Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಪ್ಪು ಪಪ್ಪು ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ

12:43 PM Apr 14, 2024 IST | suddionenews
Advertisement

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನರಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನ ಅವರ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಅವರ ಕುಟುಂಬಸ್ಥರು ಹೃದಯಾಘಾತವಾಗಿದೆ ಎನ್ನುತ್ತಿದ್ದಾರೆ.

Advertisement

ಸದ್ಯ ಅವರ ಮೃತದೇಹವನ್ನು ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಇಡಲಾಗಿದೆ. ನಿರ್ಮಾಪಕ ಸೌಂದರ್ಯ ಜಗದೀಶ್ ಸ್ಯಾಂಡಲ್ ವುಡ್ ನಲ್ಲಿ ಅಪ್ಪು ಪಪ್ಪು, ರಾಮ್ ಲೀಲಾ, ಸ್ನೇಹಿತರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಬಾಡಿ ಬಿಲ್ಡರ್ ಕೂಡ ಆಗಿದ್ದರು. ಆದರೆ ಇದೀಗ ಇದ್ದಕ್ಕಿದ್ದ ಹಾಗೇ ಸಾವನ್ನಪ್ಪಿರುವುದು ಎಲ್ಲರಿಗೂ ಶಾಕ್ ಆಗಿದೆ. ಸ್ಯಾಂಡಲ್ ವುಡ್ ಗಣ್ಯರು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Advertisement

Advertisement
Tags :
Appu Pappubangaloremovie producerpassed awaySoundarya Jagadishಅಪ್ಪು ಪಪ್ಪುನಿಧನ ವಾರ್ತೆಬೆಂಗಳೂರುಸಿನಿಮಾ ನಿರ್ಮಾಪಕಸೌಂದರ್ಯ ಜಗದೀಶ್
Advertisement
Next Article