Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಜೀಂ ಪ್ರೇಮ್‍ಜಿ ಫೌಂಡೇಶನ್ ಕಾರ್ಯ ಪ್ರಪಂಚಕ್ಕೆ ಮಾದರಿ: ಕೆ.ರಾಜಶೇಖರ ಹಿಟ್ನಾಳ

04:14 PM Sep 28, 2024 IST | suddionenews
Advertisement

 

Advertisement

ಸುದ್ದಿಒನ್, ಕೊಪ್ಪಳ, ಸೆಪ್ಟೆಂಬರ್. 28 : ಅಜೀಂ ಪ್ರೇಮ್‍ಜಿ ಫೌಂಡೇಶನ ಮಾಡುತ್ತಿರುವ ಸೇವಾ ಕಾರ್ಯವು ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ 4 ದಿನಗಳ ಮೊಟ್ಟೆ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಸರಕಾರವು ಶಾಲಾ ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ಷೀರಭಾಗ್ಯ,ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಾರದಲ್ಲಿ 2 ದಿನಗಳ ಮೊಟ್ಟೆ ನೀಡುವಂತೆ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ. ಸರಕಾರದ ಇಂತಹ ಮಹತ್ವದ ಯೋಜನೆಗಳಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಶನ ವತಿಯಿಂದ ವಾರದಲ್ಲಿ 4 ದಿನಗಳ ಮೊಟ್ಟೆ ಕೊಡುವ ಕಾರ್ಯಕ್ಕೆ ರೂ.1500ಕೋಟಿಯನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ.ದೇಶದಲ್ಲಿ ಶ್ರೀಮಂತರು ಅನೇಕರಿದ್ದಾರೆ.ಆದರೆ ದಾನ ಮಾಡಬೇಕು ಎಂಬ ಮನೋಭಾವ ಇರುವವರು ಕೇಲವರು ಮಾತ್ರ.ಅಜೀಂ ಪ್ರೇಮ್‍ಜಿಯ ಫೌಂಡೇಶನ್ ಕೇವಲ ಮೊಟ್ಟೆ ಕೊಡುವ ಕೆಲಸಕ್ಕೆ ಮಾತ್ರ ಸಿಮಿತವಾಗಿಲ್ಲಾ,ಇದರ ಜೊತೆಯಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಅಲ್ಲದೇ ಶಾಲೆಗೆ ಶೌಚಾಲಯದ ಅಗತ್ಯವಿರುವುದಾಗಿ ತಿಳಿಸಿದ್ದಾರೆ ಅದನ್ನು ಶೀಘ್ರದೇ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.

Advertisement

 

ಶಿಕ್ಷಕರಾದ ಬೀರಪ್ಪ ಅಂಡಗಿ ಮಾತನಾಡಿ,ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಶಾಲೆಯನ್ನು ಅಭಿವೃದ್ದಿ ಪಡಿಸಲಾಗಿದೆ,ಹಸಿರು ಶಾಲೆಯನ್ನಾಗಿ ಮಾಡಲಾಗಿದೆ.ನಗರ ಪ್ರದೇಶದಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಯಾಗಿದೆ.ಆದರೆ ಶೌಚಾಲಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು,ಅದನ್ನು ನಿರ್ಮಿಸಿ ಕೊಡುವಂತೆ ಸಂಸದರಿಗೆ ಮನವಿ ಮಾಡಿದರು.
ನಗರಸಭೆಯ ಅಧ್ಯಕ್ಷರಾದ ಅಮಜ್ದ ಪಟೇಲ ಮಾತನಾಡಿ,ಶಾಲಾ ಮಕ್ಕಳಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು,ಅವುಗಳನ್ನು ಸಮರ್ಪಕವಾದ ರೀತಿಯಲ್ಲಿ ವಿದ್ಯಾರ್ಥಿಗಳು ಬಳಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರಾದ ಅಜೀಮ ಅತ್ತಾರ,ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿ ಅನಿತಾ,ತಾಲೂಕ ಅಧಿಕಾರಿ ಮಲ್ಲಿಕಾರ್ಜುನ ಗುಡಿ,ನಿಕಟ ಪೂರ್ವ ಅಧಿಕಾರಿ ಹನುಮಂತಪ್ಪ,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಕಾಶಿನಾಥ ಸಿರಿಗೇರಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಮಲ್ಲಿಕಾರ್ಜಿನ ಹ್ಯಾಟಿ ನಿರೂಪಿಸಿದರು. ಶಿಕ್ಷಕರಾದ ಮಹಮ್ಮದ ಆಬೀದ ಹುಸೇನ ಅತ್ತಾರ ಸ್ವಾಗತಸಿ,ನಾಗಪ್ಪ ನರಿ ವಂದಿಸಿದರು.

 

Advertisement
Tags :
Ajeem Premji FoundationbengaluruchitradurgaMP K. Rajasekhara Hitnalasuddionesuddione newsಅಜೀಂ ಪ್ರೇಮ್‍ಜಿ ಫೌಂಡೇಶನ್ಕೆ.ರಾಜಶೇಖರ ಹಿಟ್ನಾಳಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article