ಅಲ್ಲು ಅರ್ಜುನ್ ಬಂಧನ ಪ್ರಕರಣ : ದೇವರನ್ನು ಬಂಧಿಸುತ್ತೀರಾ ? ತೆಲಂಗಾಣ ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆಗೈದ ರಾಮ್ ಗೋಪಾಲ್ ವರ್ಮಾ...!
ಸುದ್ದಿಒನ್ | ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನದ ಬಗ್ಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕುತೂಹಲಕಾರಿ ಪೋಸ್ಟ್ ಹಾಕಲಾಗಿದೆ.
ಆರ್‌ಜಿವಿ ತೆಲಂಗಾಣ ಪೊಲೀಸರ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಉತ್ತರಿಸುವಂತೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.
1. ಪುಷ್ಕರ ಸ್ನಾನ, ರಥೋತ್ಸವ, ಹಬ್ಬ ಹರಿದಿನಗಳಲ್ಲಿ, ಗೂಳಿ ಕಾಳಗದಲ್ಲಿ ಭಕ್ತರು ಸತ್ತರೆ ದೇವರನ್ನು ಬಂಧಿಸುತ್ತೀರಾ ?
2. ಚುನಾವಣಾ ಪ್ರಚಾರದ ಕಾಲ್ತುಳಿತದಲ್ಲಿ ಯಾರಾದರೂ ಪ್ರಾಣ ಕಳೆದುಕೊಂಡರೆ ರಾಜಕಾರಣಿಗಳನ್ನು ಬಂಧಿಸುತ್ತೀರಾ ?
3. ಪ್ರೀ ರಿಲೀಸ್ ಫಂಕ್ಷನ್ ಗಳಲ್ಲಿ ಯಾರಾದರೂ ಸತ್ತರೆ ನಾಯಕ, ನಾಯಕಿಯರನ್ನು ಬಂಧಿಸುತ್ತೀರಾ ?
4. ಭದ್ರತಾ ವ್ಯವಸ್ಥೆಗಳನ್ನು ಪೊಲೀಸರು, ಆಯೋಜಕರು ಹೊರತುಪಡಿಸಿ ಚಲನಚಿತ್ರ ನಾಯಕರು ಮತ್ತು ಸಾರ್ವಜನಿಕ ಮುಖಂಡರು ಹೇಗೆ ನಿಯಂತ್ರಿಸುತ್ತಾರೆ ?' ಎಂದು ರಾಮ್ ಗೋಪಾಲ್ ವರ್ಮಾ ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಇದೀಗ ಈ ಟ್ವೀಟ್ ವೈರಲ್ ಆಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳು RGV ಅವರ ಪೋಸ್ಟ್ ಅನ್ನು ವಿಪರೀತವಾಗಿ ಶೇರ್ ಮಾಡುತ್ತಿದ್ದಾರೆ. ಮತ್ತು ಅದು ಸಾಕಷ್ಟು ವೈರಲ್ ಆಗುತ್ತಿದೆ.
ಅದಕ್ಕೂ ಮುನ್ನ ಹಲವು ನಾಯಕರು, ನಿರ್ದೇಶಕರು, ನಿರ್ಮಾಪಕರು ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಭೋಲಾ ಶಂಕರ್ ನಿರ್ದೇಶಕ ಮೆಹರ್ ರಮೇಶ್ ಪ್ರತಿಕ್ರಿಯಿಸಿ.. 'ಅಲ್ಲು ಅರ್ಜುನ್ ಬಂಧನವನ್ನು ನಾವು ಖಂಡಿಸುತ್ತೇವೆ. ನಾವು ಅವರ ಪರವಾಗಿ ನಿಲ್ಲುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಆದಿ ಸಾಯಿ ಕುಮಾರ್ ಪ್ರತಿಕ್ರಿಯಿಸಿ.. 'ಘಟನೆ ದುರದೃಷ್ಟಕರ.. ಆದರೆ ಇದಕ್ಕೆ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡಿರುವುದು ಬೇಸರ ತಂದಿದೆ. ಅಲ್ಲು ಅರ್ಜುನ್ ಜೊತೆ ನಾವಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ. ಕಾಲ್ತುಳಿತಕ್ಕೆ ಪ್ರತಿಯೊಬ್ಬರೂ ಹೇಗೆ ಹೊಣೆಯಾಗುತ್ತಾರೆ ಎಂದು ಸಂದೀಪ್ ಕಿಶನ್ ಪ್ರಶ್ನಿಸಿದ್ದಾರೆ. ಲವ್ ಯು ಅಲ್ಲು ಅರ್ಜುನ್ ಅಣ್ಣ ಎಂದು ಸಂದೀಪ್ ಟ್ವೀಟ್ ಮಾಡಿದ್ದಾರೆ.