For the best experience, open
https://m.suddione.com
on your mobile browser.
Advertisement

ಸಿಎಂ ರೇಸಲ್ಲಿ ಆಕಾಂಕ್ಷಿಗಳು ಬೆಳೆಯುತ್ತಿರುವ ಹೊತ್ತಲ್ಲೆ ಸಿದ್ದರಾಮಯ್ಯರಿಂದ‌ ಮಹತ್ವದ ಘೋಷಣೆ..!

08:55 PM Sep 11, 2024 IST | suddionenews
ಸಿಎಂ ರೇಸಲ್ಲಿ ಆಕಾಂಕ್ಷಿಗಳು ಬೆಳೆಯುತ್ತಿರುವ ಹೊತ್ತಲ್ಲೆ ಸಿದ್ದರಾಮಯ್ಯರಿಂದ‌ ಮಹತ್ವದ ಘೋಷಣೆ
Advertisement

Advertisement
Advertisement

ಬೆಂಗಳೂರು: ಮೂಡಾ‌ ಹಗರಣದಿಂದ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಿಪಕ್ಷ ನಾಯಕರು ದಾಳಿ ನಡೆಸುತ್ತಲೇ ಇದ್ದಾರೆ. ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿರುವ ಕಾರಣ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತೆ, ಸರ್ಕಾರ ಪತನವಾಗುತ್ತೆ ಎಂದೇ ವಿಪಕ್ಷ ನಾಯಕರು ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇದರ ನಡುವೆ ನಾನು ಕೂಡ ಸಿಎಂ ಆಕಾಂಕ್ಷಿ, ನಾನ್ಯಾಕೆ ಸಿಎಂ ಆಗಬಾರದು ಅಂತ ಹನುಮಂತನ ಬಾಲ ಬೆಳೆದಂತೆ ಆಕಾಂಕ್ಷಿಗಳ ಲೀಸ್ಟ್ ಬೆಳೆಯುತ್ತಾ ಹೋಗುತ್ತಿದೆ. ಹೀಗಾಗಲೇ ಸಿಎಂ ರೇಸ್‌ನಲ್ಲಿ ಸತೀಶ್ ಜಾರಕಿಹೊಳಿ, ಆರ್ ವಿ ದೇಶಪಾಂಡೆ, ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪ ಇದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಆಕಾಂಕ್ಷಿಗಳಿಗೆಲ್ಲಾ ಮಹತ್ವದ ಸಂದೇಶ‌ ಸಾರಿದ್ದಾರೆ. ಮುಂದಿನ ನಾಲ್ಕು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ.

Advertisement
Advertisement

ಯಾರು ಕೂಡ ಸಿಎಂ ಆಗುತ್ತೇನೆ ಎಂದು ಹೇಳಿಕೆ ಕೊಟ್ಟಿಲ್ಲ. ಈಗ ಸಿಎಂ ಖುರ್ಚಿ ಖಾಲಿಯೂ ಇಲ್ಲ. ಖಾಲಿ ಆದಾಗ ನಾವೂ ಬರುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಡೌಟ್ ಇಲ್ಲ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ಯಾರಿಗೂ ಸಿಎಂ ಬದಲಾವಣೆಯಾಗುತ್ತೆ ಎಂಬ ಅನುಮಾನವಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿ ಅಂತ ಸಚಿವರು ಪತ್ರ ಬರೆದಿದ್ದಾರೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ನೇತೃತ್ವದಲ್ಲಿ ಸಮತಿ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ, ಪಾಟೀಲ್ , ಸಂತೋಷ್ ಲಾಡ್, ಕೃಷ್ಣಭೈರೇಗೌಡ ಆ ಸಮಿತಿಯಲ್ಲಿ ಇದ್ದಾರೆ. ಸುಮಾರು 21 ಹಗರಣ ಕಳೆದ ಸರ್ಕಾರದಲ್ಲಿ ಆಗಿದೆ. ಹಗರಣಗಳ ತನಿಖೆ ಮಾಡಿ ಸಂಪುಟಕ್ಕೆ ವರದಿ ಸಲ್ಲಿಸಲು ಹೇಳಿದ್ದೀನಿ. ಎಲ್ಲಾ ಹಗರಣಗಳ ತನಿಖೆಗೆ ಹೇಳಿಲ್ಲ. ಕೋವಿಡ್ 19, 40% ಸೇರಿ ಹಲವು ಹಗರಣಗಳ ತನಿಖೆಗೆ ಅಷ್ಟೇ ಹೇಳಿದ್ದೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement
Tags :
Advertisement