For the best experience, open
https://m.suddione.com
on your mobile browser.
Advertisement

ಅಕ್ಷಯ ತೃತೀಯದಂದು ರಿಲೀಸ್ ಆಯ್ತು 'ಡೆವಿಲ್' ಮೇಕಿಂಗ್ ವಿಡಿಯೋ: ದರ್ಶನ್ ಫ್ಯಾನ್ಸ್ ದಿಲ್ ಖುಷ್

03:13 PM May 10, 2024 IST | suddionenews
ಅಕ್ಷಯ ತೃತೀಯದಂದು ರಿಲೀಸ್ ಆಯ್ತು  ಡೆವಿಲ್  ಮೇಕಿಂಗ್ ವಿಡಿಯೋ  ದರ್ಶನ್ ಫ್ಯಾನ್ಸ್ ದಿಲ್ ಖುಷ್
Advertisement

ಹೇಳಿ ಕೇಳಿ ದರ್ಶನ್ ಮಾಸ್ ಹೀರೋ. ಅವರಿಗಿರುವ ಆಲ್ಮೋಸ್ಟ್ ಅಭಿಮಾನಿಗಳು ಮಾಸ್ ಎಲಿಮೆಂಟ್ನೇ ಹೆಚ್ಚು ಇಷ್ಟ ಪಡುತ್ತಾರೆ. ಅವರಿಗೆ ಇಷ್ಟವಾಗುವಂತ ಸಿನಿಮಾ ಡೆವಿಲ್. ಸಿಕ್ಕಾಪಟ್ಟೆ ನಿರೀಕ್ಷೆ‌ ಇದೆ. ಇದೀಗ ರಿಲೀಸ್ ಆಗಿರುವಂತ ಮೇಕಿಂಗ್ ವಿಡಿಯೋ ಆ ನಿರೀಕ್ಷೆಗಳನ್ನೆಲ್ಲ ದುಪ್ಪಟ್ಟು ಮಾಡಿದೆ.

Advertisement
Advertisement

ಇವತ್ತು ಅಕ್ಷಯ ತೃತೀಯ. ಐಶ್ವರ್ಯಾ, ಸಂಪತ್ತು ವೃದ್ದಿಯಾಗುವಂತ ಸಮಯ. ಎಲ್ಲೆಡೆ ಅಕ್ಷಯ ತೃತೀಯ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಈ ಸುಸಂದರ್ಭದಲ್ಲಿ ದರ್ಶನ್ ತನ್ನ ಸೆಲೆಬ್ರೆಟಿಗಳ ಸಂತಸವನ್ನು ದುಪ್ಪಟ್ಟು ಮಾಡಿದ್ದಾರೆ. ದರ್ಶನ್ ಸಿನಿಮಾಗಳು ಎಂದರೇನೆ ಇನ್ನಿಲ್ಲದ ಖುಷಿ. ಹಬ್ಬ ಹಬ್ಬ ಮಾಡಿ ಬಿಡುತ್ತಾರೆ ಫ್ಯಾನ್ಸ್. ಡೆವಿಲ್ ಸಿನಿಮಾ ಮೇಲೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆ ಇದೀಗ ಮೇಕಿಂಗ್ ವಿಡಿಯೋ ನೋಡಿದ ಮೇಲೆ ಫಿಲ್ ಆಗಿದೆ ಅಂತಾನೇ ಹೇಳಬಹುದು. ಈಗಾಗಲೇ ಟೈಟಲ್ ಟೀಸರ್ ನಲ್ಲಿ ದರ್ಶನ್ ಅವರ ಲುಕ್ ಅನ್ನು ನೋಡಲಾಗಿತ್ತು. ಇದೀಗ ಡೆವಿಲ್ ಸೆಟ್ ನಲ್ಲಿ ಅವರ ಇನ್ನಷ್ಟು ಲುಕ್ ರಿವಿಲ್ ಆಗಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

Advertisement

Advertisement

ಮೇಕಿಂಗ್ ನೋಡಿದ ಅಭಿಮಾನಿಗಳು ಕಮೆಂಟ್ ಬಾಕ್ಸ್ ತುಂಬಿಸುತ್ತಿದ್ದಾರೆ. ಬಾಸ್ ಗೆ ಜೈಕಾರ ಹಾಕುತ್ತಿದ್ದಾರೆ. ಬೆಂಕಿ ಕೆಂಮೆಟ್ ಪಾಸ್ ಮಾಡುತ್ತಿದ್ದಾರೆ. ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ ಅಂತಿದ್ದಾರೆ. ಡೆವಿಲ್ ಸಿನಿಮಾಗೆ ಮಿಲನಾ ಪ್ರಕಾಶ್ (ಪ್ರಕಾಶ್ ವೀರ್) ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಪ್ರಕಾಶ್ ವೀರ್ 'ತಾರಕ್' ಸಿನಿಮಾವನ್ನು ದರ್ಶನ್ ಜೊತೆಗೆ ಮಾಡಿದ್ದರು. ಈಗ ಅವರ ಅಭಿಮಾನಿಗಳಿಗೆ 'ಡೆವಿಲ್'ನಂತಹ ಮಾಸ್ ಸಿನಿಮಾ ಕೊಡ್ತಾ ಇದ್ದಾರೆ.

Tags :
Advertisement