Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಳ್ಳಾರಿ ಬೀಮ್ಸ್ ನಲ್ಲಿ ಮತ್ತೆ ಸಾವು : ಸಿಎಂ ಸಿದ್ದರಾಮಯ್ಯ ಏನಂದ್ರು..?

12:04 PM Dec 06, 2024 IST | suddionenews
Advertisement

ಬೆಂಗಳೂರು: ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಸಚಿವರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

Advertisement

ಈ ವೇಳೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಾರಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಎಂದು ನಾವೆಲ್ಲ ಭಾವಿಸಿದ್ದೇವೆ. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆ ಮಾಡುವಂತ, ಪ್ರಜಾಪ್ರಭುತ್ವ ಉಳಿಸುವಂತ, ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಡುವಂಥ ಪ್ರಯತ್ನ ಮಾಡ್ತಾ ಇದೆ ಎಂದರು.

ಇನ್ನು ಬಳ್ಳಾರಿಯಲ್ಲಿ ಐದು ಜನ ಬಾಣಂತಿಯರು ಸಾವನ್ನಪ್ಪಿದ್ದರು. ಈಗ ಅಲ್ಲಿನ ಗರ್ಭಿಣಿಯರು ಬೀಮ್ಸ್ ನಲ್ಲಿ ಸಿಜೆರಿಯನ್ ಮಾಡಿಸಿಕೊಳ್ಳುವುದಕ್ಕೇನೆ ಹೆದರುತ್ತಿದ್ದಾರೆ. ಈ ಬೆನ್ನಲ್ಲೆ ನಿನ್ನೆ ಶಿಶುವೊಂದು ಸಾವನ್ನಪ್ಪಿದೆ. ಸಿಜೆರಿಯನ್ ಆದ ಅರ್ಧ ಗಂಟೆಗೆ ಸಾವನ್ನಪ್ಪಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಬಾಣಂತಿಯರು ಅನೇಕ ಕಡೆ ಸಾವನ್ನಪ್ಪುತ್ತಾರೆ. ಆದರೆ ಇದ್ಯಾಕೆ ಸಾವನ್ನಪ್ಪಿದರು ಎಂಬುದರ ಮಾಹಿತಿ ಕಲೆ ಹಾಕಬೇಕಿದೆ. ಈ ಸಂಬಂಧವೇ ಮೊನ್ನೆ ಮೀಟಿಂಗ್ ಮಾಡಿದ್ದೀವಿ. ಡ್ರಗ್ಸ್ ಕಂಟ್ರೋಲರ್ ನ ಅಮಾನತು ಕೂಡ ಮಾಡಿದ್ದೀವಿ. ಇಲ್ಲೊಬ್ಬರಿಗೆ ನೋಟೀಸ್ ಕೂಡ ಕೊಟ್ಟಿದ್ದೀನಿ. ಈ ಸಾವಿನ ಸಂಬಂಧವೂ ವಿಚಾರ ಮಾಡ್ತೀನಿ. ಅದು ನಮ್ಮ ಔಷಧಿಯಿಂದ ಆಗಿದೆಯಾ..? ಡಾಕ್ಟರ್ ಯಡವಟ್ಟು ಮಾಡಿದ್ದಾರಾ..? ಎಂಬುದು ಗೊತ್ತಿಲ್ಲ. ಹೋಗಿ ನೋಡಿ, ಆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೀನಿ ಎಂದಿದ್ದಾರೆ.

Advertisement

Advertisement
Tags :
ballaribengaluruchitradurgaCM SiddaramaiahkannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಬಳ್ಳಾರಿಬಳ್ಳಾರಿ ಬೀಮ್ಸ್ಬೀಮ್ಸ್ಬೆಂಗಳೂರುಸಿಎಂ ಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article