Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದರ್ಶನ್, ಪ್ರಜ್ವಲ್ ಜೊತೆಗೆ ಈ ಬಾರಿ ಯಡಿಯೂರಪ್ಪ ವಿರುದ್ಧವೂ ಕಿಡಿಕಾರಿದ ನಟಿ ರಮ್ಯಾ..! ಏನಂದ್ರು..?

02:12 PM Jun 22, 2024 IST | suddionenews
Advertisement

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ದರ್ಶನ್ ಅವರನ್ನು ಬಂಧಿಸಿದಾಗಲೇ ನಟಿ, ರಾಜಕಾರಣಿ ರಮ್ಯಾ ಟ್ವೀಟ್ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸೆ ಕೊಟ್ಟಿದ್ದರು. ಇದೀಗ ಮತ್ತೆ ಟ್ವೀಟ್ ಮೂಲಕ ಈ ವಿಚಾರವಾಗಿ ಮಾತನಾಡಿದ್ದು, ಈ ಬಾರಿ ದರ್ಶನ್ ಹೆಸರಿನ ಜೊತೆಗೆ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹಾಗೂ ಯಡಿಯೂರಪ್ಪ ಅವರ ಹೆಸೆನ್ನು ತೆಗೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ.

Advertisement

ರಮ್ಯಾ ಟ್ವೀಟ್ ನಲ್ಲಿ ಇರುವುದು ಏನು..?

'ಕಾನೂನನ್ನು ಶ್ರೀಮಂತರು ಮತ್ತು ಪ್ರಭಾವಶಾಲಿಗಳು ಮುರಿದಾಗ ಮತ್ತು ಹಿಂಸಾತ್ಮಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಕರ್ನಾಟಕದ ಬಡವರು, ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತ್ತಾರೆ. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರು ಹಾಗೂ ಮಾಧ್ಯಮದವರಿಗೆ ಹ್ಯಾಟ್ಸ್ ಆಫ್. ತ್ವರಿತವಾಗಿ ವಿಚಾರಣೆ ನಡೆಸಿದಾಗ ಮತ್ತು ಪ್ರಕರಣದ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಂಡಾಗ ನ್ಯಾಯವನ್ನು ಒದಗಿಸಿದಂತೆ ಆಗುತ್ತದೆ. ನ್ಯಾಯವೂ ಮೇಲುಗೈ ಸಾಧಿಸದೆ ಇದ್ದರೆ ನಾವೂ ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡಲು ಸಾಧ್ಯ' ಎಂದು ಬರೆದು ಯಡಿಯೂರಪ್ಪ, ಸೂರಜ್ ರೇವಣ್ಣ, ದರ್ಶನ್, ಪ್ರಜ್ವಲ್ ರೇವಣ್ಣ ಅವರಿಗೆ ಟ್ಯಾಗ್ ಮಾಡಿದ್ದಾರೆ.

Advertisement

ರೇಣುಕಾಸ್ವಾಮಿ ಕೊಲೆ ಮಾಡಿ ದರ್ಶನ್ ಅಂಡ್ ಗ್ಯಾಂಗ್ ಬಂಧಿಯಾಗಿದೆ. ಇಂದು ದರ್ಶನ್ ಕಸ್ಟಡಿ ಅವಧಿ‌ ಮುಗಿದಿದ್ದು, ಕೋರ್ಟ್ ತೀರ್ಪಿಗೆ ಎಲ್ಲರು ಕಾಯುತ್ತಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಫೋಕ್ಸೋ ಕಾಯ್ದೆ ಅಡಿ ಪ್ರಕತಣ ದಾಖಲಾಗಿದೆ. ಸೂರಜ್ ರೇವಣ್ಣ ಅವರದ್ದು ಅಸಹಜ ಲೈಂಗಿಕ ಕ್ರಿಯೆ ದೂರು ದಾಖಲಾಗಿದೆ.

Advertisement
Tags :
actor DarshanActress Ramyabs yediyurappaprajwal revannaದರ್ಶನ್ನಟಿ ರಮ್ಯಾಪ್ರಜ್ವಲ್ಯಡಿಯೂರಪ್ಪ
Advertisement
Next Article