For the best experience, open
https://m.suddione.com
on your mobile browser.
Advertisement

ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿ, ಸಾವಿಗೆ ಸರ್ಕಾರ ಅಲ್ಲ ಅಧಿಕಾರಿಗಳು ಕಾರಣವೆಂದ ಸಿಎಂ..!

10:28 PM Jul 19, 2024 IST | suddionenews
ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿ  ಸಾವಿಗೆ ಸರ್ಕಾರ ಅಲ್ಲ ಅಧಿಕಾರಿಗಳು ಕಾರಣವೆಂದ ಸಿಎಂ
Advertisement

ಬೆಂಗಳೂರು: ವಾಲ್ಮೀಕಿ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ,ಈ ಹಗರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳು ಕಾರಣ ಎಂದಿದ್ದಾರೆ.

Advertisement

ವಾಲ್ಮೀಕಿ ನಿಗಮದ ಹಗರಣ ಸಂಬಂಧ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿಯ ಮೇಲೆ ದೂರು ದಾಖಲಾಗಿದೆ. ಈ ಹಗರಣದ ಬಗ್ಗೆ ಎಸ್ಐಟಿ, ಸಿಬಿಐ ತನಿಖೆ ನಡೆಸುತ್ತಿದೆ. ಇಡಿ ಕೂಡ ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ನಾಗೇಂದ್ರ ಅವರನ್ನು ಬಂಧಿಸಿದ್ದಾರೆ. ದದ್ದಲ್ ಮನೆ ದಾಳಿ ನಡೆಸಿದ್ದಾರೆ. ಯಾರೂ ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವಸಂತನಗರ ಬ್ಯಾಂಕ್ ನಲ್ಲಿ ಹಣ ಇಡಲಾಗಿತ್ತು. ಇಲಾಖೆಯ ಎಂಡಿಗೆ ಹಣ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ. ಮಿನಿಸ್ಟರ್ ಪಾಲಿಸಿ ಮೇಕರ್ ಅಷ್ಟೇ. ಎಂಡಿ ಎಕ್ಸಿಕ್ಯುಟಿವ್ ಹೆಡ್ ಆಗಿರುತ್ತಾರೆ. ಇಲಾಖೆ ಅಧ್ಯಕ್ಷರು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.

Advertisement

ಯಾವುದೇ ತುರ್ತು ವಿಚಾರವನ್ನು ಪ್ರಸ್ತಾಪ ಮಾಡಿದಾಗ ವಿಪಕ್ಷದವರಿಗೆ ಅವಕಾಶವಿದೆ, ಅಷ್ಟೇ ಸರ್ಕಾರಕ್ಕೂ ತನ್ನ ನಿಲುವು ಹೇಳುವ ಹಕ್ಕಿದೆ. ನಾಗೇಂದ್ರ ರಾಜೀನಾಮೆ ಕೊಟ್ಟ ಮೇಲೆ ನಾನೇ ಆ ಇಲಾಖೆಯ ಖಾತೆ ಇಟ್ಟುಕೊಂಡಿದ್ದೇನೆ. ಅಕ್ರಮ ಆಗಿಲ್ಲ ಅಂತ ನಾವೂ ಹೇಳ್ತಿಲ್ಲ. ಅಕ್ರಮ ಆಗಿದೆ ಅಂತಾನೇ ಹೇಳ್ತಾ ಇದ್ದೀವಿ. ಅಕ್ರಮ ಯಾರು ಮಾಡಿದ್ದಾರೆ, ಇದಕ್ಕೆ ಯಾರೂ ಜವಾಬ್ದಾರರು ಅಂತ ತನಿಖೆ ನಡೆಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಇನ್ನು ಮೃತ ಚಂದ್ರಶೇಖರ್ ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಹಣದಿಂದ ಮೃತ ಚಂದ್ರಶೇಖರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.

Tags :
Advertisement