For the best experience, open
https://m.suddione.com
on your mobile browser.
Advertisement

ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ : ಯಾವೆಲ್ಲಾ ರೈತರಿಗೆ ಲಾಭ..?

08:51 PM Jul 24, 2024 IST | suddionenews
ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ   ಯಾವೆಲ್ಲಾ ರೈತರಿಗೆ ಲಾಭ
Advertisement

ಬೆಂಗಳೂರು: ಇಂದು ವಿಧಾನಸಭೆಯ ಅಧಿವೇಶನದಲ್ಲಿ ನೀರಾವರಿ ಯೋಜನೆಯ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದೆ. ನೀರಾವರಿ ಸಚಿವ ಡಿಕೆ ಶಿವಕುಮಾರ್ ಯೋಜನೆಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡಿದ್ದಾರೆ. ಇದರಿಂದ ಕಾಲುವೆಗಳ ಕೊನೆ ಭಾಗದ ರೈತರಿಗೂ ನೀರು ಸಿಗಲಿದೆ.

Advertisement

ನೀರಾವರಿ ಕಾಲುವೆಗಳಿಂದ ಪಂಪ್ ಹಾಕಿ ನೀರು ಎತ್ತುತ್ತಿದ್ದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುವುದೇ ಕಷ್ಟ ಸಾಧ್ಯವಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅಧಿವೇಶನದಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಬಿಲ್ ತರುತ್ತೇವೆ. ಎಲ್ಲರ ಜೊತೆಗೆ ಚರ್ಚೆ ನಡೆಸಿ ಮಂಡಿಸುತ್ತೇವೆ ಎಂದು ಹೇಳಿದ್ದರು. ಅದರಂತೆ ಇಂದು ಅನುಮೋದನೆ ಪಡೆದಿದ್ದಾರೆ.

1964ರಲ್ಲಿ ಈ ಬಗ್ಗೆ ಕಾಯ್ದೆ ಮಾಡಲಾಗಿತ್ತು. ನಂತರ ಯಾವುದೇ ತಿದ್ದುಪಡಿ ಆಗಿರಲಿಲ್ಲ. ಕಾಲುವೆಗಳಿಗೆ ಯಾರೂ ಪಂಪ್ ಸೆಟ್ ಹಾಕಿ ನೀರು ತೆಗೆಯಬಾರದು. ಅಕ್ಕಪಕ್ಕದ ರೈತರು ನೀರು ತೆಗೆಯುವುದಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ನೀರಾವರಿ ವಿಚಾರದಲ್ಲಿ ನಡೆಯುವ ಅಕ್ರಮಗಳ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸೂಪರಿಡೆಂಟ್ ಇಂಜಿನಿಯರಿಂಗ್ ಗಳಿಗೆ ಅಧಿಕಾರ ನೀಡಲಾಗಿದೆ. ಪ್ರತಿಪಕ್ಷಗಳ ಶಾಸಕರ ತೀರ್ಮಾನವನ್ನು ಸ್ವೀಕರಿಸಲಾಗಿದೆ. ರೈತರಿಗೆ ನೀರು ಕೊಡುವ ನಾಲೆಗಳ ರಕ್ಷಣೆಗಾಗಿ ಈ ಕಾನೂನು ತರಲಾಗಿದೆ ಎಂದಿದ್ದಾರೆ.

Advertisement

ಮಂಡ್ಯ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಟೇಲ್ ಎಂಡ್ ಭಾಗಗಳಿಗೆ ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರು ಶೇಕಡ 50ರಷ್ಟು ಸಹ ನೀರು ಹೋಗುತ್ತಿಲ್ಲ. ಎಲ್ಲರೂ ಸಹಕಾರ ನೀಡಿದರೆ ನಾವೂ ಯೋಜನೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುತ್ತೇವೆ ಎಂದು ನೀರಾವರಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಇಂದು ಆ ಯೋಜನೆಗೆ ಬಿಲ್ ಪಾಸ್ ಮಾಡಿಸಿಕೊಂಡಿದ್ದಾರೆ.

Tags :
Advertisement