ಈಗ ಕ್ಷಮೆ ಕೇಳಿ, ಗೆದ್ದ ಬಳಿಕ ತುಳಿಯುತ್ತಾರೆ : ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ
ಹುಬ್ಬಳ್ಳಿ: ಬಿಜೆಪಿಯಿಂದ ಈ ಬಾರಿಯು ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಇದಕ್ಕೆ ವಿರೋಧ ಕೇಳಿ ಬಂದಿತ್ತು. ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು. ಅದಕ್ಕೆಂದೆ ಸಮಯಾವಕಾಶವನ್ನು ನೀಡಿದ್ದರು. ಆದರೆ ಗಡುವು ಮುಗಿದಿದ್ದು, ಇದೀಗ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ದಿಂಗಾಲೇಶ್ವರ ಶ್ರೀಗಳು ಶಪಥ ಮಾಡಿದ್ದಾರೆ.
ದಿಂಗಾಲೇಶ್ವರ ಶ್ರೀಗಳು ಮಾತನಾಡಿದ್ದು, ಲಿಂಗಾಯತ ವಿರೋಧಿ ಆಗಿರುವ ಪ್ರಹ್ಲಾದ ಜೋಶಿ ಅವರನ್ನು ಈ ಕ್ಷೇತ್ರದಿಂದ ಬದಲಾಯಿಸಬೇಕೆಂದು ನೀಡಿದ್ದ ಗಡುವು ಮುಗಿದಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ ಎಂದು ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆಮ ಹೀಗಾಗಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೆರ ನಮ್ಮ ಗುರಿಯಾಗಿದೆ. ಮಾರ್ಚ್ 31ರ ತನಕ ಗಡುವು ಕೊಡಲಾಗಿತ್ತು. ಆದರೆ ಈಗ ನಮ್ಮ ಗಡುವು ಮುಗಿದಿದೆ. ಹೀಗಾಗಿ ನಮ್ಮ ನಿಲುವು ಕೂಡ ಅಚಲವಾಗಿದೆ. ಅವರನ್ನು ಸೋಲಿಸಲು ಚಿಂತನ ಮಂಥನ ನಡೆಸಲಾಗುತ್ತಿದೆ ಎಂದಿದ್ದಾರೆ.
ಪ್ರಹ್ಲಾದ ಜೋಶಿ ಅವರು ಈ ಹಿಂದೆಯೇ ನಮ್ಮ ಬಳಿ ಎರಡು ಬಾರಿ ಕ್ಷಮೆ ಕೇಳಿದ್ದಾರೆ. ಆಗ ನಾವೂ ಕೂಡ ಕ್ಷಮಾಧಾನ ಮಾಡಿದ್ದೆವು. ಗೆದ್ದು ಬಂದ ನಂತರ ಎಲ್ಲಾ ಸ್ವಾಮೀಜಿಗಳನ್ನು, ನಾಯಕರನ್ನು, ನೌಕರರನ್ನು, ವ್ಯಾಪಾರಿಗಳನ್ನು, ಜನ ಪ್ರತಿನಿಧಿಗಳನ್ನು ತುಳಿಯುವ ಕೆಲಸ ಮಾಡುತ್ತಾರೆ. ಹೀಗಾಗಿ ಮತದಾರ ಪ್ರಭುಗಳು, ನಮ್ಮ ಹಿತೈಷಿಗಳು ಈ ಲೋಕಸಭಾ ಚುನಾವಣೆಯಲ್ಲಿ ತಾವೂ ಸ್ಪರ್ಧಿಸಿ, ಪ್ರಹ್ಲಾದ ಜೋಶಿ ಅವರನ್ನು ಸೋಲಿಸಿ ಎಂದಿದ್ದಕ್ಕೆ ಅವರ ಮಾತನ್ನು ಕೇಳುವ ಪರಿಸ್ಥಿತಿ ಬಂದಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಈ ಮೂಲಕ ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಸ್ಪರ್ಧಿಸುವುದು ಖಚಿತವಾಗಿದೆ.