Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಟೀಂ ಇಂಡಿಯಾದಲ್ಲಿ ಮತ್ತೊಂದು ಯುಗಾಂತ್ಯ : ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ T20 ಕ್ರಿಕೆಟ್‌ಗೆ ವಿದಾಯ...!

11:11 AM Jun 30, 2024 IST | suddionenews
Advertisement

ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ T20 ವಿಶ್ವಕಪ್ ಗೆದ್ದ ನಂತರ T20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇಬ್ಬರೂ ಒಂದೇ ವೇದಿಕೆಯಲ್ಲಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಹೇಳಿದ್ದಾರೆ. ಇದರೊಂದಿಗೆ ಇಬ್ಬರು ಭಾರತೀಯ ದಿಗ್ಗಜರ ಟಿ20 ವೃತ್ತಿಜೀವನ ಮುಗಿದಂತೆ ಕಾಣುತ್ತಿದೆ.

Advertisement

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಕೊನೆಯ ಟಿ20 ವಿಶ್ವಕಪ್ ಟೂರ್ನಿಯಾಗಿದೆ. ಈ ಗೆಲುವಿನೊಂದಿಗೆ ಟಿ20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಂತ್ಯಗೊಳಿಸಲು ಬಯಸುತ್ತೇನೆ ಎಂದು ಹೇಳಿದರು.

ವಿಶ್ವಕಪ್ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾ, ‘ಭಾರತದ ಪರವಾಗಿ ನಾನು ಟಿ20 ಪಂದ್ಯದ ಮೂಲಕ ವೃತ್ತಿಜೀವನ ಆರಂಭಿಸಿದ್ದೇನೆ. ಟಿ20 ಅಂತರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. ಹೀಗಾಗಿ ಈ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದರು.

Advertisement

ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ 125 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 117 ಇನ್ನಿಂಗ್ಸ್ ಆಡಿದ್ದಾರೆ.  3056 ಎಸೆತಗಳನ್ನು ಎದುರಿಸಿ 4188 ರನ್ ಗಳಿಸಿ, 38 ಅರ್ಧಶತಕ ಮತ್ತು 1 ಶತಕ ಗಳಿಸಿದ್ದಾರೆ.

ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಒಟ್ಟು 159 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು 151 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದಾರೆ. 3003 ಎಸೆತಗಳಲ್ಲಿ 4231 ರನ್ ಗಳಿಸಿ, 5 ಶತಕ ಮತ್ತು 32 ಅರ್ಧಶತಕಗಳನ್ನು ಗಳಿಸಿದ್ದಾರೆ.

ಇದೀಗ ವಿಶ್ವಕಪ್ ಗೆಲುವಿನೊಂದಿಗೆ ಇಬ್ಬರು ದಿಗ್ಗಜರು ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಒಟ್ಟಿಗೆ ಅಂತ್ಯಗೊಳಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.

Advertisement
Tags :
bengaluruchitradurgaEnd of EraFarewellRohit Sharmasuddionesuddione newsT20 CricketT20 ಕ್ರಿಕೆಟ್‌Team indiavirat kohliಚಿತ್ರದುರ್ಗಟೀ ಇಂಡಿಯಾಬೆಂಗಳೂರುರೋಹಿತ್ ಶರ್ಮಾವಿದಾಯವಿರಾಟ್ ಕೊಹ್ಲಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article