ಅಲ್ಲು ಅರ್ಜುನ್ ಅರೆಸ್ಟ್ : ಕಾರಣವೇನು ಗೊತ್ತಾ..?
ಈಗಷ್ಟೇ ಪುಷ್ಪ-2 ಸಿನಿಮಾದ ಯಶಸ್ಸಿನ ಪಯಣದಲ್ಲಿರುವ ನಟ ಅಲ್ಲು ಅರ್ಜುನ್ ಅವರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪಡಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಷ್ಪ-2 ಸಿನಿಮಾ ನೋಡಲು ಹೋದ ಮಹಿಳೆಯೊಬ್ಬರು ಕಾಲ್ತುಳಿತದಿಂದ ನಿಧನರಾಗಿದ್ದರು. ಈ ಸಂಬಂಧ ಕೇಸ್ ದಾಖಲಾಗಿತ್ತು. ಹೀಗಾಗಿ ಬಂಧಿಸಲಾಗಿದೆ.
ಪುಷ್ಪ-2 ಸಿನಿಮಾ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಅವಧಿ ಜಾಸ್ತಿ ಇದ್ದರು, ಅಭಿಮಾನಿಗಳು ತಾಳ್ಮೆಯಿಂದ, ಖುಷಿಯಿಂದ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ. ಎಲ್ಲಾ ಭಾಷೆಯಲ್ಲೂ ಕೋಟಿ ಕೋಟಿ ಹಣ ಬಾಚುತ್ತಿದೆ. ಸಾವಿರ ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಬಾಕ್ಸ್ ಆಫೀಸ್ ನಲ್ಲಿ ಇಷ್ಟು ದೊಡ್ಡಮಟ್ಟಕ್ಕೆ ಕಲೆಕ್ಷನ್ ಮಾಡಿರುವುದು ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಆ ಸಂಭ್ರಮದಲ್ಲಿಯೇ ಮಿಂದೇಳುತ್ತಿದ್ದಾರೆ.
ಆದರೆ ಈ ಸಂಭ್ರಮದ ನಡುವೆ ಸಿನಿಮಾ ತಂಡಕ್ಕೆ ಬರಸಿಡಿಲಿನಂತೆ ಬಡಿದಿರುವುದು ಅಲ್ಲು ಅರ್ಜುನ್ ಅರೆಸ್ಟ್ ಆದ ಸುದ್ದಿ. ಅದು ಸಿನಿಮಾಗೆ ಸಂಬಂಧಿಸಿದ ಸುದ್ದಿಯೇ ಆಗಿದೆ. ಡಿಸೆಂಬರ್ 4ರಂದು ಅಲ್ಲು ಅರ್ಜುನ್ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡುವುದಕ್ಕೆ ನಿರ್ಧರಿಸಿದ್ದರು. ಅಂತೆಯೇ ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ ಗೆ ಬಂದರು. ಈ ವೇಳೆ ಅವರನ್ನು ನೋಡುವುದಕ್ಕಾಗಿಯೇ ಅಭಿಮಾನಿಗಳು ಮುಗಿಬಿದ್ದಿದ್ದರು. ಆ ಕಾಲ್ತುಳಿತದಿಂದ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡರು. ಅಭಿಮಾನಿಯ ಸಾವಿನ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಯಾಕಂದ್ರೆ ಅಲ್ಲು ಅರ್ಜುನ್ ಥಿಯೇಟರ್ ಗೆ ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಖಾಸಗಿ ಭದ್ರತೆಯೊಂದಿಗೆ ಬಂದಿದ್ದರು. ನೂಕು ನುಗ್ಗಲು ಉಲ್ಬಣವಾಗಿ ಮಹಿಳೆಯ ಸಾವಾಗಿತ್ತು. ಈ ಸಾವಿಗೆ ಥಿಯೇಟರ್ ಆಡಳಿತವೆ ಹೊಣೆ ಎಂಬ ಆರೋಪವಿದೆ.