Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿಜೆಪಿಯ ಹಿರಿಯ ಮುತ್ಸದ್ಧಿ ಎಲ್ ಕೆ ಅಡ್ವಾಣಿಯವರಿಗೆ 'ಭಾರತ ರತ್ನ' ಪ್ರಶಸ್ತಿ ಘೋಷಣೆ

12:12 PM Feb 03, 2024 IST | suddionenews
Advertisement

ನವದೆಹಲಿ: ಬಿಜೆಪಿಯ ಹಿರಿಯ ಮುತ್ಸದ್ಧಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ಸಂಬಂಧ ಪ್ರಧಾನಿ ಮೋದಿಯವರು ತಮ್ಮ ಟ್ವಿಟ್ಟರ್ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ.

Advertisement

ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಶ್ರೀ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂಬುದರ ವಿಚಾರ ಹಂಚಿಕೊಳ್ಳುವುದಕ್ಕೇನೆ ನನಗೆ ತುಂಬಾ ಸಂತೋಷವಾಗಿದೆ. ಈ ಗೌರವಕ್ಕೆ ಪಾತ್ರವಾಗಿದ್ದಕ್ಕೆ ಅವರ ಬಳಿ ಮಾತನಾಡಿ, ಅಭಿನಂದನೆ ಸಲ್ಲಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು‌. ಭಾರತದ ಅಭಿವೃದ್ಧಿಗೆ ಅವೆ ಕೊಡುಗೆ ಸ್ಮಾರಕವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪ ಪ್ರಧಾನಿಯಾಗಿ ದೇಶಸೇವೆ ಮಾಡುವವರೆಗೆ ಶ್ರಮಿಸಿದ್ದಾರೆಮ ಅವರ ರಾಜಕೀಯ ಜೀವನ ಸದಾ ಆದರ್ಶಪ್ರಾಯವಾಗಿದೆ ಎಂದಿದ್ದಾರೆ.

 

Advertisement

ಲಾಲ್ ಕೃಷ್ಣ ಅಡ್ವಾಣಿಯವರು ಎಲ್ ಕೆ ಅಡ್ವಾಣಿ ಎಂದೇ ಖ್ಯಾತಿ ಪಡೆದವರು. ಬಿಜೆಪಿ ಪಕ್ಷದ ಸಹ ಸಂಸ್ಥಾಪಕರಲ್ಲಿ ಇವರು ಕೂಡ ಒಬ್ಬರು. ಆರ್ ಎಸ್ ಎಸ್ ನ ಸದಸ್ಯರು ಕೂಡ ಆಗಿದ್ದಾರೆ. 90ರ ದಶಕದಲ್ಲಿ ರಾಮಮಂದಿರಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕರು ಅವರು. 2002ರಿಂದ 2004ರವರೆಗೆ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಥ ಧೀಮಂತ ನಾಯಕನಿಗೆ ಇದೀಗ ಭಾರತ ರತ್ನ ಪ್ರಶಸ್ತಿ ಲಭಿಸಿದೆ.

Advertisement
Tags :
Bharat Ratna AwardBjpLK Advaninew Delhisenior BJP leaderಎಲ್ ಕೆ ಅಡ್ವಾಣಿನವದೆಹಲಿಪ್ರಶಸ್ತಿ ಘೋಷಣೆಬಿಜೆಪಿಭಾರತ ರತ್ನಭಾರತ ರತ್ನ ಪ್ರಶಸ್ತಿಹಿರಿಯ ಮುತ್ಸದ್ಧಿ
Advertisement
Next Article