ಷೇರು ಮಾರುಕಟ್ಟೆಯಿಂದ ಅನಿಲ್ ಅಂಬಾನಿ 5 ವರ್ಷ ಬ್ಯಾನ್ : ಕಾರಣವೇನು..?
ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಇದರಿಂದ ಮತ್ತಷ್ಟು ಸಂಕಷ್ಟ ಎದುರಿಸುವಂತೆ ಆಗಿದೆ. ಷೇರು ಮಾರುಕಟ್ಟೆಯಿಂದ ಬ್ಯಾನ್ ಆಗಿದ್ದಾರೆ. ಅದರಲ್ಲೂ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಬ್ಯಾನ್ ಮಾಡಲಾಗಿದೆ.
ಹಣ ದುರುಪಯೋಗ ಮಾಡಿಕೊಂಡ ಪ್ರಕರಣದಲ್ಲಿ ಅನಿಲ್ ಅಂಬಾನಿಯನ್ನು ಬ್ಯಾನ್ ಮಾಡಲಾಗಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ನ ಮಾಜಿ ಅಧಿಕಾರಿಗಳು ಸೇರಿದಂತೆವೊಟ್ಟು 24 ಉದ್ಯಮಿಗಳನ್ನು ಸೆಕ್ಯೂರಿಟೀಸ್ ಮಾರ್ಕೆಟ್ ನಿಂದ ಐದು ವರ್ಷಗಳ ಕಾಲ ನಿಷೇಧ ಮಾಡಲಾಗಿದೆ. ಜೊತೆಗೆ ಅನಿಲ್ ಅಂಬಾನಿಗೆ 25 ಕೋಟಿ ದಂಡ ವಿಧಿಸಲಾಗಿದೆ. ರಿಲಾಯನ್ಸ್ ಹೋಮ್ ಫೈನಾನ್ಸ್ ಅನ್ನು ಆರು ತಿಂಗಳ ಕಾಲ ನಿಷೇಧಿಸಲಾಗಿದೆ. ನಿಷೇಧದ ಅವಧಿಯಲ್ಲಿ ಅವರು ಸೆಬಿಯಲ್ಲಿ ಯಾವುದೇ ಮಧ್ಯವರ್ತಿ, ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಸೇರಲು ಸಾಧ್ಯವಾಗುವುದಿಲ್ಲ. ಈ ಘಟನೆ ನಡೆದ ಬೆನ್ನಲ್ಲೇ ಅನಿಲ್ ಅಂಬಾನಿ ಸಮೂಹ ಷೇರುಗಳಲ್ಲಿ ಭಾರೀ ಕುಸಿತ ಕಂಡಿದೆ. ಶೇಕಡ 14ರಷ್ಟು ಶೇರು ಕುಸಿತವಾಗಿದೆ.
ಸೆಬಿ ಹಿರಡಿಸಿರುವ ಆದೇಶದಲ್ಲಿ ಅನಿಲ್ ಅಂಬಾನಿ ಮೋಸದ ಸಂಚು ರೂಪಿಸಿದ್ದಾರೆ. ರಿಲಯನ್ಸ್ ಹೋಂ ಫೈನಾನ್ಸ್‌ನಿಂದ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಸಹಾಯ ಪಡೆದಿದ್ದಾರೆ. ಇದನ್ನು ತನ್ನ ಅಂಗಸಂಸ್ಥೆಗಳಿಂದ ಸಾಲದ ರೀತಿಯಾಗಿ ತೋರಿಸಿದ್ದಾರೆ. ಕಂಪನಿಯ ಮಂಡಳಿಯು ಆ ರೀತಿಯ ಸಾಲವನ್ನು ನೀಡದಂತೆ ಸೂಚನೆ ನೀಡಿತ್ತು. ಜೊತೆಗೆ ಕಾರ್ಪೋರೇಟ್ ಸಾಲದ ಬಗ್ಗೆ ತನಿಖೆ ನಡೆದಿತ್ತು. ಆದರೆ ಕಂಪನಿಯ ಆಡಳಿತ ಮಂಡಳಿ ಈ ಆದೇಶಗಳನ್ನು ನಿರ್ಲಕ್ಷ್ಯ ಮಾಡಿದೆ. ಅನಿಲ್ ಅಂಬಾನಿ ಪ್ರಭಾವದಿಂದ ಸಂಸ್ಥೆಯ ಹಿರಿಯ ಅಧಿಕಾರಿಗಳು ದೋಷ ಮಾಡಿರುವುದು ಸಾಬೀತಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.