For the best experience, open
https://m.suddione.com
on your mobile browser.
Advertisement

ಬಿಜೆಪಿ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ : ಚಿತ್ರದುರ್ಗ ಜಿಲ್ಲಾಧ್ಯಕ್ಷ ಎ.ಮುರಳಿ ಅವಧಿ ವಿಸ್ತರಣೆ

08:16 AM Jan 15, 2024 IST | suddionenews
ಬಿಜೆಪಿ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ   ಚಿತ್ರದುರ್ಗ ಜಿಲ್ಲಾಧ್ಯಕ್ಷ ಎ ಮುರಳಿ ಅವಧಿ ವಿಸ್ತರಣೆ
Advertisement

Advertisement
Advertisement

ಸುದ್ದಿಒನ್, ಬೆಂಗಳೂರು, ಜನವರಿ. 15 : ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Advertisement

ಒಟ್ಟು 39 ಸಂಘಟನಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದ್ದು, ಹಾಲಿ ಶಾಸಕರಾದ ರಾಯಚೂರಿನ ಡಾ. ಶಿವರಾಜ್ ಪಾಟೀಲ್ ಹಾಗೂ ಜಯನಗರದ ಸಿ.ಕೆ. ರಾಮಮೂರ್ತಿ ಹಾಗೂ ಮೂವರು ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿಎಸ್. ನಿರಂಜನ್ ಕುಮಾರ್ ಮತ್ತು ಅರುಣ್ ಕುಮಾರ್ ಪೂಜಾರ ಅವರಿಗೂ ಜಿಲ್ಲಾಧ್ಯಕ್ಷ ಪಟ್ಟ ಒಲಿದುಬಂದಿದೆ.

Advertisement

ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎ. ಮುರುಳಿ ಅವರನ್ನು ಮರು ನೇಮಕ ಮಾಡಿದ್ದು ಅವಧಿಯನ್ನು ವಿಸ್ತರಿಸಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ

ಮೈಸೂರು ನಗರ- ಎಲ್. ನಾಗೇಂದ್ರ

ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ

ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್

ಮಂಡ್ಯ- ಇಂದ್ರೇಶ್ ಕುಮಾರ್

ಹಾಸನ- ಸಿದ್ದೇಶ್ ನಾಗೇಂದ್ರ

ಕೊಡಗು- ರವಿ ಕಾಳಪ್ಪ

ದಕ್ಷಿಣ ಕನ್ನಡ- ಸತೀಶ್ ಕುಂಪಲ

ಉಡುಪಿ- ಕಿಶೋರ್ ಕುಂದಾಪುರ

ಚಿಕ್ಕಮಗಳೂರು- ದೇವರಾಜ ಶೆಟ್ಟಿ

ಶಿವಮೊಗ್ಗ- ಟಿ.ಡಿ. ಮೇಘರಾಜ್

ಉತ್ತರ ಕನ್ನಡ- ಎನ್.ಎಸ್. ಹೆಗಡೆ

ಹಾವೇರಿ- ಅರುಣ್ ಕುಮಾರ್ ಪೂಜಾರ

ಹುಬ್ಬಳ್ಳಿ- ಧಾರವಾಡ- ತಿಪ್ಪಣ್ಣ ಮಜ್ಜಗಿ

ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ

ಗದಗ- ರಾಜು ಕುರಡಗಿ

ಬೆಳಗಾವಿ ನಗರ- ಗೀತಾ ಸುತಾರ್

ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್

ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್

ಬಾಗಲಕೋಟೆ- ಶಾಂತಗೌಡ ಪಾಟೀಲ್

ವಿಜಯಪುರ- ಆರ್.ಎಸ್. ಪಾಟೀಲ್

ಬೀದರ್- ಸೋಮನಾಥ‌ ಪಾಟೀಲ್

ಕಲ್ಬುರ್ಗಿ ನಗರ- ಚಂದ್ರಕಾಂತ ಪಾಟೀಲ್

ಕಲ್ಬುರ್ಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ

ಯಾದಗಿರಿ- ಅಮೀನ್ ರೆಡ್ಡಿ

ರಾಯಚೂರು- ಡಾ. ಶಿವರಾಜ ಪಾಟೀಲ್

ಕೊಪ್ಪಳ- ನವೀನ್ ಗುಳಗಣ್ಣನವರ್

ಬಳ್ಳಾರಿ- ಅನಿಲ್ ಕುಮಾರ್ ಮೋಕಾ

ವಿಜಯನಗರ- ಚನ್ನಬಸವನಗೌಡ ಪಾಟೀಲ್

ದಾವಣಗೆರೆ- ರಾಜಶೇಖರ್

ಚಿತ್ರದುರ್ಗ- ಎ. ಮುರಳಿ

ತುಮಕೂರು – ಹೆಚ್.ಎಸ್. ರವಿಶಂಕರ್

ಮಧುಗಿರಿ- ಬಿ.ಸಿ. ಹನುಮಂತೇಗೌಡ

ರಾಮನಗರ- ಆನಂದಸ್ವಾಮಿ

ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ

ಚಿಕ್ಕಬಳ್ಳಾಪುರ-ರಾಮಲಿಂಗಪ್ಪ

ಕೋಲಾರ- ಡಾ. ಕೆ.ಎನ್. ವೇಣುಗೋಪಾಲ್

ಬೆಂಗಳೂರು ಉತ್ತರ- ಎಸ್. ಹರೀಶ್

ಬೆಂಗಳೂರು ಕೇಂದ್ರ- ಸಪ್ತಗಿರಿಗೌಡ

ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ

Advertisement
Tags :
Advertisement