For the best experience, open
https://m.suddione.com
on your mobile browser.
Advertisement

ಮಹಾಕಾಳಿ ಅವತಾರದಲ್ಲಿ ಅಲ್ಲು ಅರ್ಜುನ್ ಎಂಟ್ರಿ : ಪುಷ್ಪ 2 ಟೀಸರ್ ಔಟ್

02:33 PM Apr 08, 2024 IST | suddionenews
ಮಹಾಕಾಳಿ ಅವತಾರದಲ್ಲಿ ಅಲ್ಲು ಅರ್ಜುನ್ ಎಂಟ್ರಿ   ಪುಷ್ಪ 2 ಟೀಸರ್ ಔಟ್
Advertisement

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆಗಸ್ಟ್ 15 ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಒಂದಷ್ಟು ವಿಚಾರಗಳನ್ನು ಬಿಟ್ಟು ಕೊಡುತ್ತಿರುವ ಪುಷ್ಪ 2 ತಂಡ ಮತ್ತಷ್ಡು ಕುತೂಹಲವನ್ನು ಹೆಚ್ಚಿಸುತ್ತಿದೆ. ಇತ್ತಿಚೆಗಷ್ಟೇ ರಶ್ಮಿಕಾ ಮಂದಣ್ಣ ಹುಟ್ಡು ಹಬ್ಬದ ದಿನ ಪೋಸ್ಟರ್ ಒಂದನ್ನು ರಿಲೀಸ್ ಮಾಡಿ, ರಶ್ಮಿಕಾ ಲುಕ್ ರಿವೀಲ್ ಮಾಡಿತ್ತು. ಇದೀಗ ಸಿನಿಮಾದ ಟೀಸರ್ ಬಿಟ್ಟು ಅಲ್ಲು ಅರ್ಜುನ್ ಅವತಾರ ತೋರಿಸಿದೆ.

Advertisement
Advertisement

ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬ. ಅಭಿಮಾನಿಗಳೆಲ್ಲಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದೆ ಸುಸಂದರ್ಭದಲ್ಲಿ ಪುಷ್ಪ2 ಸಿನಿಮಾದ ಟೀಸರ್ ಲಾಂಚ್ ಆಗಿದ್ದು, ಟೀಸರ್ ನಲ್ಲಿ ಮಹಕಾಳಿ ಅವತಾರ ತಾಳಿದ್ದಾರೆ ಅಲ್ಲು ಅರ್ಜುನ್. ರಗಡ್ ಲುಕ್ ನಲ್ಲಿ ಸೀರೆಯುಟ್ಟು, ಮೈಮೇಲೆ ನಿಂಬೆ ಹಣ್ಣಿನ ಸರಮಾಲೆ, ಹೂ ಮಾಲೆ ಹಾಕಿಕೊಂಡು ಎದುರಾಳಿಗಳಿಗೆ ಬಾರಿಸಿ, ಮುನ್ನೆಡೆದಿದ್ದಾರೆ.

Advertisement

Advertisement

ಸುಕುಮಾರ್ ನಿರ್ದೇಶನ ಮಾಡಿರುವ ಪುಷ್ಪ- 2 ದಿ ರೂಲ್ ಸಿನಿಮಾ ಇದೇ ವರ್ಷ ಆಗಸ್ಟ್​ನಲ್ಲಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡಲಿದೆ. ಮೂವಿ ರಿಲೀಸ್​ಗಾಗಿ ಅಭಿಮಾನಿಗಳೆಲ್ಲ ಕಾತುರದಿಂದ ಕಾದು ಕುಳಿತ್ತಿದ್ದಾರೆ. ಇನ್ನು ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ನ್ಯಾಷನಲ್​ ಕ್ರಷ್ ರಶ್ಮಿಕಾ ಮಂದಣ್ಣ ಮುಂದುವರೆದಿದ್ದಾರೆ. ಈಗಾಗಲೇ ಫುಷ್ಪ ಸಿನಿಮಾ ಹಿಟ್​ ಆಗಿದ್ದು ಗಲ್ಲಾ​ ಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದಲ್ಲದೇ ಉತ್ತರ ಭಾರತದಲ್ಲೂ ಸಖತ್ ಸೌಂಡ್ ಮಾಡಿತ್ತು.

Tags :
Advertisement