ಬಿಜೆಪಿ ಶಾಸಕ ಯತ್ನಾಳ್ ಮಾಡಿದ ಆರೋಪಗಳೆಲ್ಲಾ ಸತ್ಯ : ಎಂಬಿ ಪಾಟೀಲ್
ಕೊರೊನಾ ಸಮಯದಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ಮೇಲೆ ಆರೋಪ ಮಾಡಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ ಬಿ ಪಾಟೀಲ್ ಮಾತನಾಡಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಬಸವನಗೌಡ ಯತ್ನಾಳ್ ಅವರು ಕಳೆದ ಐದೂವರೆ ವರ್ಷಗಳಿಂದಲೂ ತಮ್ಮದೇ ನಾಯಕರ ವಿರುದ್ಧ ಒಂದಾದ ಮೇಲೆ ಒಂದರಂತೆ ಆರೋಪಗಳನ್ನು ಮಾಡುತ್ತಿದ್ಧಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗದಷ್ಟು @BJP4Karnataka ದುರ್ಬಲವಾಗಿದೆ! ಯತ್ನಾಳ್ ಆರೋಪಗಳು ಸತ್ಯವಾಗಿರಬೇಕು ಹೀಗಾಗಿಯೇ ಕ್ರಮ ಜರುಗಿಸಲು ಹೆದರುತ್ತಿದ್ದಾರೆ! ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಗೂ ಯತ್ನಾಳ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಇನ್ಮು ಯತ್ನಾಳ್ ಅವರು ಕಾಂಗ್ರೆಸ್ ಸರ್ಕಾರದೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದಕ್ಕೂ ಪ್ರತಿಕ್ರಿಯೆ ನೀಡಿರುವ ಎಂ ಬಿ ಪಾಟೀಲ್, ಕಳೆದ ಐದೂವರೆ ವರ್ಷದಿಂದ ಬಿಜೆಪಿ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಬಿಜೆಪಿಯವರಿಗೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಧೈರ್ಯವಿಲ್ಲವಾ..? ಯಾಕಂದ್ರೆ ಯತ್ನಾಳ್ ಹೇಳಿದ್ದೆಲ್ಲವೂ ಸತ್ಯವಾಗಿದೆ. ಹೀಗಾಗಿ ಕ್ರಮ ತೆಗೆದುಕೊಳ್ಳುವುದಕ್ಕೆ ಬಿಜೆಪಿ ಹಿಙದೇಟು ಹಾಕುತ್ತಿದೆ. ಯತ್ನಾಳ್ ಜೊತೆಗೆ ಕಾಂಗ್ರೆಸ್ ಏನು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಕಾಂಗ್ರೆಸ್ ಗೂ ಯತ್ನಾಳ್ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಸಚುವ ಎಂ ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.