ಸದನ ಬಿಟ್ಟು ಸಚಿವರೆಲ್ಲ ತೆಲಂಗಾಣದಲ್ಲಿದ್ದಾರೆ : ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ ಸಿಕ್ಕಿದೆ. ಹೀಗಾಗಿ ಹಲವು ಸಚಿವರು ತೆಲಂಗಾಣದಲ್ಲಿ ಇದ್ದಾರೆ. ಅಧಿವೇಶನ ಆರಂಭವಾದರು ಸಚಿವರೆಲ್ಲಾ ತೆಲಂಗಾಣದಲ್ಲಿ ಇದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈ ಮಾತಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಎಲ್ಲರೂ ಹೋಗಿಲ್ಲ. ಎಲ್ಲೊ ಒಂದಿಬ್ಬರು ಅಲ್ಲಿ ಇದ್ದಾರೆ. ಬಹುತೇಕ ಜನ ವಾಪಾಸ್ ಬಂದಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಮಾತ್ರ ಬರಬೇಕು ಅಷ್ಟೇ ಎಂದಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರ ಅಭಿವೃದ್ಧಿ ಭಾಷಣವಿಲ್ಲ, ಸಿದ್ದರಾಮಯ್ಯ ಅವರು ಕೇವಲ ಓಲೈಕೆ ಭಾಷಣ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಅದೆಲ್ಲಾ ನಿಮ್ಮಿಂದಲೇ ಆಗಿದೆ. ಎಲ್ಲಾ ಸಮುದಾಯಗಳು ಸೇರಿದಂತೆ ಮುಸ್ಲಿಂ ಸಮುದಾಯವನ್ನು ರಕ್ಷಣೆ ಮಾಡಲಾಗುವುದು ಎಂದಿದ್ದಾರೆ.
ಇನ್ನು ಬ್ರಾಂಡ್ ಬೆಂಗಳೂರಿನ ಬಗ್ಗೆ ಮಾತನಾಡಿ, ನಾವೂ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು. ಬಿಜೆಪಿಯವರು ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ..? ಈ ಹಿಂದೆಯೇ ಉಚ್ಛ ನ್ಯಾಯಾಲಯವೇ ಗುಂಡಿ ಮುಚ್ಚಿಲ್ಲ ಎಂದು ಛೀಮಾರಿ ಹಾಕಿತ್ತು. ಬೆಂಗಳೂರಿನ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವ ಹಕ್ಕಿದೆ. ಬಿಜೆಪಿ ನಾಲ್ಕು ವರ್ಷವಿದ್ದರು, ಅವರಿಗೆ ಗುಂಡಿ ಮುಚ್ಚಲು ಆಗಲಿಲಗಲ ಎಂದಿದ್ದಾರೆ.