Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಧಾರವಾಡ ಐಐಟಿಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

01:06 PM Mar 23, 2024 IST | suddionenews
Advertisement

ಧಾರವಾಡ ಐಐಟಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಐಐಟಿ ಧಾರವಾಡದಲ್ಲು ಒಟ್ಟು 1 ಯಂಗ್ ಪ್ರೊಫೆಶನಲ್- II (IT) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 23, 2024ರಂದು ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆನ್​​ಲೈನ್ ಮೂಲಕ ಸರ್ಜಿ ಸಲ್ಲಿಕೆ ಮಾಡಬೇಕು.

Advertisement

 

ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಧಾರವಾಡ ಸಂಸ್ಥೆಯಲ್ಲಿ ಯಂಗ್ ಪ್ರೊಫೆಶನಲ್- II (IT) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಜಿ ಸಲ್ಲಿಸಲು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಪಡೆದವರು ಅರ್ಹತೆ ಹೊಂದಿರುತ್ತಾರೆ. ಇನ್ನು ಆಯ್ಕೆಯಾದವರಿಗೆ ಮಾಸಿಕ ವೇತನ ₹35,000 ನೀಡಲಾಗುತ್ತದೆ. ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಕಂಪ್ಯೂಟರ್ ಅಪ್ಲಿಕೇಶನ್/ಇನ್ಫರ್ಮೇಶನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್​/ಆರ್ಟಿಫಿಸಿಯಲ್ ಇಂಟೆಲಿಜೆನ್ಸ್​/ಆಪರೇಟಿಂಗ್ ಸಿಸ್ಟಮ್ಸ್​/ಸಾಫ್ಟ್‌​ವೇರ್ ಇಂಜಿನಿಯರಿಂಗ್/ಕಂಪ್ಯೂಟರ್ ಗ್ರಾಫಿಕ್ಸ್‌​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ

Advertisement

 

ಅರ್ಜಿ ಸಲ್ಲಿರುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 36 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ಆಸಕ್ತ ಅಭ್ಯರ್ಥಿಗಳು ವೆಬ್-ಸೈಟ್, ಪೋರ್ಟಲ್ ಡೆವಲಪ್​ಮೆಂಟ್​ ಮತ್ತು ನಿರ್ವಹಣೆ, MySQLನಲ್ಲಿ ಅನುಭವಿಯಾಗಿರಬೇಕು. ಅಭ್ಯರ್ಥಿಗಳು Java/C /PHP/Python ಆಧಾರಿತ ಅಪ್ಲಿಕೇಶನ್ ಡೆವಲಪ್​ಮೆಂಟ್‌​​ನಲ್ಲಿ ಅನುಭವ ಹೊಂದಿರಬೇಕಾಗುತ್ತದೆ. ಕೆಲಸದ ಅಗತ್ಯ ಇರುವವರು ಈ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳಿ.

Advertisement
Tags :
Application InvitationDharwadDharwad iitIIT DharwadJob VacancyVacancyಅರ್ಜಿ ಆಹ್ವಾನಖಾಲಿ ಹುದ್ದೆಧಾರವಾಡ ಐಐಟಿ
Advertisement
Next Article