವುದರ ಮೂಲಕ ಮೆರವಣಿಗೆ ಮತ್ತು ಸಭೆಯನ್ನು ಯಶಸ್ವಿಗೂಳಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಭಗೀರಥ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಎನ್.ವಿರೇಶ್, ಪ್ರದಾನ ಕಾರ್ಯದರ್ಶಿ ಎಲ್.ಮಹೇಶ್, ಮಾಜಿ ಅಧ್ಯಕ್ಷರಾದ ಆರ್, ಮೂರ್ತಿ, ಖಂಜಾಚಿ ಹೆಚ್.ಅಂಜಪ್ಪ, ಚಿತ್ರದುರ್ಗ ತಾ.ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಬಾಯ್ಲರ್ ರವಿ, ಸಲಹೆಗಾರರಾದ ಬಸವರಾಜು ಮತ್ತು ವೆಂಕಟೇಶ್ ಹಾಜರಿದ್ದರು.

Advertisement
Tags :
17th DecemberchitradurgaSri Bhagirath Bharat Jana Kalyana Rathಚಿತ್ರದುರ್ಗಡಿಸೆಂಬರ್ 17ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ
Advertisement
Next Article