Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

6 ತಿಂಗಳಿದ್ದರೆ ಹೆಚ್ಚು ಎಂದಿದ್ದರು.. ಗಟ್ಟಿಗಿತ್ತಿ ವರ್ಷ ಬದುಕಿದಳು : ಅಪರ್ಣಾ ಪತಿ ನಾಗರಾಜ್ ಭಾವುಕ

11:03 AM Jul 12, 2024 IST | suddionenews
Advertisement

ಬೆಂಗಳೂರು : ಕನ್ನಡದ ಜನಪ್ರಿಯ ನಿರೂಪಕಿ, ನಟಿ ಅಪರ್ಣಾ ವತ್ಸದ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರೆಲ್ಲಾ ವಿಚಾರಗಳು ನೆನಪಾಗಿ ಉಳಿದಿವೆ. ಅಪ್ಪಟ ಕನ್ನಡವನ್ನು ಮಾತನಾಡುವುದರಲ್ಲಿಯೇ ಫೇಮಸ್ ಆಗಿದ್ದವರು. ಅವರ ನಿರೂಪಣೆ ಎಂದರೆ ಮನಸ್ಸಿಟ್ಟು ಕೇಳಬಹುದಿತ್ತು. ಅದರಲ್ಲೂ ಮಜಾ ಟಾಕೀಸ್ ವರಲಕ್ಷ್ಮೀಯಾಗಿ ಈಗಲೂ ಎಲ್ಲರ ಮನಸ್ಸಲ್ಲಿ ಉಳಿದಿದ್ದಾರೆ. ಆದರೆ ವಿಧಿಯಾಟ ಕ್ಯಾನ್ಸರ್ ಮಾರಕದಿಂದ ಇಂದು ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಅಪರ್ಣಾ ಅವರ ಬನಶಂಕರಿ ನಿವಾಸದಲ್ಲಿಯೇ ಅಂತಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರ ರಂಗದ ಎಲ್ಲರಿಗೂ ಆತ್ಮೀಯರಾಗಿದ್ದ ಅಪರ್ಣಾ ಅವರ ಅಂತಿಮ ದರ್ಶನವನ್ನು ಚಿತ್ರರಂಗದವರು ಮಾಡುತ್ತಿದ್ದಾರೆ.

Advertisement

ಕ್ಯಾನ್ಸರ್ ಇದ್ದರೂ ಅವರಿಗೆ ಗೊತ್ತಾಗಲಿಲ್ಲವಾ..? ಟ್ರೀಟ್ಮೆಂಟ್ ತೆಗೆದುಕೊಳ್ಳಬಹುದಿತ್ತು ಅಲ್ವಾ ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ. ಬೇಸರವೂ ಆಗಿದೆ. ಈ ಬಗ್ಗೆ ಅವರ ಪತಿ ನಾಗರಾಜ್ ಮಾತನಾಡಿದ್ದು, ಅಪರ್ಣ ಅವರಿಗೆ ಕ್ಯಾನ್ಸರ್ ರೋಗ ಪತ್ತೆ ಆಗಿ ಅವರು ಕೊನೆಯುಸಿರು ಎಳೆಯುವವರೆಗೂ ಕನ್ನಡಿಗರಿಗಾಗಿ ಹಾಗೂ ಅವರ ಅಭಿಮಾನಿಗಳಿಗಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಅವಳು ನನಗೆ ಸಲ್ಲುವುದಕ್ಕಿಂತ ಮೊದಲೇ ಇಡೀ ಕರ್ನಾಟಕಕ್ಕೆ ಸೇರಿದವಳು. ಅವಳಿಗೆ ಒಂದು ಆಸೆ ಇತ್ತು. ಮಾಧ್ಯಮದವರ ಮುಂದೆ ನಿಂತು ಏನಾಯ್ತು ಅಂತ ಹೇಳು ಎಂಬುದು. ಅಷ್ಟನ್ನು ನಾನು ಎರಡು ಗಂಟೆಗಳ ಹಿಂದೆ ಫೇಸ್ಬುಕ್ ನಲ್ಲಿ ಹೇಳಿದ್ದೇನೆ ಎಂದಿದ್ದಾರೆ.

ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂತ ಗೊತ್ತಾಯ್ತು. ಅದಾಗಲೇ ನಾಲ್ಕನೇಯ ಹಂತ ತಲುಪಿತ್ತು. ಅದನ್ನು ನೋಡಿದ ವೈದ್ಯರು ಈಕೆ ಇನ್ನು ಆರು ತಿಗಳು ಬದುಕುವುದು ಹೆಚ್ಚು ಎಂದಿದ್ದರು. ಅವಳು ಛಲಗಾತಿ ಏನಾದರೂ ಮಾಡಿ ಗೆಲ್ಲುತ್ತೀನಿ ಎಂಬ ಛಲವಿತ್ತು. ಜನವರಿಯವರೆಗೂ ಹೋರಾಡಿದಳು. ಫೆಬ್ರವರಿಯಲ್ಲಿ ಸ್ವಲ್ಪ ಸೋತಳು. ಇದು ಇಡೀ ದೇಹವನ್ನು ಬಾಧಿಸುವ ಒಂದು ವ್ಯಾದಿ. ಇಬ್ಬರು ಇದರಲ್ಲಿ ಸೋತಿದ್ದೀವಿ. ಒಂದು ವರ್ಷ ಸೆಣೆಸಾಡಿದಳು. ಅಕ್ಟೋಬರ್ ಗೆ 58 ವರ್ಷ ತುಂಬುತ್ತಿತ್ತು ಎಂದು ಪತಿ ನಾಗರಾಜು ಭಾವುಕರಾಗಿದ್ದಾರೆ.

Advertisement

Advertisement
Tags :
Aparnabengaluruchitradurgasuddionesuddione newsಅಪರ್ಣಾಖ್ಯಾತ ನಿರೂಪಕಿಚಿತ್ರದುರ್ಗಪತಿ ನಾಗರಾಜ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article