Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಮ ಮಂದಿರಕ್ಕೆ ದಲಿತ ಅರ್ಚಕರನ್ನು ನೇಮಿಸಿ : ಸಚಿವ ಕೆ ಎನ್ ರಾಜಣ್ಣ ಆಗ್ರಹ

04:46 PM Jan 13, 2024 IST | suddionenews
Advertisement

ನವದೆಹಲಿ: ಜನವರಿ 22ರಂದು ಅಯೋಧ್ಯಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ದೇಶದಾದ್ಯಂತ ಭಕ್ತರು ಅಯೋಧ್ಯೆಗೆ ಹೋಗಲು ಸಜ್ಜಾಗಿದ್ದಾರೆ. ಈ ಮಧ್ಯೆ ಸಚಿವ ಕೆ ಎನ್ ರಾಜಣ್ಣ ಅಯೋಧ್ಯೆಯ ಬಗ್ಗೆ ಮಾತನಾಡಿದ್ದಾರೆ. ರಾಮಮಂದಿರಕ್ಕೆ ದಲಿತ ಅರ್ಚಕರನ್ನು ನೇಮಿಸಿ ಎಂದು ಆಗ್ರಹಿಸಿದ್ದಾರೆ.

Advertisement

ರಾಮಮಂದಿರಕ್ಕೆ ಮೊದಲು ದಲಿತರನ್ನು ಬಿಟ್ಟುಕೊಂಡು, ದಲಿತ ಅರ್ಚಕರನ್ನು ನೇಮಿಸಿ. ಬಿಜೆಪಿಗರು ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ..? ಜಾಗೀರು ಕೊಡಲಾಗಿದೆಯಾ..?ವೋಟಿಗಾಗಿ ಪದೇಪದೇ ಹಿಂದೂ ಹಿಂದೂ ಎಂದು ಬಿಜೆಪಿ ಹೇಳುತ್ತಿದೆ. ಡಾ.ಬಿ ಆರ್ ಅಂಬೇಡ್ಕರ್ ಅವರು ಹಿಂದೂವಾಗಿ ಸಾಯುವುದಿಲ್ಲ ಎಂದಿದ್ದೇಕ..? ಈ ರೀತಿಯಾಗಿ ಹಿಂದೂಗಳು ತಮ್ಮ ಸ್ವಾರ್ಥಕ್ಕೆ ಎಲ್ಲಾ ಬಳಕೆ ಮಾಡಿಕೊಳ್ಳುತ್ತಾರೆ ಎಂದು. ರಾಮಮಂದಿರಕ್ಕೆ ಮೊದಲು ದಲಿತರನ್ನು ಬಿಡಿ. ಅಲ್ಲಿ ಒಬ್ಬ ದಲಿತ ಅರ್ಚಕನನ್ನು ನೇಮಿಸಲು ಹೇಳಿ. ದಲಿತರು ಹಿಂದೂಗಳಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇವೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿ, ಅವರು ಆಗ ಹೇಳಿದ್ದು ಸರಿ ಇದೆ. ಈಗ ಹೇಳಿದ್ದು ಸರಿ ಇದೆ ಎಂದಿದ್ದಾರೆ.

Advertisement

ಇದೆ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿ, ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಅದರ ಭಾಗವಾಗಿಯೇ ನಾನು, ಮಹದೇವಪ್ಪ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಸಚಿವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಬಂದಿದ್ದೇವೆ. ಆ ವೇಳೆ ಲೋಕಸಭಾ ಚುನಾವಣೆಯ ಬಗ್ಗೆಯೂ ಮಾತನಾಡಿದ್ದೇವೆ ಎಂದಿದ್ದಾರೆ.

Advertisement
Tags :
Appoint Dalit priestMinister KN Rajannanew DelhiRam Mandirram mandiraಆಗ್ರಹದಲಿತ ಅರ್ಚಕರನ್ನು ನೇಮಿಸಿನವದೆಹಲಿರಾಮ ಮಂದಿರಸಚಿವ ಕೆ ಎನ್ ರಾಜಣ್ಣ
Advertisement
Next Article