ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಾ ಇದ್ದೀರಾ..? ಇಲ್ಲಿದೆ ನೋಡಿ ಸಿಹಿ ಸುದ್ದಿ..!
ಸಾಜಷ್ಟು ಜನ ತಮಗೆ ಸ್ಥಳೀಯವಾಗಿ ಕೆಲಸ ಸಿಕ್ಕರೆ ಸಾಕು ಎಂದು ಕಾಯುತ್ತಾ ಇರುತ್ತಾರೆ. ಒಂದು ವೇಳೆ ನೀವೂ ಶಿವಮಿಗ್ಗದವರಾಗಿದ್ದು ಶಿವಮೊಗ್ಗದಲ್ಲಿಯೇ ಕೆಲಸ ಹುಡುಕುತ್ತಿದ್ದರೆ, ಪದವಿ ಪಡೆದವರಾಗಿದ್ದರೆ ಈ ಕೆಲಸಕ್ಕೆ ಅರ್ಜಿ ಹಾಕಿ. ಡಿಸೆಂಬರ್ 23ಕ್ಕೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಪ್ರಾಣಿ ಆಹಾರ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಔಷಧ ಹಾಗೂ ವಿಷಶಾಸ್ತ್ರ ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗ, ಪಶು ವೈದ್ಯಕೀಯ ಶರೀರ ಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಾಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು 21ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಫಿಸಿಯೋಲಾಜಿ ಹಾಗೂ ಸೋಷಿಯಲ್ ವರ್ಕ್ ಪದವಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 56,700 ರೂಪಾಯಿ ಇರಲಿದೆ. ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ 50 ಸಾವಿರ ಇರಲಿದೆ. ಡೀನ್ ಕಚೇರಿ, ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ವಿಳಾಸದಲ್ಲಿ ನೇರ ಸಂದರ್ಶನ ಇರಲಿದೆ. www.kvafsu.edu.in ಗೆ ಭೇಟಿ ನೀಡಬಹುದು ಅಥವಾ 08182-200872 ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.