ನೂತನ ಸಂಸದ ಮಂಜುನಾಥ್ ಕಾರ್ಯಕ್ಕೆ ಮೆಚ್ಚುಗೆ : ಗಾಯಾಳು ಸೇಫ್
ರಾಮನಗರ: ಡಾ.ಮಂಜುನಾಥ್ ಜಯದೇವದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಜನಸೇವೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಜಯದೇವ ಆಸ್ಪತ್ರೆಗೆ ರೋಗಿಗಳು ಧೈರ್ಯವಾಗಿ ಹೋಗುತ್ತಿದ್ದರು. ಹಾಗೇ ಬೇಗ ಗುಣಮುಖರಾಗಿಯೂ ಬರುತ್ತಿದ್ದರು. ಈಗ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಮಂದಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಇಂದು ಕನಕಪುರ ರಸ್ತೆಯಲ್ಲಿ ಅಪಘಾತವಾದ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಡಾ.ಸಿ.ಎನ್.ಮಂಜುನಾಥ್ ಟ್ರಾವೆಲ್ ಮಾಡುತ್ತಿದ್ದರು. ಈ ವೇಳೆ ಕನಕಪುರ - ಸಾತನೂರು ಮಾರ್ಗ ಮಧ್ಯೆ ಅಪಘಾತವಾಗಿದೆ. ಈ ಅಪಘಾತವನ್ನು ಕಂಡ ಡಾ.ಸಿ.ಎನ್.ಮಂಜುನಾಥ್ ಅವರು ತಮ್ಮ ಕಾರು ನಿಲ್ಲಿಸಿದ್ದಾರೆ. ಗಾಯಾಳುಗಳನ್ನು ಕಂಡು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅವರ ಆರೋಗ್ಯದ ತಪಾಸಣೆ ಮಾಡಿದ್ದಾರೆ. ಬಳಿಕ ಹತ್ತಿರದ ಆಸ್ಪತ್ರೆಗೆ ಕರೆ ಮಾಡಿ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಮಂಜುನಾಥ್ ಕುಟುಂಬಸ್ಥರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿದರು. ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು. ಅದರಲ್ಲೂ ಡಿ.ಕೆ.ಸುರೇಶ್ ಅವರ ಎದುರು ಸ್ಪರ್ಧೆ ಮಾಡಿದರು. ಪ್ರಚಾರ ಕಾರ್ಯದಲ್ಲೂ ಯಾರನ್ನೂ ದೂಷಿಸಲಿಲ್ಲ. ಜನ ಕೂಡ ಮಂಜುನಾಥ್ ಅವರನ್ನು ಕೈಹಿಡಿದರು. ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದರು. ಕ್ಷೇತ್ರದ ಜನತೆಯ ಜೊತೆಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಸಮಸ್ಯೆಗಳನ್ನು ಕೇಳುತ್ತಿದ್ದಾರೆ. ಈಗ ಕ್ಷೇತ್ರದಿಂದ ಬರುವಾಗ ರಸ್ತೆ ಅಪಘಾತ ಕಂಡು ಮಂಜುನಾಥ್ ಮಾನವೀಯತೆ ಮೆರೆದಿದ್ದಾರೆ. ಈ ಕೆಲಸಕ್ಕೆ ಬೆಂಗಳೂರು ಗ್ರಾಮಾಂತರ ಜನತೆ ಹೆಮ್ಮೆ ಪಟ್ಟಿದ್ದಾರೆ.