ಡೆಂಗ್ಯೂನಿಂದ ಈಗಾಗಲೇ 6 ಸಾವು : ಇನ್ನೂ ಏರಲಿದೆ ಅಂದ್ರು ಆರೋಗ್ಯ ಸಚಿವರು..!
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಅದರಲ್ಲೂ ಈಗಾಗಲೇ ಆರು ಜನ ಸಾವನ್ನಪ್ಪಿದ್ದಾರೆ. ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡೆಂಗ್ಯೂ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಡೆಂಗ್ಯೂ ಇನ್ನು ಏರಿಕೆಯಾಗುವ ಸಾಧ್ಯತೆ ಇದೆ ಎಂದು ದಿನೇಶ್ ಗುಂಡೂರಾವ್ ಆತಂಕ ಹುಟ್ಟಿಸಿದ್ದಾರೆ. ಡೆಂಗ್ಯೂ ಕಳೆದ ವರ್ಷಕ್ಕಿಂತ ಈ ವರ್ಷ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಸತ್ತಿದ್ದಾರೆ. ಇದರಲ್ಲಿ ಬಿಪಿ, ಶುಗರ್, ಹೃದಯ ಕಾಯಿಲೆ ಇರುವವರೇ ಮೂರು ಜನ ಸತ್ತಿದ್ದಾರೆ. ಸದಾ ಮಳೆಯಾಗುತ್ತಿದ್ದರೆ ಡೆಂಗ್ಯೂ ಪ್ರಕರಣಗಳು ಹುಟ್ಟಿಕೊಳ್ಳುವುದಿಲ್ಲ. ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಕಾರಣ ಡೆಂಗ್ಯೂ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಹವಮಾನ ಬದಲಾವಣೆಯಿಂದಾಗಿ ಡೆಂಗ್ಯೂ ಪ್ರಕತಣಗಳು ಹೆಚ್ಚಾಗುತ್ತಿವೆ.
ಸೆಪ್ಟೆಂಬರ್ ನಲ್ಲಿ ಇನ್ನಷ್ಟು ಹೆಚ್ಚಾಗಬಹುದು. ಮುಖ್ಯಮಂತ್ರಿಗಳು ಮುಂಜಾಗ್ರತ ಕ್ರಮಕ್ಕೆ ಸೂಚಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್ ಕಿಟ್ ಗಳನ್ನು ಇರಿಸಲಾಗಿದೆ. ಡೆಂಗ್ಯುವಿಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಆದರೆ ಪ್ಲೇಟ್ ಲೇಟ್ಸ್ ಕೊಡುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಬ್ಲೆಡ್ ಯೂನಿಟ್ ಗಳ ಜೊತೆಗೆ ಮಾತುಕತೆ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ರಿಪೋರ್ಟ್ ಮಾಡ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ತಿಳಿಸಿದ್ದೇವೆ. ಡೆಂಗ್ಯೂ ರಿಪೋರ್ಟ್ ಮಾಡುವುದು ಕಡ್ಡಾಯವಾಗಿದೆ. ನಮ್ಮ ವೆಬ್ಸೈಟ ನಲ್ಲಿ ಡೆಂಗ್ಯೂ ಬುಲೆಟಿನ್ ಅಪ್ಡೇಟ್ ಮಾಡುತ್ತೇವೆ. ರಾಜ್ಯಾದ್ಯಂತ ಡೆಂಗ್ಯೂ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.